ನಿತ್ಯಭವಿಷ್ಯ : 09-07-2020

0

ಮೇಷರಾಶಿ
ಉದ್ಯೋಗಿಗಳಿಗೆ ಅವಿರತ ಕಾರ್ಯದೊತ್ತಡ ಆಗಾಗ ದೇಹಾಯಾಸಕ್ಕೆ ಕಾರಣವಾದೀತು. ಮಕ್ಕಳ ವಿಚಾರದಲ್ಲಿ ಮನಃಸ್ತಾಪ, ಸಂಗಾತಿಯನ್ನು ನಿಂದಿಸುವಿರಿ, ಸ್ನೇಹಿತರಿಂದ ಬೇಸರ, ಒಬ್ಬಂಟಿಯಾಗಿರಲು ಆಲೋಚನೆ, ಕೃಷಿಕರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗಸ್ಥರಿಗೆ ಧನಾಗಮನ. ಮನೆಯಲ್ಲಿ ಶ್ರೀ ದೇವತಾನುಗ್ರಹಕ್ಕಾಗಿ ದೇವತಾ ಕಾರ್ಯಗಳು ನಡೆಯಲಿವೆ. ಆಕಸ್ಮಿಕ ಕಿರು ಸಂಚಾರವಿದ್ದೀತು.

ವೃಷಭರಾಶಿ
ಸಾಮಾಜಿಕ ರಂಗದಲ್ಲಿ ನಯವಂಚಕರ ಬಗ್ಗೆ ಎಚ್ಚರದಿಂದಿರಿ. ಸೈಟ್-ವಾಹನ ಖರೀದಿಗೆ ಯೋಚನೆ, ಸಾಲದ ಸಹಾಯ ಲಭಿಸುವುದು, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವಯತ್ಯಾಸ, ಮಹಿಳಾ ಶತ್ರುಗಳಿಂದ ಕಿರಿಕಿರಿ, ಮಾನಸಿಕ ವೇದನೆ. ನಿಮ್ಮ ಆಕಾಂಕ್ಷೆಗಳನ್ನು ಸದ್ಯದ ಮಟ್ಟಿಗೆ ನಿಯಂತ್ರಿಸಿಕೊಳ್ಳಿರಿ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ.

ಮಿಥುನರಾಶಿ
ಮೋಜು ಮಸ್ತಿಯಲ್ಲಿ ತೊಡಗುವಿರಿ, ಕಲಾ ಚಟುವಟಿಕೆಗಳಿಗೆ ಪ್ರಯಾಣ, ಪ್ರೇಮ ವಿಚಾರ ಕುಟುಂಬದಲ್ಲಿ ಪ್ರಸ್ತಾಪ, ಆಸೆ ಆಕಾಂಕ್ಷೆ ಭಾವನೆಗಳಲ್ಲಿ ವಿಹಾರ, ಸೌಂದರ್ಯ ವರ್ಧಕ ವಸ್ತು ಖರೀದಿಗಾಗಿ ಖರ್ಚು, ಹಣಕಾಸು ಖರ್ಚಿನ ಬಗ್ಗೆ ನಿಗಾವಹಿಸಿ. ಆಗಾಗ ಧನಾಗಮನದಿಂದ ಮನಸ್ಸಿಗೆ ಕೊಂಚ ಸಮಾಧಾನ ದೊರಕಲಿದೆ. ಅವಿವಾಹಿತರಿಗೆ ಹೆಚ್ಚಿನ ಪ್ರಯತ್ನ ಬಲದಿಂದ ಕಂಕಣಬಲದ ಯೋಗ ಒದಗಿ ಬರಲಿದೆ. ಕೌಟುಂಬಿಕವಾಗಿ ಖರ್ಚುವೆಚ್ಚ ಅಧಿಕವಾದೀತು.

ಕಟಕರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ ತೋರಿಬಂದು ಆರ್ಥಿಕವಾಗಿ ತುಸುಮಟ್ಟಿನ ಲಾಭವಿದೆ. ಸ್ನೇಹಿತರ ಮಧ್ಯೆ ಮನಃಸ್ತಾಪ, ಭೂ ವ್ಯವಹಾರದಲ್ಲಿ ಮೋಸ, ವಾಹನ ಖರೀದಿಯಲ್ಲಿ ಎಚ್ಚರ, ನಂಬಿಕಸ್ಥರಿಂದ ಹಣ ಮೋಸದ ಆತಂಕ, ಮಿತ್ರರ ಜೀವನದಲ್ಲಿ ಏರುಪೇರು. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ನಿಮ್ಮದಾದೀತು. ಇತರರ ಕಿವಿ ಮಾತಿಗೆ ತಲೆಗೊಡದಿರಿ. ಜಾಗ್ರತೆ ಮಾಡಿರಿ.

ಸಿಂಹರಾಶಿ
ವೃತ್ತಿರಂಗದಲ್ಲಿ ಹಿತಶತ್ರುಗಳ ಕಿರಿಕಿರಿ ಇರುತ್ತದೆ. ಅವಿವಾಹಿತರಿಗೆ ನಿಶ್ಚಿತರೂಪದಲ್ಲಿ ಕಂಕಣಬಲದ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಅನುಮಾನ, ಗೌರವಕ್ಕೆ ಚ್ಯುತಿ, ವಿಕೃತ ಆಸೆಗಳಿಗೆ ಮನಸ್ಸು, ದೈಹಿಕ-ಮಾನಸಿಕ ಸ್ಥಿತಿ ವಿಚಲಿತ, ಕುಟುಂಬಸ್ಥರಿಂದ ಕಿರಿಕಿರಿ, ಸಂಗಾತಿಯಿಂದ ಮಾನಸಿಕ ಹಿಂಸೆ. ಕುಟುಂಬ ಸಂಬಂಧವನ್ನು ಗಟ್ಟಿಯಾಗಿಸಲು ಪ್ರಯತ್ನಿಸಿರಿ. ವಿದ್ಯೆಯಲ್ಲಿ ಯಶಸ್ಸು.

ಕನ್ಯಾರಾಶಿ
ನಾನಾ ರೀತಿಯಲ್ಲಿ ಧನ ಸಂಗ್ರಹಕ್ಕೆ ಸಾಧ್ಯವಾಗಲಿದೆ. ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ದುಶ್ಚಟ-ಮೋಜು ಮಸ್ತಿ ಹೆಚ್ಚಾಗುವುದು, ಐಷಾರಾಮಿ ಜೀವನಕ್ಕೆ ಮನಸ್ಸು, ಬಂದ ಲಾಭವನ್ನು ಖರ್ಚು ಮಾಡುವಿರಿ, ಪತ್ರ ವ್ಯವಹಾರಗಳಿಂದ ನಷ್ಟ-ಸಂಕಷ್ಟ. ಯಾವುದೇ ರೀತಿಯ ಮನಸ್ತಾಪಕ್ಕೆ ಗುರಿಯಾಗುವ ಸಾಧ್ಯತೆ ತೋರಿ ಬಂದೀತು. ಭವಿಷ್ಯದ ಕರ್ತವ್ಯದ ಕಡೆಗೆ ಗಮನಹರಿಸುವುದು ಮುಖ್ಯವಾಗಿದೆ.

ತುಲಾರಾಶಿ
ಉದ್ಯೋಗಿಗಳಿಗೆ ಅವಿರತ ಕೆಲಸದ ಬಿಸಿ ತಟ್ಟಲಿದೆ. ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ, ಕಲಾವಿದರಿಗೆ ಅವಕಾಶ ಲಭಿಸುವ ಸಾಧ್ಯತೆ, ಉದ್ಯೋಗಾವಕಾಶ ಪ್ರಾಪ್ತಿ, ಅನಿರೀಕ್ಷಿತ ಶುಭ ಫಲ ಯೋಗ. ಕುಟುಂಬದ ಕಡೆಗೆ ಖರ್ಚುವೆಚ್ಚಗಳು ಅಧಿಕ ರೂಪದಲ್ಲಿ ತೋರಿ ಬರಲಿವೆ. ವೃತ್ತಿರಂಗದಲ್ಲಿ ನಿರುತ್ಸಾಹದ ವಾತಾವರಣವು ಕಂಡು ಬಂದೀತು.

ವೃಶ್ಚಿಕರಾಶಿ
ಉತ್ತಮ ಉತ್ಸಾಹದಾಯಕ ದಿನಗಳಿವು. ಸಂಗಾತಿ ನಡವಳಿಕೆ ಸಂಶಯಾತ್ಮಕ, ಉದ್ಯೋಗ ಸ್ಥಳದಲ್ಲಿ ಮೋಸ, ಗೌರವಕ್ಕೆ ಧಕ್ಕೆ, ನಿಂದನೆ, ವಸ್ತ್ರಾಭರಣ ಖರೀದಿಯಲ್ಲಿ ನಷ್ಟ. ವಿಲಾಸಿ ಜೀವನದ ಖುಷಿಯನ್ನು ಅನುಭವಿಸಲಿದ್ದೀರಿ. ಭೂಖರೀದಿ, ಗೃಹ ನಿರ್ಮಾಣಗಳಿಗೆ ಇದು ಸಕಾಲವಾಗಿದೆ. ಸದುಪಯೋಗಿಸಿರಿ. ದಿನಾಂತ್ಯ ಶುಭವಾರ್ತೆ.

ಧನುರಾಶಿ
ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ಮುಕ್ತಾಯಗೊಂಡಾವು. ಆತ್ಮೀಯರು-ಬಂಧುಗಳಿಂದ ಸಹಾಯ ಕೇಳುವಿರಿ, ಶೀತ ಸಂಬಂಧಿತ ಸಮಸ್ಯೆ, ಅತೀ ಕುಡಿತದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರ ನಡವಳಿಕೆಯಿಂದ ಕಿರಿಕಿರಿ, ಮನಸ್ಸಿಗೆ ಬೇಸರ. ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಅವಿವಾಹಿತರು ತಮ್ಮ ಪ್ರಯತ್ನ ಬಲವನ್ನು ಹೆಚ್ಚಿಸಿ ಕೊಳ್ಳಬೇಕಾಗುವುದು. ದಾಯಾದಿಗಳಿಂದ ಕಿರುಕುಳವಿದೆ.

ಮಕರರಾಶಿ
ಸದ್ಯ ಸ್ವಪ್ರಯತ್ನ ಬಲವೇ ಉತ್ತಮವೆನಿಸಲಿದೆ. ಕಾರ್ಯಕ್ಷೇತ್ರದಲ್ಲಿ ನೆಮ್ಮದಿ ಇರದು. ಆಕಸ್ಮಿಕ ಪ್ರೇಮದ ಬಲೆಗೆ ಸಿಲುಕುವಿರಿ, ಸಂಗಾತಿ ಆಯ್ಕೆಯಲ್ಲಿ ಎಚ್ಚರಿಕೆ, ಆಸೆ, ಭಾವೆನಗಳಿಗೆ ಧಕ್ಕೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಪಡೆದ ಅವಕಾಶಗಳನ್ನು ಸದುಪಯೋಗಿಸಿರಿ. ಯೋಗ್ಯತೆಗೆ ಮೀರಿದ ಕೆಲಸಕಾರ್ಯಗಳಿಗೆ ಕೈ ಹಾಕದಿರಿ.

ಕುಂಭರಾಶಿ
ನೂತನ ಮಿತ್ರರ ಆಗಮನದಿಂದ ನಿಮ್ಮ ಕಾರ್ಯಸಾಧನೆ ಸಾಧ್ಯವಾದೀತು. ಸ್ಥಿರಾಸ್ತಿ-ಚಿನ್ನಾಭರಣ ಮೇಲೆ ಸಾಲ ಸಾಧ್ಯತೆ, ಭವಿಷ್ಯದ ಬಗ್ಗೆ ಚಿಂತನೆ, ಆತಂಕದಲ್ಲಿ ದಿನ ಕಳೆಯುವಿರಿ, ಮಾಟ-ಮಂತ್ರ ತಂತ್ರದ ಭೀತಿ, ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ವೃತ್ತಿರಂಗದಲ್ಲಿ ಜವಾಬ್ದಾರಿ ಮುಗಿದಿರುತ್ತದೆ. ಹೊಸ ಚಿಂತನೆಗೆ ಇದು ಸಕಾಲ. ಸದುಪಯೋಗಿಸುವುದು ಅಗತ್ಯವಿದೆ.

ಮೀನರಾಶಿ
ಆಗಾಗ ತಾಪತ್ರಯಗಳು ತೋರಿ ಬಂದರೂ ಮುನ್ನಡೆ ಇರುತ್ತದೆ. ಸ್ವಲ್ಪ ಎಚ್ಚರ ತಪ್ಪಿದ್ರೂ ತೊಂದರೆ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸಾಧ್ಯತೆ, ಅನ್ಯರ ತಪ್ಪಿನಿಂದ ಶಿಕ್ಷೆಗೊಳಗಾಗುವಿರಿ, ಬಂಧುಗಳೇ ಶತ್ರುಗಳಾಗುವರು, ಉದರ, ಪಿತ್ತ, ಕಫ ಬಾಧೆ, ಗರ್ಭಕ್ಕೆ ಸಂಬಂಧಿತ ಸಮಸ್ಯೆ, ಸಂತಾನ ವಿಚಾರದಲ್ಲಿ ಓಡಾಟ. ಬಂದ ಕಷ್ಟನಷ್ಟ, ಸಮಸ್ಯೆಗಳನ್ನು ಪ್ರಯತ್ನ ಬಲದಿಂದ ಎದುರಿಸುವ ಛಾತಿ ನಿಮಗಿರುವುದು. ಧೈರ್ಯದಿಂದ ಮುನ್ನಡೆಯಿರಿ.

Leave A Reply

Your email address will not be published.