CET ಟಾಪ್ 10ರಲ್ಲಿ ಆಳ್ವಾಸ್ ಕಾಲೇಜಿಗೆ 5 ರಾಂಕ್ : BNYS ನಲ್ಲಿ ಅರ್ನವ್ ಅಯ್ಯಪ್ಪಗೆ ಪ್ರಥಮ ರಾಂಕ್

0

ಮೂಡುಬಿದಿರೆ : ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಯಲ್ಲಿ ರಾಜ್ಯದ ಪ್ರತಿಷ್ಠಿತ ಮೂಡಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜು ವಿಶಿಷ್ಟ ಸಾಧನೆ ಮಾಡಿದೆ. ಸಿಇಟಿಯ 6 ವಿಭಾಗಗಳ ಪೈಕಿ 5ರಲ್ಲಿ ಟಾಪ್ 10 ಸಾಲಿನಲ್ಲಿ ಕಾಲೇಜು 5 ರಾಂಕ್ ಗಳನ್ನು ಪಡೆದು ಕೊಂಡಿದೆ.

ಅದ್ರಲ್ಲೂ ಆಳ್ವಾಸ್ ಕಾಲೇಜಿನ ಅನರ್ವ್ ಅಯ್ಯಪ್ಪ ಒಟ್ಟು 180 ಅಂಕಗಳಲ್ಲಿ 174 ಅಂಕಗಳನ್ನು ಪಡೆದಿದ್ದು, ಮೆಡಿಕಲ್ ವಿಭಾಗದ ಬಿಎನ್ವೈಎಸ್ನಲ್ಲಿ ಪ್ರಥಮ ರಾಂಕ್ ಪಡೆದುಕೊಂಡಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.

ಅರ್ನವ್ ಅಯ್ಯಪ್ಪ ಅವರು ಬಿ.ಎಸ್ಸಿ ಕೃಷಿ ವಿಭಾಗದಲ್ಲಿ ನಾಲ್ಕನೇ ರಾಂಕ್, ವೆಟರ್ನರಿ ಸೈನ್ ವಿಭಾಗದಲ್ಲಿ 5ನೇ ರಾಂಕ್, ಬಿ ಫಾರ್ಮ್ ಹಾಗೂ ಡಿ ಫಾರ್ಮದಲ್ಲಿ ತಲಾ 7ನೇ ರಾಂಕ್ ಹಾಗೂ ಎಂಜಿನಿಯರಿಂಗ್ ನಲ್ಲಿ 81ನೇ ರಾಂಕ್ ಪಡೆದುಕೊಂಡಿದ್ದಾರೆ.

ಸಿಇಟಿಯ 174 ಅಂಕಗಳಲ್ಲಿ ಜೀವಶಾಸ್ತ್ರ 60 ಅಂಕಗಳಲ್ಲಿ 60, ರಸಾಯನಶಾಸ್ತ್ರ 60 ರಲ್ಲಿ 60 ಹಾಗೂ ಭೌತಶಾಸ್ತ್ರದಲ್ಲಿ 60 ರಲ್ಲಿ 54 ಅಂಕಗಳನ್ನು ಪಡೆದಿದ್ದಾರೆ.

ಆಳ್ವಾಸ್ ಕಾಲೇಜಿನ 21 ವಿದ್ಯಾರ್ಥಿಗಳಿಗೆ 150ಕ್ಕಿಂತ ಹೆಚ್ಚು ಅಂಕ:
ಈ ಬಾರಿ ಸಿಇಟಿಯಲ್ಲಿ 160 ರಿಂದ 170 ಅಂಕಗಳನ್ನು 6 ಮಂದಿ, 150 ರಿಂದ 160 ಅಂಕಗಳನ್ನು 14 ಹಾಗೂ 21 ಮಂದಿ 150 ಕ್ಕಿಂತಲೂ ಅಧಿಕ ಅಂಕಗಳಿಸುವ ಮೂಲಕ ಸಿಇಟಿಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಇನ್ನು 654 ಮಂದಿ ವಿದ್ಯಾರ್ಥಿಗಳು 100 ಅಂಕಗಳಿಗೂ ಮೇಲ್ಪಟ್ಟ ಅಂಕ ಗಳಿಕೆಯ ಸಾಧನೆ ಮಾಡಿದ್ದಾರೆ.

ಆಳ್ವಾಸ್ ಸಿಇಟಿ ಸಾಧಕರು: ಅರ್ನವ್ ಅಯ್ಯಪ್ಪ -174 ಅಂಕಗಳು, ವರುಣ್ ತೇಜ್ -164, ಪಿ.ಎಸ್. ರವೀಂದ್ರ-164, ಅಭಿಷೇಕ್ ಸಂಗಪ್ಪ -164, ಅನಘಾ ತೆನಗಿ-163, ಅನಘ್ರ್ಯ ಕೆ.-163, ಬಸವೇಶ್ ಡಿ-160, ಖುಷಿ ಗೋಖಲೆ -160.

ಹರ್ಷ ವಿ-159, ದೀಪಕ್ ಬಾಬು ಪಿ-158, ಪೂಜಾ ಜಿ.ಎಸ್.-156, ಚಿನ್ಮಯಿ ಆರ್.-155, ಅನಿಲ್ ಬನ್ನಿಶೆಟ್ಟಿ-155, ಅವಿನಾಶ್ -154, ಚಂದು ಸೇನ್ ದಿವಾನ್ ಸಾಬ್ ಪೈಲ್ವಾನ್-154, ಜೈಪ್ರಕಾಶ್ ಜಿ.ಬಿ.- 152, ಗಾಯತ್ರೀ ಜೆ.ಎಸ್.-152, ಕಲ್ಪನಾ ಎ-151, ಜೀಯಪ್ಪ ರೆಡ್ಡಿ ಜಿ.ಎಸ್.-150, ಹೇಮಂತ್ ಎಂ.ಬಿ-150, ತೇಜಸ್ ಕೆ.ಕೆ- 150 ಅಂಕಗಳನ್ನು ಪಡೆದಿದ್ದಾರೆ.

ಸಿಇಟಿ ಪರೀಕ್ಷೆಯಲ್ಲಿ 50 ರಾಂಕ್ ಒಳಗೆ 11 ಮಂದಿ, 100ರ ಒಳಗೆ 27 ಮಂದಿ, 500 ರೊಳಗೆ 134 ಮಂದಿ, 1000 ರಾಂಕ್ ಒಳಗೆ 325 ಮಂದಿ ,5 ಸಾವಿರ ರಾಂಕ್ ಒಳಗೆ 1,311 ಹಾಗೂ 10 ಸಾವಿರದ ಒಳಗೆ 2,343 ವಿದ್ಯಾರ್ಥಿಗಳು ರಾಂಕ್ ಪಡೆದ ಸಾಧನೆಯನ್ನು ಮಾಡಿದ್ದಾರೆ.

ಪ್ರತೀ ವರ್ಷವೂ ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಿರುವ ಆಳ್ವಾಸ್ ಕಾಲೇಜು ಈ ಬಾರಿಯೂ ತನ್ನ ಪರಂಪರೆಯನ್ನು ಮುಂದುವರಿಸಿದೆ ಎಂದು ಡಾ. ಮೋಹನ್ ಆಳ್ವ ಸಂತಸ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಬಿಎನ್ವೈಎಸ್ನಲ್ಲಿ ಮೊದಲ ರಾಂಕ್ ಪಡೆದ ಸಾದಕ ಅರ್ನವ್ ಅಯ್ಯಪ್ಪ ಅವರನ್ನು ಡಾ. ಆಳ್ವ ಅಭಿನಂಧಿಸಿದರು.

ಪಿಯುಸಿ ಪ್ರಾಂಶುಪಾಲ ರಮೇಶ್ ಶೆಟ್ಟಿ, ಡೀನ್ಗಳಾದ ಮಹಮ್ಮದ ಸದಾಕತ್, ಚಂದ್ರಶೇಖರ್ ಅರಸ್, ಜಾನ್ಸಿ ಪಿಎನ್, ವಿಭಾಗ ಮುಖ್ಯಸ್ಥರುಗಳಾದ ವೆಂಕಟೇಶ್ ನಾಯಕ್, ಯೋಗೀಶ್ ಬೇಡೇಕರ್, ವಿದ್ಯಾ ಸದಾಶಿವ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪಿ.ಆರ್.ಒ ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

ವೈದ್ಯನಾಗುವಾಸೆ : ಅರ್ನವ್ ಅಯ್ಯಪ್ಪ
ಕೊಡಗು ಮಡಿಕೇರಿಯ ವಕೀಲ ಪ್ರೀತಂ ಪಿ.ಯು ಹಾಗೂ ಹೇಮಾ ಪಿ. ದಂಪತಿಯ ಪುತ್ರ ನಾಗಿರುವ ಅರ್ನವ್ ಅಯ್ಯಪ್ಪಗೆ ಮುಂದೆ ನೀಟ್ ಬರೆದು ವೈದ್ಯನಾಗುವ ಕನಸಿದೆ. ನೀಟ್ ತಯಾರಿ ನಡೆಸುತ್ತಿರುವ ಅರ್ನವ್ ನಿತ್ಯ ಅಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಜೊತೆಗೆ ದಿನಕ್ಕೆ ಮೂರು ಗಂಟೆ ಹೆಚ್ಚುವರಿಯಾಗಿ ಸಿಇಟಿ ಓದಿಗೆ ಮೀಸಲಿಡುತ್ತಿದ್ದೆ.

ಮುಂದೆ ನೀಟ್ ನಲ್ಲಿಯೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಭವಿಷ್ಯದಲ್ಲಿ ನನ್ನ ಅಮ್ಮನ ಆಸೆಯಂತೆ ವೈದ್ಯೆನಾಗಬೇಕೆಂದಿದ್ದೇನೆ. ನಿರಂತರ ಓದು ಕೊರೋನಾದಿಂದ ಹಿನ್ನಡೆಯಾಗಿದೆ ಎನ್ನುವವರದ್ದು ಬರೇ ನೆಪ ಮಾತ್ರ. ಕೊಡಗಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ.95, ಪಿಯುಸಿಯಲ್ಲೂ ಶೇ.98 ಪಡೆದಿದ್ದ ಅರ್ನವ್ ಈ ಸಾಧನೆಯ ಹಿನ್ನೆಲೆಯಲ್ಲಿ ಆಳ್ವಾಸ್ ಕೊಡುಗೆ ಮಹತ್ವದ್ದು ಎಂದರು.

Leave A Reply

Your email address will not be published.