School Holiday : ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ : ಅವಧಿಗೂ ಮುನ್ನವೇ ದಸರಾ ರಜೆ

School Holiday Dasara vacation : ಬೆಂಗಳೂರು : ಕರ್ನಾಟಕದಲ್ಲಿ ದಸರಾ ಹಬ್ಬ ಸಮೀಪಿಸುತ್ತಿದೆ. ವಿದ್ಯಾರ್ಥಿಗಳು, ಪೋಷಕರು ದಸರಾ ರಜೆಗಾಗಿ ಕಾಯುತ್ತಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ವಿದ್ಯಾರ್ಥಿಗಳಿಗೆ ದಸರಾ ರಜೆ ಸಿಗಲಿದೆ.
ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಸಾಮಾನ್ಯವಾಗಿ ಬೇಸಿಗೆ ರಜೆ ಮಾತ್ರವಲ್ಲದೇ ಮಧ್ಯಂತರ ರಜೆಯನ್ನು ಘೋಷಿಸುತ್ತದೆ. ದಸರಾ ಹೊತ್ತಲ್ಲೇ ಈ ರಜೆ ನೀಡಲಾಗುತ್ತಿರೋ ಹಿನ್ನೆಲೆಯಲ್ಲಿ ದಸರಾ ರಜೆ ಅಂತಾನೇ ಕರೆಯಲಾಗುತ್ತದೆ.
ಹಿಂದೆಯಲ್ಲಾ ಬೇಸಿಗೆ ರಜೆ 2 ತಿಂಗಳ ಕಾಲ ನೀಡಿದ್ರೆ, ದಸರಾ ರಜೆ 30 ದಿನಗಳ ನೀಡಲಾಗುತ್ತಿತ್ತು. ಆದ್ರೆ ಕೊರೊನಾ ನಂತರದಲ್ಲಿ ದಸರಾ ರಜೆಗೆ ಶಿಕ್ಷಣ ಇಲಾಖೆ ಕತ್ತರಿ ಹಾಕಿದೆ. 20 ದಿನ, 15 ದಿನಕ್ಕೆ ಇಳಿಕೆಯಾಗಿತ್ತು. ಆದರೆ ಈ ಬಾರಿ 17 ದಿನಗಳ ಕಾಲ ದಸರಾ ರಜೆ ಸಿಗಲಿದೆ.
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗಾಗಲೇ 2025 -26ನೇ ವರ್ಷ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವೇಳಾಪಟ್ಟಿಯ ಪ್ರಕಾರ, 2025ರ ಮೇ 29 ರಿಂದ 2026ರ ಎಪ್ರಿಲ್ 10ರ ವರೆಗೆ ಅಂದ್ರೆ ಒಟ್ಟು 242 ದಿನಗಳ ಕಾಲ ಶಾಲೆಗಳು ಕಾರ್ಯನಿರ್ವಹಿಸಲಿವೆ.
ಇದನ್ನೂ ಓದಿ : ಶಾಲಾ ಮಕ್ಕಳಿಗೆ ರಜೆ : ಮಂಗಳೂರು ಡಿಡಿಪಿಐ ಹೊಸ ಆದೇಶ
ಮೇ 29 ರಿಂದ ಸೆಪ್ಟೆಂಬರ್ 19ರವರೆಗೆ ಮೊದಲ ಅವಧಿ ಹಾಗೂ ಅಕ್ಟೋಬರ್ 8ರಿಂದ 2026ರೆ ಎಪ್ರಿಲ್ 10ರ ವರೆಗೆ ಎರಡನೇ ಶೈಕ್ಷಣಿಕ ಚಟುವಟಿಕೆ ನಡೆಯಲಿದೆ. ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಒಟ್ಟು 123 ದಿನಗಳ ಕಾಲ ರಜೆ ಇರಲಿದೆ.
School Holiday Dasara vacation : ಅವಧಿಗೂ ಮೊದಲೇ ದಸರಾ ರಜೆ
ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಅವಧಿಗೂ ಮೊದಲೇ ದಸರಾ ರಜೆ ಸಿಗಲಿದೆ. ಸಾಮಾನ್ಯವಾಗಿ ಅಕ್ಟೋಬರ್ 2 ರಿಂದ ದಸರಾ ರಜೆ ನೀಡಲಾಗುತ್ತದೆ. ಆದರೆ ಈ ಬಾರಿ ನವರಾತ್ರಿ ಮುಂಚಿತವಾಗಿ ಆಗಮಿಸಲಿದೆ.
ಹೀಗಾಗಿ ಶಿಕ್ಷಣ ಇಲಾಖೆ ಸೆಪ್ಟೆಂಬರ್ 20ರಿಂದಲೇ ದಸರಾ ರಜೆ ಘೋಷಿಸಿದೆ. ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರ ವರೆಗೆ ಕರ್ನಾಟಕ ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ಸಿಗಲಿದೆ.
ಇದನ್ನೂ ಓದಿ : ಶಿಕ್ಷಕರು ಪಾಠದ ಜೊತೆಗೆ ಹಾವು ಹಿಡಿಯ ಬೇಕು : ಸರಕಾರದ ಹೊಸ ಆದೇಶ
ಆದರೆ ಕ್ರಿಶ್ಚಿಯನ್ ವಿದ್ಯಾಸಂಸ್ಥೆಗಳು ಸೆಪ್ಟೆಂಬರ್ 27ರಿಂದ ರಜೆ ಘೋಷಣೆ ಮಾಡಿವೆ. ಕ್ರಿಸಮಸ್ ವೇಳೆಯಲ್ಲಿ ಹೆಚ್ಚುವರಿ ರಜೆ ನೀಡುವ ಕಾರಣಕ್ಕೆ ದಸರಾ ರಜೆಯನ್ನು ಕಡಿತ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಅವಧಿಗೂ ಮೊದಲೇ ವಿದ್ಯಾರ್ಥಿಗಳಿಗೆ ದಸರಾ ರಜೆ ಸಿಗಲಿದೆ.
School Holiday Good news for students: Karnataka Dasara vacation 2025 Starts early in Kannada News



