ನಾಳೆಯಿಂದ ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು :hijab controversy: ರಾಜ್ಯದಲ್ಲಿ ಹಿಜಬ್​ ಹಾಗೂ ಕೇಸರಿ ಶಾಲು ನಡುವಿನ ವಿವಾದವು ತಾರಕಕ್ಕೇರಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಹೋರಾಟವು ಹಿಂಸಾಚಾರ ರೂಪವನ್ನು ಪಡೆದುಕೊಂಡಿದೆ. ಹೈಕೋರ್ಟ್ ಆದೇಶಕ್ಕೂ ಮುನ್ನವೇ ಕೇಸರಿ ಶಾಲು ಹಾಗೂ ಹಿಜಬ್​ ನಡುವಿನ ಗಲಾಟೆಯು ಕಲ್ಲು ತೂರಾಟದವರೆಗೆ ಹೋಗಿದೆ. ಶಿವಮೊಗ್ಗ, ಉಡುಪಿ, ದಾವಣೆಗೆರೆ ಸೇರಿದಂತೆ ಹಲವಡೆಗಳಲ್ಲಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ.


ರಾಜ್ಯದಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಗೂ ಹಿಜಬ್​ ನಡುವಿನ ವಿವಾದವನ್ನು ಹಿಂಸಾಚಾರದ ರೂಪಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರವು ನಾಳೆಯಿಂದ ಮೂರು ದಿನಗಳ ಕಾಲ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ – ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿದೆ. ಎಲ್ಲಾ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಇಂಜಿನಿಯರಿಂಗ್​, ವಿಶ್ವವಿದ್ಯಾಲಯ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಬುಧವಾರ, ಗುರುವಾರ ಹಾಗೂ ಶುಕ್ರವಾರ ಬಂದ್​ ಇರಲಿದೆ.

ಇನ್ನು ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ನಾಳೆಯಿಂದ ರಾಜ್ಯದಲ್ಲಿ ಎಲ್ಲಾ ಶಾಲಾ – ಕಾಲೇಜುಗಳು ಮೂರು ದಿನಗಳ ಕಾಲ ಬಂದ್​ ಇರಲಿದೆ. ಸಮವಸ್ತ್ರ ವಿವಾದ ರಾಜ್ಯದಲ್ಲಿ ತಾರಕಕ್ಕೇರಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಈ ನಿರ್ಧಾರ ಕೈಗೊಂಡಿದ್ದಾರೆ.ಈ ಸಂದರ್ಭದಲ್ಲಿ ಯಾರು ಕೂಡ ಸಮವಸ್ತ್ರ ವಿವಾದದ ಪ್ರತಿಭಟನೆಗಳನ್ನು ನಡೆಸುವಂತಿಲ್ಲ. ರಾಜ್ಯ ಹೈಕೋರ್ಟ್​ನಲ್ಲಿ ಈ ಸಂಬಂಧ ಚರ್ಚೆ ನಡೆಯುತ್ತಿದೆ. ಹೈಕೋರ್ಟ್ ಸೂಕ್ತವಾದ ಆದೇಶವನ್ನು ನೀಡುತ್ತದೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ಕಾಯಬೇಕು. ರಾಜ್ಯದಲ್ಲಿ ಸಮವಸ್ತ್ರ ವಿವಾದ ಅನ್ನೋದು ಟ್ರೆಂಡ್​ ರೀತಿಯಲ್ಲಿ ಆಗಬಿಟ್ಟಿದೆ. ಯುವಕರು ಈ ರೀತಿ ಶಾಂತಿ ಕದಡುವ ಕಾರ್ಯವನ್ನು ಮಾಡಬಾರದು ಎಂದು ಹೇಳಿದರು. ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.

ಇದನ್ನು ಓದಿ :22 students wearing hijab : ಕುಂದಾಪುರದಲ್ಲಿ ಸರಕಾರದ ಆದೇಶಕ್ಕೆ ದೋಂಟ್‌ ಕೇರ್‌ : ಹಿಜಾಬ್‌ ಧರಿಸಿ ಬಂದ 22 ವಿದ್ಯಾರ್ಥಿನಿಯರು

ಇದನ್ನೂ ಓದಿ : Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

hijab controversy :Vacation to school - colleges for three days from tomorrow

Comments are closed.