kim kardashian : ಅತಿಲೋಕ ಸುಂದರಿಯಾಗಬೇಕೆಂದು ಬರೋಬ್ಬರಿ 40 ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವಳ ಕತೆ ಏನಾಯ್ತು ನೋಡಿ

kim kardashian : ತಾನು ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಎಂಬ ಆಸೆ ಯಾವ ಹೆಣ್ಣಿಗೆ ತಾನೇ ಇರೋದಿಲ್ಲ ಹೇಳಿದೆ. ಇದೇ ರೀತಿ ಅಮೆರಿಕದ ಜನಪ್ರಿಯ ಮಾಡಲ್​​, ಸೆಲೆಬ್ರಿಟಿ ಕಿಮ್​ ಕಾರ್ಡಶಿಯಾನ್​​​ರ ಸೌಂದರ್ಯ ತನಗೂ ಬರಬೇಕು ಎಂಬ ಆಸೆಯಿಂದ ಕಾಸ್ಮೆಟಿಕ್​ ಸರ್ಜರಿಗೆ ಒಳಗಾದ ವರ್ಸೆಸ್​​ನ ಮಾಡೆಲ್​ ಜೆನ್ನಿಫರ್​​ ಪ್ಯಾಪ್ಲೋನಾಗೆ ಇದೀಗ ಸೌಂದರ್ಯಕ್ಕಿಂತ ವ್ಯಕ್ತಿತ್ವ ಮುಖ್ಯ ಎಂಬುದರ ಅರಿವಾಗಿದೆ. ಕಿಮ್​ ಕಾರ್ಡಶಿಯಾನ್​ರಂತೆ ಕಾಣಲು ಆರು ಲಕ್ಷ ಡಾಲರ್​ ಹಣ ವ್ಯಯಿಸಿರುವ ಜೆನ್ನಿಫರ್​ ಇದೀಗ ತನ್ನ ರೂಪವನ್ನು ಪಡೆಯೋದಕ್ಕೂ 1.20 ಲಕ್ಷ ಡಾಲರ್​ ಖರ್ಚು ಮಾಡಬೇಕಿದೆ.


ಜೆನ್ನಿಫರ್​ ಪ್ಯಾಪ್ಲೋನಾ ಬಾಲ್ಯದಿಂದಲೂ ಕಿಮ್​ ಕಾರ್ಡಶಿಯಾನ್​​ರನ್ನು ಆರಾಧಿಸುತ್ತಾ ಬೆಳೆದವರು. 17 ವರ್ಷ ಪ್ರಾಯದವರಿದ್ದಾರೆ ನಾನೇಕೆ ಕಿಮ್​ ಕಾರ್ಡಶಿಯಾನ್​ರಂತೆ ನನ್ನ ರೂಪವನ್ನು ಬದಲಾಯಿಸಿಕೊಳ್ಳಬಾರದು ಎಂಬ ಆಸೆ ಈಕೆಯಲ್ಲಿ ಮೊಳಕೆಯೊಡೆದಿದೆ. ಹೀಗಾಗಿ ಆಕೆ ಹಿಂದೆ ಮುಂದೆ ಯೋಚನೆ ಮಾಡದೇ ಲಕ್ಷಾಂತರ ಹಣ ಖರ್ಚು ಮಾಡಿ ತನ್ನ ರೂಪವನ್ನು ಅಳಿಸಿ ಕಿಮ್​ ಕಾರ್ಡಶಿಯಾನ್​ರಂತೆ ಕಾಣಿಸಲು ಆರಂಭಿಸಿದಳು. ಒಂದಲ್ಲ ಎರಡಲ್ಲ ಬರೋಬ್ಬರಿ 40 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ಜೆನ್ನಿಫರ್​ ಕಿಮ್​ ಕಾರ್ಡಶಿಯಾನ್​ರ ಅವಳಿ ಸಹೋದರಿಯೇನೋ ಎಂಬಂತೆ ಕಾಣಿಸಲು ಆರಂಭಿಸಿದಳು.


ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಜೆನ್ನಿಫರ್​ಗೆ ತನಗೆ ಬೇಕಿದ್ದ ಪಬ್ಲಿಸಿಟಿ ಸಿಕ್ಕಿತು. ದೊಡ್ಡ ದೊಡ್ಡ ಸುದ್ದಿ ಮಾಧ್ಯಮಗಳು ಈಕೆಯ ಸಂದರ್ಶನ ಪಡೆದರು. ಸೋಶಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಯ್ತು. ಆದರೆ ಜೆನ್ನಿಫರ್​ ಸ್ವಂತ ವ್ಯಕ್ತಿತ್ವ ಅನ್ನುವುದು ಇಲ್ಲವಾಗಿ ಹೋಯ್ತು. ಕೇವಲ ಈಕೆ ಕಿಮ್​ ಕಾರ್ಡಶಿಯಾನ್​ರ ತದ್ರೂಪಿ ಎನ್ನುವುದು ಬಿಟ್ಟರೆ ಜೆನ್ನಿಫರ್​ ಎಂಬ ವ್ಯಕ್ತಿತ್ವವನ್ನೇ ಜನರು ಮರೆಯಲು ಆರಂಭಿಸಿದರು.


ನನಗೆ ಆರಂಭದಲ್ಲಿ ಎಲ್ಲವೂ ಖುಷಿ ಕೊಡ್ತು. ನಾನು ಶಸ್ತ್ರ ಚಿಕಿತ್ಸೆಗಳ ಮೇಲೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗಿದೆ. ಆದರೆ ನನಗೀಗ ಈ ರೂಪ ಸಾಕು ಎನಿಸಿದೆ. ನನಗೆ ನನ್ನ ಸ್ವಂತ ಐಡೆಂಟಿಟಿ ಮುಖ್ಯ, ಹೀಗಾಗಿ ನಾನು ಪುನಃ ಲಕ್ಷಾಂತರ ಹಣ ವ್ಯಯಿಸಿ ಮೊದಲಿನಂತೆ ಆಗಲು ಹೊರಟಿದ್ದೇನೆ. ಶೀಘ್ರದಲ್ಲಿಯೇ ನಾನು ನಾನಾಗಿ ಮರು ಜನ್ಮ ಪಡೆಯಲಿದ್ದೇನೆ ಎಂದು ಜೆನ್ನಿಫರ್​ ಹೇಳಿದ್ದಾರೆ.

ಇದನ್ನು ಓದಿ : ಸಿಎಂ ಕುರ್ಚಿಗೆ ಕಂಟಕವಾಗುತ್ತಾ ಮೀಸಲಾತಿ ಹೋರಾಟ : ಸಿಎಂ ಬಸವರಾಜ್ ಬೊಮ್ಮಾಯಿಗೆ ಎದುರಾಗ್ತಿದೆ ಡೆಡ್ ಲೈನ್ ಕಾಟ

ಇದನ್ನೂ ಓದಿ : Actor Sudeep ವಿರುದ್ಧ ಅವಹೇಳನಕಾರಿ ಮಾತು : ಸೈಬರ್ ಕ್ರೈಂ ಮತ್ತು ಆಯುಕ್ತರಿಗೆ ಭಾಮಾ ಹರೀಶ್ ದೂರು

woman spent 600k to be kim kardashian now paying 120k to detransition

Comments are closed.