ಜುಲೈ31ರ ವರೆಗೆ ಶಾಲೆ, ಕಾಲೇಜು ತೆರೆಯವಂತಿಲ್ಲ : ಶಿಕ್ಷಕರಿಗೆ ಮನೆಯಿಂದಲೇ ಕೆಲಸ : ರಾಜ್ಯ ಸರಕಾರಕ್ಕೆ ಕೇಂದ್ರದ ಖಡಕ್ ವಾರ್ನಿಂಗ್

0

ನವದೆಹಲಿ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ31ರವರೆಗೆ ದೇಶದಾದ್ಯಂತ ಶಾಲಾ-ಕಾಲೇಜುಗಳನ್ನು ತೆರೆಯದಂತೆ ಕೇಂದ್ರ ಸರಕಾರ ಸೂಚನೆಯನ್ನು ನೀಡಿದೆ. ಶೈಕ್ಷಣಿಕ ಚಟುವಟಿಕೆಯನ್ನು ಆನ್ ಲೈನ್ ಶಿಕ್ಷಣದ ಮೂಲಕ ಆರಂಭಿಸುವಂತೆ ಆದೇಶಿಸಿದ್ದು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದೆ.

ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರದ ಸ್ಕೂಲ್ ಎಜುಕೇಷನ್ ಮತ್ತು ಲೈಬ್ರರಿ ಮಿನಿಸ್ಟರಿ ಆಫ್ ಹ್ಯೂಮನ್ ರಿಸೋರ್ಸ್ ಡಿಪಾರ್ಟ್ಮೆಂಟ್ ನ ಕಾರ್ಯದರ್ಶಿ ಅನಿಲ್ ಕರ್ವಾಲ್, ಕೇಂದ್ರ ಸರ್ಕಾರ ಅನ್ ಲಾಕ್ -2 ನಿಯಮದ ಅಡಿಯಲ್ಲಿ ಜುಲೈ 31ರ ವರೆಗೆ ಶಾಲೆ, ಕಾಲೇಜು, ಎಜುಕೇಷನ್ ಮತ್ತು ಕೋಚಿಂಗ್ ಇನ್ಸ್ ಟಿಟ್ಯೂಟ್ ಗಳನ್ನು ತೆರೆಯದಿರಲು ನಿರ್ಧರಿಸಲಾಗಿದೆ ಎಂದು ಸೂಚಿಸಿದ್ದಾರೆ. ಶಾಲೆ, ಕಾಲೇಜು, ಟ್ರೈನಿಂಗ್ ಇನ್ಸ್ಟಿಟ್ಯೂಟ್ ಸೇರಿದಂತೆ ಯಾವುದೇ ಶಿಕ್ಷಣ ಸಂಸ್ಥೆಗಳು ತೆರೆಯವಂತಿಲ್ಲ. ಆದರೆ ಮಕ್ಕಳಿಗೆ ಆನ್ ಲೈನ್, ಇ-ಲರ್ನಿಂಗ್ ಮೂಲಕ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಅವಕಾಶ ನೀಡಿದೆ.

ಆನ್ ಲೈನ್ ಶಿಕ್ಷಣಕ್ಕೆ ಅಗತ್ಯವೆನಿಸುವಂತ ಶಿಕ್ಷಕರು, ಸಿಬ್ಬಂದಿ ವರ್ಗದವರು, ಸಂಶೋಧಕರು ಸೇರಿದಂತೆ ಇತರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ ಬ್ಯಾನ್ ಮಾಡಿರುವ ಸರಕಾರ ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣಕ್ಕೆ ಅವಕಾಶ ನೀಡುತ್ತಾ ಅನ್ನುವ ಕುತೂಹಲ ಮೂಡಿಸಿದೆ.

ಇನ್ನೊಂದೆಡೆ ಕೇಂದ್ರ ಸರಕಾರ ಈ ಹಿಂದೆಯೇ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕಲ್ಪಿಸಲು ಸೂಚಿಸಿದ್ದರು ಕೂಡ ರಾಜ್ಯ ಸರಕಾರ ಇದುವರೆಗೂ ಶಿಕ್ಷಕರಿಗೆ ಅವಕಾಶವನ್ನು ಕಲ್ಪಿಸಿಲ್ಲ. ಶಿಕ್ಷಕರ ಮನವಿಗೂ ಕೂಡ ಶಿಕ್ಷಣ ಸಚಿವರು ಸ್ಪಂದಿಸಿಲ್ಲ. ಇದೀಗ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಕೇಂದ್ರದ ಆದೇಶವನ್ನು ಜಾರಿ ಮಾಡುತ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.

Leave A Reply

Your email address will not be published.