Jaspreet Bumrah to lead India : ಟೀಮ್ ಇಂಡಿಯಾಗೆ ಬುಮ್ರಾ ನಾಯಕ ?


ಲಂಡನ್: 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್, ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದೇ ಕೊನೆ, ನಂತರ ವೇಗದ ಬೌಲರ್ ಒಬ್ಬ ಟೀಮ್ ಇಂಡಿಯಾ ಟೆಸ್ಟ್ ತಂಡದ ಚುಕ್ಕಾಣಿ ಹಿಡಿದಿಲ್ಲ. ಆದರೆ ಈಗ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುವ ಅವಕಾಶ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jaspreet Bumrah to lead India) ಪಾಲಿಗೆ ಒದಗಿ ಬರುವ ಸಾಧ್ಯತೆಗಳಿವೆ. ನಾಯಕ ರೋಹಿತ್ ಶರ್ಮಾ ಕೋವಿಡ್ ಪಾಸಿಟಿವ್”ಗೆ ಒಳಗಾಗಿರುವುದರಿಂದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಗಳು ಕಡಿಮೆ ಎನ್ನಲಾಗ್ತಿದೆ. ಜುಲೈ 1ರಿಂದ ಬರ್ಮಿಂಗ್”ಹ್ಯಾಮ್”ನ ಎಡ್ಜ್’ಬಾಸ್ಟನ್ ಮೈದಾನದಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ (India Vs England test) ರೋಹಿತ್ ಅಲಭ್ಯರಾದರೆ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.

ಸದ್ಯ ಟೆಸ್ಟ್ ತಂಡಕ್ಕೆ ರಿಷಭ್ ಪಂತ್ ಉಪನಾಯಕರಾಗಿದ್ರೂ, ತಂಡದ ನಾಯಕತ್ವ ವಹಿಸುವ ವಿಚಾರದ ಬಂದಾಗ ಅವರನ್ನು ಪರಿಗಣಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗ್ತಿದೆ. ಹೀಗಾಗಿ ಅನುಭವಿ ಬುಮ್ರಾ ಅವರೇ ಟೀಮ್ ಇಂಡಿಯಾ ನಾಯಕತ್ವ ವಹಿಸುವ ಸಾಧ್ಯತೆಯಿದೆ. ಕೋವಿಡ್ ಪಾಸಿಟಿವ್ ಕಾರಣದಿಂದ ಲೀಸೆಸ್ಟರ್”ಶೈರ್ ವಿರುದ್ಧದ ಅಭ್ಯಾಸ ಪಂದ್ಯದ 2ನೇ ಇನ್ನಿಂಗ್ಸ್”ನಲ್ಲಿ ರೋಹಿತ್ ಶರ್ಮಾ ಕ್ರೀಸ್”ಗೆ ಇಳಿದಿರಲಿಲ್ಲ. RAT ಟೆಸ್ಟ್’ನಲ್ಲಿ ರೋಹಿತ್”ಗೆ ಕೋವಿಡ್ ಪಾಸಿಟಿವ್ ರಿಸಲ್ಟ್ ಕಾಣಿಸಿಕೊಂಡಿದ್ದು, ಸದ್ಯ ಲೀಸೆಸ್ಟರ್”ಶೈರ್”ನ ಹೋಟೆಲ್”ನಲ್ಲಿ ಐಸೋಲೇಟ್ ಆಗಿದ್ದಾರೆ.

ತೊಡೆ ಸಂಧು (Groin injury) ಗಾಯದ ಕಾರಣ ಅನುಭವಿ ಆರಂಭಿಕ ಬ್ಯಾಟ್ಸ್”ಮನ್ ಕೆ.ಎಲ್ ರಾಹುಲ್ ಸೇವೆ ಭಾರತ ತಂಡಕ್ಕೆ ಲಭ್ಯವಿಲ್ಲ. ರಾಹುಲ್ ಈಗಾಗಲೇ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದಾರೆ. ಈಗ ನಾಯಕ ರೋಹಿತ್ ಶರ್ಮಾ ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾದರೆ ಭಾರತಕ್ಕೆ ಭಾರೀ ಹಿನ್ನಡೆಯಾಗಲಿದೆ.

ಕೋವಿಡ್ ಕಾರಣದಿಂದ ಕಳೆದ ವರ್ಷ ಮೊಟಕುಗೊಂಡಿದ್ದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವನ್ನು ಭಾರತ ಜುಲೈ ಒಂದರಿಂದ ಆಡಲಿದೆ. 4 ಪಂದ್ಯಗಳು ಈಗಾಗಲೇ ಮುಗಿದಿದ್ದು, ಭಾರತ 2-1ರಲ್ಲಿ ಮುನ್ನಡೆಯಲ್ಲಿದೆ. ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಇಂಗ್ಲೆಂಡ್ ನೆಲದಲ್ಲಿ ಭಾರತ 15 ವರ್ಷಗ ನಂತರ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ. ಹಾಲಿ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ 2007ರಲ್ಲಿ 1-0 ಅಂತರದಲ್ಲಿ ಇಂಗ್ಲೆಂಡ್”ನಲ್ಲಿ ಟೆಸ್ಟ್ ಸರಣಿ ಗೆದ್ದ ನಂತರ ಭಾರತ ಕ್ರಿಕೆಟ್ ಜನಕರ ನಾಡಿನಲ್ಲಿ ಸರಣಿ ಗೆದ್ದಿಲ್ಲ.

ಇದನ್ನೂ ಓದಿ : ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ

ಇದನ್ನೂ ಓದಿ : KL Rahul: ಪ್ರೇಯಸಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟರ್ ಕೆ.ಎಲ್ ರಾಹುಲ್

Jaspreet Bumrah to lead India Vs England Test

Comments are closed.