Annual Examination timetable: 5 ಮತ್ತು 8 ನೇ ತರಗತಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಬೆಂಗಳೂರು: (Annual Examination timetable) ರಾಜ್ಯದ 5 ಮತ್ತು 8 ನೇ ತರಗತಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದ್ದು, ಪ್ರಕಟಿತ ವೇಳಾಪಟ್ಟಿಯಂತೆ ಮಾರ್ಚ್‌ 13 ರಿಂದ 5 ಮತ್ತು 8 ನೇ ತರಗತಿಯ ಪರೀಕ್ಷೆಗಳು ಆರಂಭಗೊಳ್ಳಲಿವೆ ಎಂದು ತಿಳಿದುಬಂದಿದೆ.

ಮಾರ್ಚ್‌ 6 ರಿಂದ ಮಾರ್ಚ್‌ 10 ರವರಗೆ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲಾಗುತ್ತದೆ. ವಿಶೇಷ ಶಾಲೆಗಳ ವಿದ್ಯಾರ್ಥಿಗಳಿಗೆ ಮಂಡಳಿಯಿಂದ ಸರಬರಾಜು ಅಡುವ ಪ್ರಶ್ನೋತ್ತರ ಪತ್ರಿಕೆಗಳನ್ನು ಬಳಸಿ ಶಾಲಾ ಹಂತದಲ್ಲಿ ಹಿಂದಿನ ಸಾಲುಗಳಲ್ಲಿ ಮೌಲ್ಯಾಂಕನ ನಡೆಸುವುದಾಗಿ ತಿಳಿಸಲಾಗಿದೆ.

5 ಮತ್ತು 8 ನೇ ತರಗತಿ ವಾರ್ಷಿಕ ವೇಳಾಪಟ್ಟಿ

5ನೇ ತರಗತಿ ವೇಳಾಪಟ್ಟಿ
ದಿನಾಂಕ 15-03-2023, ಬುಧವಾರ – ಪ್ರಥಮ ಭಾಷೆ – ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು.
ದಿನಾಂಕ 16-03-2023, ಗುರುವಾರ, ಕೋರ್ ವಿಷಯ – ಗಣಿತ.
ದಿನಾಂಕ 17-03-2023, ಶುಕ್ರವಾರ – ಕೋರ್ ವಿಷಯ ಪರಿಸರ ಅಧ್ಯಯನ.
ದಿನಾಂಕ 18-03-2023, ಶನಿವಾರ – ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ.

8 ನೇ ತರಗತಿ ವೇಳಾಪಟ್ಟಿ:
ದಿನಾಂಕ 13-03-2023ರ ಸೋಮವಾರ: ಕನ್ನಡ, ಇಂಗ್ಲೀಷ್, ಇಂಗ್ಲೀಷ್ (NCERT) , ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು ಮತ್ತು ಸಂಸ್ಕೃತ
ದಿನಾಂಕ 14-03-2023, ಮಂಗಳವಾರ: ದ್ವಿತೀಯ ಭಾಷೆ – ಇಂಗ್ಲೀಷ್ ಮತ್ತು ಕನ್ನಡ
ದಿನಾಂಕ 15-03-2023, ಬುಧವಾರ: ತೃತೀಯ ಭಾಷೆ – ಹಿಂದಿ, ಹಿಂದಿ (NCERT) , ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ ಮತ್ತು ತುಳು.
ದಿನಾಂಕ 16-03-2023, ಗುರುವಾರ: ಕೋರ್ ವಿಷಯ – ಗಣಿತ.
ದಿನಾಂಕ 17-03-2023, ಶುಕ್ರವಾರ: ಕೋರ್ ವಿಷಯ ವಿಜ್ಞಾನ.
ದಿನಾಂಕ 18-03-2023, ಶನಿವಾರ: ಕೋರ್ ವಿಷಯ ಸಮಾಜ ವಿಜ್ಞಾನ.

ಇದನ್ನೂ ಓದಿ : “E Guru” training: ಕುಂದಾಪುರ: ಪಿಯು ವಿದ್ಯಾರ್ಥಿಗಳಿಗೆ “ಇ ಗುರು” ತರಬೇತಿ

ಇದನ್ನೂ ಓದಿ : Seats reserved for Kannadigas: ಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಶೇಕಡಾ 25ರಷ್ಟು ಸೀಟ್ ಕನ್ನಡಿಗರಿಗೆ ಮೀಸಲು

ಇದನ್ನೂ ಓದಿ : New guidelines for schools: 10, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಶಾಲೆಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ

8 ನೇ ತರಗತಿಯಲ್ಲಿ ಪ್ರಥಮ ಭಾಷೆ ಇಂಗ್ಲಿಷ್‌ (NCERT) ಮತ್ತು ತೃತಿಯ ಭಾಷೆ ಹಿಂದಿ (NCERT) ವಿಷಯಗಳು ಆದರ್ಶ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ.

Annual Examination timetable: 5th and 8th class annual examination timetable published

Comments are closed.