Yoga Wheel Benefits : ಯೋಗಾ ವೀಲ್‌ನ ಪ್ರಯೋಜನಗಳೇನೆಂಬುದು ನಿಮಗೆ ಗೊತ್ತೇ? ಯೋಗಾ ವೀಲ್ ಅನ್ನು ಹೇಗೆಲ್ಲಾ ಬಳಸಬಹುದು ಇಲ್ಲಿದೆ ನೋಡಿ

ಯೋಗಾ ಮಾಡುವುದರಿಂದ (Yoga Wheel Benefits) ಹಲವಾರು ಆರೋಗ್ಯದ ಪ್ರಯೋಜನಗಳಿವೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಪ್ರಯೋಜನಗಳೂ ಇದೆ. ಒತ್ತಡ ಮತ್ತು ಆತಂಕಗಳಿಂದ ಫಿಟ್‌ ಆಗಿರಲು ಯೋಗ ಸಹಾಯಮಾಡುತ್ತದೆ. ಇದು ಎಲ್ಲಾ ವಯೋಮಾನದವರಿಗೂ ಟನ್ನ್‌ ಗಟ್ಟಲೇ ಲಾಭವನ್ನೇ ನೀಡುತ್ತದೆ. ಆದ್ದರಿಂದ ಇದು ಪ್ರತಿಯೊಬ್ಬರ ಫಿಟ್‌ನೆಸ್‌ ದಿನಚರಿಗೆ ಅಗತ್ಯವಾದ ಅಂಶವಾಗಿದೆ. ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ನೀವು ವಿವಿಧ ಪರಿಕರಗಳನ್ನು ಬಳಸಿಕೊಂಡು ನಿಯಮಿತ ಯೋಗ ಆಸನಗಳೊಂದಿಗೆ ಮತ್ತುಷ್ಟು ಪ್ರಯೋಗಗಳನ್ನು ಮಾಡಬಹುದು.

ಪರಿಕರಗಳನ್ನು ಬಳಸಿಕೊಂಡು ಮಾಡುವ ಯೋಗಾಸನಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಸುವ ಪರಿಕರವೆಂದರೆ ಯೋಗಾ ವೀಲ್‌(ಯೋಗಾ ಚಕ್ರ). ಇದು ಪೊಳ್ಳಾದ ವೃತ್ತಾಕಾರದ ಒಂದು ಸಾಧನವಾಗಿದ್ದು, ಬೆನ್ನು, ಕುತ್ತಿಗೆ, ಮತ್ತು ಭುಜದ ಸ್ನಾಯುಗಳನ್ನು ವಿಸ್ತರಿಸಲು ಮತ್ತು ಬಿಡುಗಡೆಗೊಳಿಸಲು ಸಹಾಯಮಾಡುತ್ತದೆ. ಇದನ್ನು ಸಮತೋಲನ ಭಂಗಿಗಳನ್ನು ಸವಾಲಾಗಿ ನಿರ್ವಹಿಸಲು ಸಹ ಇದನ್ನು ಬಳಸಲಾಗುತ್ತದೆ.

ಇದನ್ನೂ ಓದಿ : Yoga Tips : ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಏನು ಮಾಡಬೇಕು ಗೊತ್ತೇ? ಇದಕ್ಕೆ ಉತ್ತರ ಯೋಗಾಸನ

ಆಲಿಯಾ ಭಟ್‌, ರಕುಲ್‌ ಪ್ರೀತ್‌ ಸಿಂಗ್‌ ಮತ್ತು ಕರೀನಾ ಕಪೂರ್ ಖಾನ್‌ ಅವರಂತಹ ಸೆಲಿಬ್ರಿಟಿಗಳಿಗೆ ತರಬೇತಿ ನೀಡುವ ಯೋಗ ತಜ್ಞರಾದ ಅಂಶುಕಾ ಪರ್ವಾನಿ, ಈ ಸಾಧವನ್ನು ಮೊದಲು 1978 ರಲ್ಲಿ ಕಂಡುಹಿಡಿಯಲಾಯಿತು ಎಂದು ಹಂಚಿಕೊಂಡಿದ್ದಾರೆ.

‘ಇದು ಅಂದಿನಿಂದ ನಮ್ಮ ಯೋಗಾಭ್ಯಾಸದಲ್ಲಿ ಸಹಾಯ ಮಾಡುವ ಅವಕಾಶವನ್ನು ನಮ್ಮಲಿ ಅನೇಕರಿಗೆ ನೀಡಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ನಂತರ ಅವರು ಆಸನಗಳನ್ನು ಮಾಡುತ್ತಾ ಯೋಗಾ ಚಕ್ರವನ್ನು ಬಳಸುವುದರಿಂದಾಗುವ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ.

  • ಇದು ಸವಾಲಿನ ಸ್ಟ್ರೆಚ್‌ಗಳನ್ನು ಮಾಡಲು ಸಹಾಯ ಮಾಡುತ್ತದೆ.
  • ಈ ಆಸನಗಳನ್ನು ಮಾಡುವಾಗ ನಿಮ್ಮನ್ನು ನೇರವಾಗಿ ಇರಿಸಬಹುದು ಮತ್ತು ನಿಮ್ಮ ದೇಹಕ್ಕೆ ಬೆಂಬಲವನ್ನು ನೀಡುತ್ತದೆ. ಇದು ಯೋಗಾ ಮಾಡುವಾಗ ಆಗುವ ಗಾಯಗಳನ್ನು ತಡೆಯಲು ಸಹಾಯ ಮಾಡುತ್ತದೆ.
  • ಯೋಗಾ ಚಕ್ರವನ್ನು ಬಳಸುವುದರಿಂದ ಫ್ಲೆಕ್ಸಿಬಿಲಿಟಿ ಯನ್ನು ಸ್ಥಿರವಾಗಿ ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ಮತ್ತು ಗಾಯಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  • ಇದು ಸ್ನಾಯುಗಳಲ್ಲಿನ ನೋವು ನಿವಾರಿಸಲು ಸಹಾಯ ಮಾಡುತ್ತದೆ, ಅವುಗಳನ್ನು ಬಲಪಡಿಸುತ್ತದೆ ಮತ್ತು ಉತ್ತಮ ಭಂಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Yoga For Hair Growth : ಕೂದಲು ಉದ್ದ ಬೆಳೆಯಬೇಕೇ? ಹಾಗಾದರೆ ಈ ಯೋಗಾಸನಗಳನ್ನು ಟ್ರೈ ಮಾಡಿ

(Yoga Wheel Benefits yoga expert shares the many benefits of using a yoga wheel)

Comments are closed.