ಸಿಇಟಿ ಪರೀಕ್ಷಾ ದಿನಾಂಕ ಪ್ರಕಟ : KCET ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ

(KCET 2023) 2023 ನೇ ಸಾಲಿನ ವೃತ್ತಿಪರ ಕೋರ್ಸ್‌ ಗಳ ಪ್ರವೇಶಕ್ಕೆ ಸಾಮಾನ್ಯ ಪರೀಕ್ಷೆ ಮೂಲಕ ಮೂಲಕ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, 2023 ನೇ ಸಾಲಿನ ಕೆಸಿಇಟಿ ಪರೀಕ್ಷಾ ದಿನಾಂಕವನ್ನು ಬಿಡುಗಡೆ ಮಾಡಿದೆ.

ಮಾಹಿತಿಯ ಪ್ರಕಾರ, ಕೆಸಿಇಟಿ 2023 ಪರೀಕ್ಷೆಯನ್ನು ಮೇ 20 ಮತ್ತು 21 ರಂದು ನಡೆಸಲು ನಿರ್ಧರಿಸಲಾಗಿದ್ದು, KCET 2023 ರ ಕನ್ನಡ ಭಾಷಾ ಪರೀಕ್ಷೆಯು ಮೇ 22 ರಂದು ನಡೆಯಲಿವೆ. KEA ಕೆಸಿಇಟಿ 2023 ಅನ್ನು ಆಫ್‌ಲೈನ್ ಕಂಪ್ಯೂಟರ್ ಆಧಾರಿತ ಮೋಡ್‌ನಲ್ಲಿ ನಡೆಸಲಾಗುತ್ತದೆ. ಅಧಿಕಾರಿಗಳು ಶೀಘ್ರದಲ್ಲೇ ಕರ್ನಾಟಕ ಸಿಇಟಿ ಅರ್ಜಿ ನಮೂನೆ 2023 ದಿನಾಂಕವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸುತ್ತಾರೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು ಸಂಸ್ಥೆಗಳು ನೀಡುವ ವಿವಿಧ ಪದವಿಪೂರ್ವ ಕೋರ್ಸ್‌ಗಳಿಗೆ ನಡೆಸುವ ರಾಜ್ಯ ಮಟ್ಟದ ಪರೀಕ್ಷೆ ಇದಾಗಿದ್ದು, ಕೆಸಿಇಟಿ 2023 ಪರೀಕ್ಷೆಯನ್ನು 3 ಗಂಟೆಗಳ ಕಾಲ ನಡೆಸಲಾಗುತ್ತದೆ.

KCET ಅರ್ಜಿ ನಮೂನೆ 2023 ಅನ್ನು ಹೇಗೆ ಭರ್ತಿ ಮಾಡುವುದು?

*.ಕೆಸಿಇಟಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – kea.kar.nic.in 2023.
*.ವೈಯಕ್ತಿಕ ವಿವರಗಳನ್ನು ಬಳಸಿಕೊಂಡು ಕೆಸಿಇಟಿ ನೋಂದಣಿಯನ್ನು ಪೂರ್ಣಗೊಳಿಸಲು ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ.
*.ಕೆಸಿಇಟಿ ಅರ್ಜಿ ನಮೂನೆಯನ್ನು ತುಂಬಲು ಲಾಗಿನ್ ಮಾಡಿ.
*.ಶೈಕ್ಷಣಿಕ ಅರ್ಹತೆ, ಕೋಟಾ ವಿವರಗಳು, ಸಂವಹನ ವಿಳಾಸ ಮತ್ತು ಇತರ ಮಾಹಿತಿಯನ್ನು ನಮೂದಿಸಿ.
*.ವಿಶೇಷಣಗಳ ಪ್ರಕಾರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
*.KCET 2023 ಅರ್ಜಿ ನಮೂನೆಯ ಶುಲ್ಕವನ್ನು ಆನ್‌ಲೈನ್ ಮೋಡ್‌ನಲ್ಲಿ ಪಾವತಿಸಿ.
*.ಮುಂಜಾಗೃತಾ ಕ್ರಮವಾಗಿ ಅರ್ಜಿ ನಮೂನೆಯನ್ನು ಒಮ್ಮೆ ವೀಕ್ಷಿಸಿ ನಂತರ ಅರ್ಜಿ ಸಲ್ಲಿಸಿ.

ಇದನ್ನೂ ಓದಿ : New Universities: 6 ಹೊಸ ಖಾಸಗಿ ವಿಶ್ವವಿದ್ಯಾಲಯಗಳಿಗೆ ವಿಧಾನಸಭೆಯಲ್ಲಿ ಅನುಮೋದನೆ

ಇದನ್ನೂ ಓದಿ : 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ : ಈ ವರ್ಷವೂ ಕೃಪಾಂಕ ನೀಡಲು ನಿರ್ಧಾರ

ಕಳೆದ ಎರಡು ವರ್ಷಗಳಿಂದ ಆನ್‌ ಲೈನ್‌ ಮೂಲಕ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಈ ಬಾರಿ ಕೂಡ ಈ ಬಗ್ಗೆ ಚರ್ಷೆಗಳು ನಡೆದಿದ್ದು, ಅಂತಿಮವಾಗಿ ಕೆಇಎ ಆಫ್‌ ಲೈನ್‌ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಹಿಂದಿನ ವರ್ಷದ ಅಂಕಿಅಂಶಗಳ ಪ್ರಕಾರ, ಒಟ್ಟು 2,16,559 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು ಅವರಲ್ಲಿ 2,10,829 ಅಭ್ಯರ್ಥಿಗಳು ಕೆಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು.

ಇದನ್ನೂ ಓದಿ : Annual Examination timetable: 5 ಮತ್ತು 8 ನೇ ತರಗತಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

CET Exam Date Announced : Here is the KCET Application Procedure

Comments are closed.