ದೇಶದಲ್ಲಿ ಕೊರೊನಾ ಸುನಾಮಿ : ಜಗತ್ತಿನ ಟಾಪ್ 10 ಲಿಸ್ಟ್ ನಲ್ಲಿ ಭಾರತ

0

ನವದೆಹಲಿ : ದೇಶದಲ್ಲೀಗ ಕೊರೊನಾ ಸುನಾಮಿಯೇ ಬೀಸುತ್ತಿದೆ. ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದೆ ದಿನ ದೇಶದಲ್ಲಿ 6,977 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 1.38 ಲಕ್ಷ ದಾಟಿದ್ದು, 4,021 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಭಾರತ ಜಗತ್ತಿನ 10 ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ.

ಜಗತ್ತಿನಾದ್ಯಂತ ಇದುವರೆಗೆ 53,07,298 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, 3,42,070 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ವಿಶ್ವದ ದೊಡ್ಡಣ್ಣ ಅಮೇರಿಕಾ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಅಮೇರಿಕಾದಲ್ಲಿ ಒಟ್ಟು 15,92,599 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ರಷ್ಯಾದಲ್ಲಿ 3,53,427 ಮಂದಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಬ್ರೆಜಿಲ್ ನಲ್ಲಿ 3,47,398 ಮಂದಿ ಸೋಂಕಿತರನ್ನು ಹೊಂದುವ ಮೂಲಕ ವಿಶ್ವದಲ್ಲಿಯೇ ಮೂರನೇ ಸ್ಥಾನದಲ್ಲಿದೆ.

ಇನ್ನು ಯುನೈಟೆಡ್ ಕಿಂಗ್ ಡಮ್ 2,59,563 ಮಂದಿ ಕೊರೊನಾ ಸೋಂಕು ವ್ಯಾಪಿಸಿದ್ರೆ, ಸ್ಪೈನ್ ನಲ್ಲಿ 2,35,772 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಐದನೇ ಸ್ಥಾನದಲ್ಲಿದೆ. ಇನ್ನು ಕೊರೊನಾ ಆತಂಕವನ್ನು ಸೃಷ್ಟಿಸಿದ್ದ ಇಟಲಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 2,29,858ಕ್ಕೆ ಏರಿಕೆಯಾಗಿದ್ದು, 6ನೇ ಸ್ಥಾನದಲ್ಲಿದೆ. ಇನ್ನು ಜರ್ಮನಿ 1,78,570 ಮಂದಿ ಸೋಂಕಿತರನ್ನು ಹೊಂದುವ ಮೂಲಕ 7ನೇ ಸ್ಥಾನದಲ್ಲಿದ್ರೆ ಟರ್ಕಿ 1,56,827 ಮಂದಿ ಕೊರೊನಾ ಪೀಡಿತರ ಮೂಲಕ 8 ಸ್ಥಾನದಲ್ಲಿದೆ.

ಇನ್ನು 9ನೇ ಸ್ಥಾನದಲ್ಲಿರುವ ಫ್ರಾನ್ಸ್ ನಲ್ಲಿ 1,42,204 ಮಂದಿ ಸೋಂಕಿತರರಿದ್ದಾರೆ. ಅಲ್ಲದೇ ಭಾರತದಲ್ಲಿ ಇದುವರೆ 1,38,845 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಈ ಮೂಲಕ ಕೊರೊನಾ ಹುಟ್ಟಿಗೆ ಕಾರಣವಾಗಿದ್ದ ಚೀನಾ, ಇರಾನ್ ದೇಶಗಳನ್ನು ಭಾರತ ಹಿಂದಿಕ್ಕಿದೆ. ಈ ಮೂಲಕ ಭಾರತಕ್ಕೆ ಕೊರೊನಾ ಆತಂಕವನ್ನು ತಂದೊಡ್ಡಿದೆ.

ಭಾರತದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಕಳೆದೊಂದು ವಾರದಿಂದಲೂ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮಾತ್ರವಲ್ಲ ಹಿಂದಿನ ಸಂಖ್ಯೆಗಳಿಗೆ ಹೋಲಿಸಿದ್ರೆ ದುಪ್ಪಟ್ಟಾಗಿದೆ. ಮಹಾರಾಷ್ಟ್ರವೊಂದರಲ್ಲೇ ಅರ್ಧ ಲಕ್ಷದಂಚಿಗೆ ಬಂದು ನಿಂತಿದೆ. ಕೇಂದ್ರ ಸರಕಾರ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಅಗತ್ಯಕ್ರಮಗಳನ್ನು ಕೈಗೊಳ್ಳುತ್ತಿದೆ.

ದೇಶದಲ್ಲಿ 77,000 ಕೊರೊನಾ ಸೋಂಕಿತರರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ 432 ಸಾರ್ವಜನಿಕ, 178 ಖಾಸಗಿ ಲ್ಯಾಬ್ ಸೇರಿದಂತೆ ಒಟ್ಟು 610 ಲ್ಯಾಬ್ ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 1.1 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಪ್ರತಿದಿನ ಸುಮಾರು 1.4 ಲಕ್ಷ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯವಿದ್ದು, ಅದನ್ನು 2 ಲಕ್ಷ ಮಾದರಿಗಳಿಗೆ ಏರಿಕೆ ಮಾಡಲಾಗುತ್ತಿದೆ.

ಬಹುತೇಕ ರಾಜ್ಯಗಳು ರಾಷ್ಟ್ರೀಯ ಕ್ಷಯ ರೋಗ ಮುಕ್ತ ಕಾರ್ಯಕ್ರಮದಡಿ ಕೋವಿಡ್-19 ಮಾದರಿಗಳ ಪರೀಕ್ಷೆಗೆ ಟ್ರೂನಾಟ್ ಯಂತ್ರಗಳನ್ನು ನಿಯೋಜಿಸಿರುವುದಾಗಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

Leave A Reply

Your email address will not be published.