KCET 2022 Registration : ಇಂಜಿನಿಯರಿಂಗ್​ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

KCET 2022 Registration : ಕರ್ನಾಟಕ ಪರೀಕ್ಷಾ ಪ್ರಾಧಿಕಾರ, KEA ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2022 ಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಕರ್ನಾಟಕದ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯಲು ಬಯಸುವ ಆಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್, kea ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. kar.nic.in ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು ಜೂನ್ 16 ರಿಂದ 18, 2022 ರವರೆಗೆ ನಡೆಯಲಿದೆ. ಪರೀಕ್ಷೆಯನ್ನು ಎರಡು ಪಾಳಿಗಳಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ KCET 2022 ಹಾಲ್ ಟಿಕೆಟ್‌ಗಳನ್ನು ಮೇ 30, 2022 ರಿಂದ ಡೌನ್‌ಲೋಡ್ ಮಾಡಬಹುದು.


ಕೆಸಿಇಟಿ 2022ಗೆ ಅರ್ಜಿ ಸಲ್ಲಿಸುವ ಬಗ್ಗೆ ಇಲ್ಲಿದೆ ಮಾಹಿತಿ :


ಕೆಸಿಇಟಿಯ ಅಧಿಕೃತ ವೆಬ್​ಸೈಟ್​ kea.kar.nic.in.ಗೆ ಭೇಟಿ ಕೊಡಿ
ಹೋಮ್​ ಪೇಜ್​​ನಲ್ಲಿ KCET 2022 Registration ಲಿಂಕ್​ ಮೇಲೆ ಕ್ಲಿಕ್​ ಮಾಡಿ.
ಇಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ನೀಡಿ ರಿಜಿಸ್ಟರ್​ ಮಾಡಿಕೊಳ್ಳಿ. ಇಮೇಲ್​ ಐಡಿ, ಫೋನ್​ ನಂಬರ್​ ಸೇರಿದಂತೆ ಎಲ್ಲಾ ವಿವರಗಳನ್ನು ಒದಿಗಿಸಿ.
ಅರ್ಜಿಯನ್ನು ತುಂಬಲು ಮತ್ತೊಮ್ಮೆ ಲಾಗಿನ್​ ಆಗಿರಿ.
ಈಗ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಅರ್ಜಿಯನ್ನು ತುಂಬಿರಿ.
ಪರೀಕ್ಷಾ ಶುಲ್ಕವನ್ನು ಪಾವತಿಸಿ.
ಮುಂದಿನ ಬಳಕೆಗಾಗಿ ಅರ್ಜಿ ಸಲ್ಲಿಸಿದ ಬಳಿಕ ಪ್ರಿಂಟ್​ ತೆಗೆದಿಟ್ಟುಕೊಳ್ಳಿ.

CGPSC Recruitment 2022 : ಸಿಜಿಪಿಎಸ್​ಸಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಛತ್ತೀಸ್‌ಗಢ ಸಾರ್ವಜನಿಕ ಸೇವಾ ಆಯೋಗವು (CGPSC Recruitment 2022) ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಸಾರಿಗೆ ಸಬ್ ಇನ್‌ಸ್ಪೆಕ್ಟರ್ (ಟೆಕ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಹುದ್ದೆಗಳಿಗೆ ಅರ್ಹತೆ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮೇ 14ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಇಚ್ಛಿಸುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಸಂಬಂಧಿಸಿದ ಕೆಲವು ಮಹತ್ವದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

20 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿಯನ್ನು ನಡೆಸಲಾಗುತ್ತಿದೆ.ಖಾಲಿ ಇರುವ 20 ಹುದ್ದೆಗಳ ಪೈಕಿ 2 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, 15 ಸಾರಿಗೆ ಸಬ್‌ ಇನ್‌ಸ್ಪೆಕ್ಟರ್‌ ಮತ್ತು 3 ಬ್ಯಾಕ್‌ಲಾಗ್‌ ಹುದ್ದೆಗಳಾಗಿವೆ.

ವಯಸ್ಸಿನ ಮಿತಿ : ಜನವರಿ 1, 2022 ರಂತೆ 24 ವರ್ಷದಿಂದ 30 ವರ್ಷ ವಯಸ್ಸಿನವರಾಗಿರಬೇಕು

.
ಅರ್ಜಿ ಶುಲ್ಕಕ್ಕೆ ಸಂಬಂಧಿಸಿದಂತೆ, ಛತ್ತೀಸ್‌ಗಢದ ಹೊರಗಿನ ಅಭ್ಯರ್ಥಿಗಳು ₹ 400 ಶುಲ್ಕವನ್ನು ಪಾವತಿಸಬೇಕು, ಆದರೆ ರಾಜ್ಯದೊಳಗಿನವರು ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ಪಡೆಯಲಿದ್ದಾರೆ.

ಹೊರ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳ ಬಗ್ಗೆಯೂ ಇಲ್ಲಿದೆ ವಿವರ :

psc.cg.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
ಹೋಮ್​ ಪೇಜ್​​ನಲ್ಲಿರುವ ಆನ್​ಲೈನ್​ ಅಪ್ಲಿಕೇಶನ್​ ಆಯ್ಕೆ ಮೇಲೆ ಕ್ಲಿಕ್​ ಮಾಡಿ.
ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ರಿಜಿಸ್ಟರ್​ ಆಗಿ ಲಾಗಿನ್ ಆಗಬೇಕು.
ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ನಮೂದಿಸಿ. ಕೇಳುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ.
ಅಪ್ಲಿಕೇಶನ್​ ಶುಲ್ಕವನ್ನು ಪಾವತಿ ಮಾಡಿ.
ಮುಂದಿನ ಬಳಕೆಗಾಗಿ ಅರ್ಜಿ ಸಲ್ಲಿಸಿದ ಕಾಪಿಯನ್ನು ಪ್ರಿಂಟ್​ ತೆಗೆದಿಟ್ಟುಕೊಳ್ಳಿ.

ಇದನ್ನು ಓದಿ : Anganwadi Recruitment 2022 : ಅಂಗನವಾಡಿ ಕಾರ್ಯಕರ್ತರು, ಸಹಾಯಕರ ಖಾಲಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : UPSC, ESIC, BOB, SBI JOBS : ಸರಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿಗೆ ಸುವರ್ಣಾವಕಾಶ

KCET 2022 Registration Begins at kea.kar.nic.in; Here’s How to Apply

Comments are closed.