NEET ban : ನೀಟ್ ನಿಷೇಧಿಸಿ : ನಮ್ಮ ಮಕ್ಕಳನ್ನು ಉಳಿಸಿ ಕರವೇಯಿಂದ ಟ್ವಿಟರ್ ಅಭಿಯಾನ

ನವದೆಹಲಿ : ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ಕರ್ನಾಟಕದ ಹಾಗೂ ಭಾರತದ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಸಂಕಷ್ಟಕ್ಕಿಡಾಗಿದ್ದಾರೆ. ಈ ಮಧ್ಯೆ ಕರ್ನಾಟಕದ ವೈದ್ಯ ವಿದ್ಯಾರ್ಥಿ ನವೀನ್ ಉಕ್ರೇನ್ ನಲ್ಲಿ ಸಾವನ್ನಪ್ಪಿರೋದು ರಾಜ್ಯದ ಶಿಕ್ಷಣ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂಬ ಮಾತು ಕೇಳಿ ಬರಲಾರಂಭಿಸಿದೆ. ಈ ಮಧ್ಯೆ ವಿದ್ಯಾರ್ಥಿಗಳು ರಾಜ್ಯದಲ್ಲಿ ಹಾಗೂ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ನೀಟ್ ಅಡ್ಡಿ ಯಾಗಿದೆ ಎಂಬ ಆರೋಪ ವ್ಯಕ್ತವಾಗಿದ್ದು, ಇದೇ ಕಾರಣಕ್ಕೆ ಬ್ಯಾನ್ ನೀಟ್ ಅಭಿಯಾನ (NEET ban) ಧ್ವನಿಪಡೆದುಕೊಂಡಿದೆ.

ಉಕ್ರೇನ್‌ನಲ್ಲಿ ವಿದ್ಯಾರ್ಥಿ ನವೀನ್ ಮೃತ ಪಟ್ಟ ಹಿನ್ನೆಲೆ, ಇದೀಗ ನೀಟ್‌ ಪರೀಕ್ಷೆಯನ್ನು ರಾಜ್ಯದಲ್ಲಿ ಬ್ಯಾನ್ ಮಾಡ್ಬೇಕು ಅನ್ನೋ‌ ಕೂಗು ಜೋರಾಗಿದೆ.‌ರಾಜಕಾರಣಿಗಳಿಂದ ಆರಂಭಿಸಿ ವಿದ್ಯಾರ್ಥಿ ಸಂಘಟನೆಗಳವರೆಗೆ ಎಲ್ಲರೂ ಬ್ಯಾನ್ ನೀಟ್ ಎಂಬ ಆಗ್ರಹಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ . ರಾಜ್ಯದಲ್ಲಿ ನೀಟ್ ಬೇಡ್ವೇ ಬೇಡ (NEET ban) ಎಂದು ಕರವೇ ಯಿಂದ ಟ್ವೀಟರ್ ಅಭಿಯಾನ ಆರಂಭವಾಗಿದೆ.

ಕರವೇ ಈ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡ್ತಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರಿಂದ ಬ್ಯಾನ್ ನೀಟ್ಅಭಿಯಾನ ಆರಂಭಗೊಂಡಿದ್ದು, ಇದೀಗ Ban NEET ಟ್ವೀಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಸಾಮಾಜಿಕ ಜಾಲತಾಣದಲ್ಲಿ, ಬ್ಯಾನ್ ನೀಟ್ ಹ್ಯಾಷ್‌ಟ್ಯಾಗ್‌ಗೆ ಸುಮಾರು 30 ಸಾವಿರಕ್ಕೂ ಹೆಚ್ಚು ರೀ ಟ್ವೀಟ್ ಆಗಿದೆ. ಅಲ್ಲದೇ ಪೋಷಕರು ಹಾಗೂ ಮಕ್ಕಳು ನೀಟ್ ನಮಗೆ ಬೇಡ್ವೇ ಬೇಡ ಎಂದು ಅಭಿಯಾನಕ್ಕೆ ಬೆಂಬಲ ನೀಡ್ತಿದ್ದಾರೆ.

NEET ಇಲ್ಲದೆ ಹೋದ್ರೆ ಬೇರೆ ದೇಶಕ್ಕೆ ಯಾಕೆ ಹೋಗಬೇಕು. ನಮ್ಮ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿಯೇ ನಾವು ಓದಬಹುದು. ನೀಟ್‌ನ್ನು ವಿದ್ಯಾರ್ಥಿಗಳ ಮೇಲೆ ಹೇರಿಕೆ ಮಾಡಲಾಗ್ತಿದೆ ಎಂದು ಹಲವು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಕರವೇ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಶಿವಾನಂದ್, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನೀಟ್ ಎಕ್ಸಾಂ ಬ್ಯಾನ್ ಮಾಡಬೇಕು ಮುಂದಿನ ದಿನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಒಂದೊಮ್ಮೆ ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರವೇ ಎಚ್ಚರಿಸಿದೆ.

ಇದನ್ನೂ ಓದಿ : Re Exams : ಪರೀಕ್ಷೆ ಇಲ್ಲದೇ ಪಾಸ್‌ ಆದವರಿಗೆ ಶಾಕ್‌ : ಮತ್ತೆ ಬರೆಯಲೇ ಬೇಕು ಪರೀಕ್ಷೆ

ಇದನ್ನೂ ಓದಿ : PUC Exam Time Table : ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ

( Twitter Campaign NEET ban save children’s )

Comments are closed.