ಮಣೂರು ವಾಸುದೇವ ಮಯ್ಯ ಆತ್ಮಹತ್ಯೆಗೆ ಟ್ವಿಸ್ಟ್ ! ಪೊಲೀಸರಿಂದ 11 ಮಂದಿಯ ವಿರುದ್ದ ಎಫ್ ಐಆರ್

0

ಬೆಂಗಳೂರು : ಶ್ರೀ ಗುರು ರಾಘವೇಂದ್ರ ಬ್ಯಾಂಕಿನ ನಿವೃತ್ತ ಸಿಇಓ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬ್ಯಾಂಕಿನಲ್ಲಿ ನಡೆದಿರುವ ಅಕ್ರಮಗಳಿಗೆ ಆಡಳಿತ ಮಂಡಳಿಯೇ ನೇರ ಹೊಣೆಯೆಂದು ಆರೋಪಿಸಲಾಗಿದೆ. ಈ ಕುರಿತು 11 ಮಂದಿಯ ವಿರುದ್ದ ವಾಸುದೇವ ಮಯ್ಯ ಅವರ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಗುರುರಾಘವೇಂದ್ರ ಬ್ಯಾಂಕಿನಲ್ಲಿ ನಡೆದಿರುವ 1,400 ಕೋಟಿ ರೂಪಾಯಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಬ್ಯಾಂಕಿನ ಮಾಜಿ ಸಿಇಓ ವಾಸುದೇವ ಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವ ಪಡೆಯುತ್ತಿದೆ. ಮಯ್ಯ ಅವರು ಬರೆದಿರುವ 11 ಪುಟಗಳ ಡೆತ್ ನೋಟ್ ಅವ್ಯವಹಾರ ಹಲವು ಮಜಲುಗಳನ್ನು ಬಿಚ್ಚಿಟ್ಟಿತ್ತು. ಇದೀಗ ವಾಸುದೇವ ಮಯ್ಯ ಅವರ ಪುತ್ರಿ ರಶ್ಮೀ ಅವರು ತನ್ನ ತಂದೆಗೆ ಆಡಳಿತ ಮಂಡಳಿಯ 11 ಮಂದಿಯೇ ಕಾರಣವೆಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತನ್ನ ತಂದೆಯ ಅಮಾಯಕತೆ ಹಾಗೂ ವ್ಯವಹಾರಿಕ ಪರಿಜ್ಞಾನ ಇಲ್ಲದ ಮನಸ್ಥಿತಿಯನ್ನೇ ದುರ್ಬಳಕೆ ಮಾಡಿಕೊಂಡು ಸಾವಿರಾರು ಕೋಟಿ ರೂ. ಅಕ್ರಮ ನಡೆಯಲು ಬ್ಯಾಂಕ್‌ನ ಆಡಳಿತ ಮಂಡಳಿಯ ‘ಸಿಇಓ ಸಂತೋಷ ಕುಮಾರ್‌, ರವಿ ಐತ್ಯಾಳ, ರಾಕೇಶ್‌, ಶ್ರೀಪಾದ ಹೆಗಡೆ ಮತ್ತು ಪ್ರಶಾಂತ್‌ ಸೇರಿದಂತೆ 11 ಕಾರಣವೆಂದು ದೂರಿದ್ದಾರೆ.

ತನ್ನ ತಂದೆ ಅಕ್ರಮವೆಸಗುವಷ್ಟು ದುರಳರಲ್ಲ. ಅವರ ಅಮಾಯಕತೆಯನ್ನೇ ಪ್ರಸ್ತುತ ಅಧಿಕಾರದಲ್ಲಿರುವ ಆಡಳಿತ ಮಂಡಳಿ ಸದಸ್ಯರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ತಂದೆಯನ್ನು ದಾಳವಾಗಿ ಬಳಸಿಕೊಳ್ಳಲಾಗಿದೆ. ಆಡಳಿತ ಮಂಡಳಿಯ ಅನುಮತಿಯಂತೆ ಸಾಲ ನೀಡಳಾಗಿದೆ. ಸಾಲ ಪಡೆದವರು ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ತಂದೆ ಕಿರುಕುಳ ಕೊಟ್ಟಿದ್ದಾರೆ. ಬ್ಯಾಂಕ್ ವ್ಯವಹಾರದ ಗಂಧಗಾಳಿಯೇ ಗೊತ್ತಿರದ ನನ್ನ ತಂದೆಯನ್ನು ಸಿಇಓ ಸ್ಥಾನದಲ್ಲಿ ಕುಳ್ಳಿರಿಸಿ, ಆಡಳಿತ ಮಂಡಳಿಯವರು ದರ್ಬಾರ್ ಮಾಡಿದ್ದಾರೆ. ಆಡಳಿತ ಮಂಡಳಿಯಲ್ಲಿ ನನ್ನ ತಂದೆ ರಬ್ಬರ್ ಸ್ಟ್ಯಾಂಪ್ ಆಗಿದ್ದರು. ತಂದೆಯನ್ನು ಬೆದರಿಸಿ ಅನೇಕ ಲೆಕ್ಕಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ತನ್ನ ತಂದೆಯ ಅಧಿಕಾರದ ಅವಧಿಯಲ್ಲಿಯೇ ವ್ಯವಹಾರ ನಡೆಯುತ್ತಿತ್ತಾದರೂ, ತಂದೆಯ ಕಂಪ್ಯೂಟರ್ ಪಾಸ್ ವರ್ಡ್ ಆಡಳಿತ ಮಂಡಳಿಯ ನಿರ್ದೇಶಕರ ಬಳಿಯಲ್ಲಿತ್ತು. ಆಡಳಿತ ಮಂಡಳಿಯವರ ಷಡ್ಯಂತ್ರಕ್ಕೆ ನನ್ನ ತಂದೆ ಅನ್ಯಾಯವಾಗಿ ಬಲಿಯಾದರು. ನಿತ್ಯವೂ ತನ್ನ ತಂದೆಗೆ ಕಿರುಕುಳ ನೀಡಲಾಗುತ್ತಿದ್ದು, ಇದೇ ಕಾರಣದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರಿನಲ್ಲಿ ಆರೋಪಿಲಾಗಿದೆ.

ಬ್ಯಾಂಕಿನಲ್ಲಿ ನಡೆಯುತ್ತಿದ್ದ ಅವ್ಯವಹಾರದ ಬಗ್ಗೆ ತಂದೆ ಮನೆಯಲ್ಲಿ ಮಾತನಾಡಿದ್ದಾರೆ. 2019ರಲ್ಲಿ ನಡೆಸಿದ ಆಡಿಟ್‌ ವೇಳೆ ಸರಿಯಾಗಿ ದತ್ತಾಂಶ ನೀಡದೇ ತಂದೆ ಮೇಲೆ ಅನುಮಾನ ಬರುವಂತೆ ಮಾಡಲಾಗಿತ್ತು. ಅಲ್ಲದೆ, ಪರಿವೀಕ್ಷಣೆ ವೇಳೆ ತಮ್ಮ ತಂದೆ ಕಡೆಯಿಂದ ಬಲವಂತವಾಗಿ ದಾಖಲೆಗಳ ಮೇಲೆ ಸಹಿ ಪಡೆಯಲಾಗಿತ್ತು. ತಂದೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬಲಹೀನರಾಗಿರಲಿಲ್ಲ. ಆದರೆ ಮಾಡದ ತಪ್ಪಿಗೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದು. ಹಾಗೆಯೇ ಬ್ಯಾಂಕ್‌ ಗ್ರಾಹಕರು ಇಲ್ಲಸಲ್ಲದ ರೀತಿಯಲ್ಲಿ ಹಿಡಿಶಾಪ ಹಾಕುತ್ತಿದ್ದರಿಂದ ಬೇಸತ್ತು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ತಂದೆಯ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ರಶ್ಮಿ ಅವರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಮಯ್ಯ ಅವರು ಬರೆದಿಟ್ಟಿರುವ ಡೆತ್ ನೋಟ್ ಹಾಗೂ ಮಗಳು ರಶ್ಮಿ ನೀಡಿದ ದೂರಿನ ಮೇರೆಗೆ ಸುಬ್ರಮಣ್ಯಪುರ ಪೊಲೀಸರು ಸಿಇಓ ಸಂತೋಷ ಕುಮಾರ್‌, ರವಿ ಐತಾಳ, ರಾಕೇಶ್‌, ಶ್ರೀಪಾದಹೆಗಡೆ, ಪ್ರಶಾಂತ್‌, ರಘುನಾಥ್‌, ರೆಡ್ಡಿ ಬ್ರದರ್ಸ್‌, ಕುಮರೇಶ್‌, ರಜತ್‌, ತಲ್ಲಂ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

Leave A Reply

Your email address will not be published.