Special Love : 35 ವರ್ಷಗಳ ಪ್ರೇಮ ಫಲಿಸಿದ್ದು 65 ರ ಹರೆಯ ದಲ್ಲಿ: ಮೇಲುಕೋಟೆಯಲ್ಲೊಂದು ಅಪರೂಪದ ಮದುವೆ

ಆತ ಸೋದರತ್ತೆ ಮಗಳನ್ನೇ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ, ಆದರೆ ಆತನ ಅದೃಷ್ಟ ದಲ್ಲಿ ಆಕೆಯೊಂದಿಗೆ ಬದುಕೋದು ಬರೆದಿರಲಿಲ್ಲ. ಹೀಗಂತ ಆತ ಪ್ರೀತಿಯನ್ನು (Special Love) ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಕೊನೆಗೂ ಗೆದ್ದಿದ್ದು ಆತನ ಪ್ರೀತಿ. ಫಲವಾಗಿ 35 ವರ್ಷದ ಬಳಿಕ ಪ್ರೀತಿಸಿದಾಕೆಯೊಂದಿಗೆ ಸಪ್ತಪದಿ ತುಳಿದು ಹೊಸಬದುಕಿಗೆ ಕಾಲಿಟ್ಟಿದ್ದಾರೆ.

ಇಷ್ಟಕ್ಕೂ ನಾವು ಹೇಳ್ತಿರೋದು ಯಾರ ಬಗ್ಗೆ ಅಂದ್ರಾ ತಮ್ಮ 65 ವಯಸ್ಸಿನಲ್ಲೂ ಜೀವನೋತ್ಸಾಹದೊಂದಿಗೆ ಹೊಸ ಬದುಕಿಗೆ ಕಾಲಿಟ್ಟ ಮೈಸೂರಿನ ಮೇಟಗಹಳ್ಳಿ ಹೆಬ್ಬಾಳದ ಚಿಕ್ಕಣ್ಣ ಮತ್ತು ಜಯಮ್ಮ ದಂಪತಿಯ ಬಗ್ಗೆ. ಚಿಕ್ಕಣ್ಣನ ಸೋದರತ್ತೆ ಮಗಳು ಜಯಮ್ಮ. ಚಿಕ್ಕಂದಿನಲ್ಲೇ ಚಿಕ್ಕಣ್ಣ ಜಯಮ್ಮನನ್ನು ಪ್ರೀತಿಸುತ್ತಿದ್ದರಂತೆ. ಆದರೆ ಮನೆಯವರು ಜಯಮ್ಮನನ್ನು ಬೇರೆಯ ಯುವಕನಿಗೆ ಮದುವೆ ಮಾಡಿ ಕೊಟ್ಟಿದ್ದರಂತೆ. ಆದರೆ 35 ವರ್ಷದ ಹಿಂದೆ ಜಯಮ್ಮ ಬೇರೆಯವರನ್ನು ಮದುವೆಯಾದರೂ ಚಿಕ್ಕಣ್ಣ ಮಾತ್ರ ಆಕೆಯ ನೆನಪಿನಲ್ಲೇ ಇದ್ದರಂತೆ.

ಮದುವೆಯಾದ ಜಯಮ್ಮನಿಗೆ ಒಂದು ಮಗ ಹುಟ್ಟಿದ್ದರೂ ಗಂಡ ಹೆಂಡತಿ ನಡುವೆ ಸಾಮರಸ್ಯ ಇರಲಿಲ್ಲ.‌ಹೀಗಾಗಿ ಇಷ್ಟು ವರ್ಷ ಗಂಡನ ಜೊತೆ ಗುದ್ದಾಡಿದ ಜಯಮ್ಮ ಕೊನೆಗೆ ಗಂಡನನ್ನು ತೊರೆದು ತವರಿಗೆ ವಾಪಸ್ಸಾಗಿದ್ದಳು. ಜಯಮ್ಮ ತವರಿಗೆ ವಾಪಸ್ಸಾಗುತ್ತಿದ್ದಂತೆ ಮತ್ತೆ ತನ್ನ ಪ್ರೀತಿಗಾಗಿ ತುಡಿದ ಚಿಕ್ಕಣ್ಣ ಜಯಮ್ಮನ ಮನವೊಲಿಸಿ ಹಿರಿಯರ‌ ಮನವೊಲಿಸಿ ಪ್ರೀತಿಸಿದ ಜೀವದೊಂದಿಗೆ ಹೊಸ ಬದುಕು ಕಟ್ಟಲು ಸಿದ್ಧವಾಗಿದ್ದಾನೆ.

ಮಂಡ್ಯದ ಮೇಲುಕೋಟೆ ಚೆಲುವರಾಯಸ್ವಾಮಿ ದೇವಾಲಯದಲ್ಲಿ ನಡೆದ ಈ ಅಪರೂಪದ ಮದುವೆಗೆ ಜಯಮ್ಮನ 25 ವರ್ಷದ ಪುತ್ರ ಸೇರಿದಂತೆ ಕುಟುಂಬಸ್ಥರು ಸಾಕ್ಷಿಯಾಗಿದ್ದಾರೆ. ಈ ಜೋಡಿಯ ಮದುವೆ ಪೋಟೋ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಕೊನೆಗೂ ಕಾದು ಕಾದು ಪ್ರೀತಿಯನ್ನು ಒಲಿಸಿಕೊಂಡ ಚಿಕ್ಕಣ್ಣನ ತಾಳ್ಮೆಯನ್ನು ಶ್ಲಾಘಿಷಿದ್ದಾರೆ.

ಚಿಕ್ಕಣ್ಣ ತನ್ನ ಮದುವೆಯ ಬಗ್ಗೆ ಯಾವುದೇ ಮುಜುಗರವಿಲ್ಲ.‌ ಬದಲಾಗಿ ಈ ಇಳಿ ವಯಸ್ಸಿನಲ್ಲಾದರೂ ತಾನು ಪ್ರೀತಿಸಿದ ಜಯಮ್ಮನನ್ನು ಮದುವೆಯಾದ ಖುಷಿಯಿದೆಯಂತೆ. ಜಯಮ್ಮ ಮದುವೆಯಾಗಿ ಹೋದರೂ ಚಿಕ್ಕಣ್ಣ ಮಾತ್ರ. ಮದುವೆಯಾಗದೇ ಸೋದರತ್ತೆ ಮಗಳ ನೆನಪಿನಲ್ಲೇ ಇಷ್ಟು ವರ್ಷ ಒಂಟಿಯಾಗಿದ್ದರಂತೆ. ಹೀಗಾಗಿ ಚಿಕ್ಕಣ್ಣನ ಈ ಪ್ರೀತಿಯನ್ನು ಕಂಡ ಕುಟುಂಬಸ್ಥರು ಕೂಡ ಮದುವೆಗೆ ಒಪ್ಪಿಕೊಂಡಿದ್ದು ಖುಷಿಯಿಂದ ಸಾಂಪ್ರದಾಯಿಕವಾಗಿ ಜಯಮ್ಮ ಹಾಗೂ ಚಿಕ್ಕಣ್ಣ ಮದುವೆ ನೆರವೇರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ : ಏನಿದು ಒಮಿಕ್ರಾನ್​ ರೂಪಾಂತರಿ..? ಇದರ ಲಕ್ಷಣಗಳೇನು..?ಮುಂಜಾಗ್ರತಾ ಕ್ರಮಗಳೇನು..? ಇಲ್ಲಿದೆ ಮಾಹಿತಿ

ಇದನ್ನೂ ಓದಿ : ಕೊನೆಗೂ ಮೌನಮುರಿದ ಅನೇರಿ ವಜನಿ..! ಅನುಪಮಾ ಧಾರವಾಹಿ ಎಂಟ್ರಿ ಖಚಿತ ಪಡಿಸಿದ ನಟಿ

( 35 Years of Love Old couple Marriage In Mandya)

Comments are closed.