ಶಿಕ್ಷಕರಿಗೆ ಗುಡ್ ನ್ಯೂಸ್ : ಶೇ.50 ರಂತೆ ರೊಟೇಶನ್ ಪದ್ದತಿಯಲ್ಲಿ ಹಾಜರಾತಿ

ಚಿಕ್ಕಮಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನುದಾನಿತ ಮತ್ತು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು, ಸಿಬ್ಬಂದಿಗಳು ರೋಟೆಶನ್ ಪದ್ದತಿಯಲ್ಲಿ ಶಾಲೆಗೆ ಹಾಜರಾಗುವಂತೆ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅನ್ ಲಾಕ್ ಆದೇಶ ಜಾರಿ ಮಾಡಿದ್ದರೂ ಕೂಡ ಸರಕಾರಿ ಕಚೇರಿ ಗಳಲ್ಲಿ ಶೇ.50 ರಷ್ಟು ಹಾಜರಾತಿಗೆ ರಾಜ್ಯ ಸರಕಾರ ಸೂಚನೆಯನ್ನು ನೀಡಿದೆ. ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಶಾಲೆಗೆ ಶೇ. 100 ರಂತೆ ಹಾಜರಾಗುತ್ತಿದ್ದಾರೆ‌. ಹೀಗಾಗಿ ಶಿಕ್ಷಕರಿಗೂ ರೊಟೇಶನ್ ಪದ್ದತಿಯನ್ನು ಜಾರಿ ಮಾಡುವುದರ ಜೊತೆಗೆ ಅಂಗವೈಕಲ್ಯ ಹಾಗೂ ಗರ್ಭಿಣಿಯರಿಗೆ ಹಾಜರಾತಿ ಯಿಂದ ವಿನಾಯಿತಿ ನೀಡುವಂತೆ ಸರಕಾರಿ ನೌಕರರ ಸಂಘ ಆಗ್ರಹಿಸಿತ್ತು.

ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಉಪ ನಿರ್ದೇಶಕರು ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಶೇ. 50 ರಂತೆ ರೋಟೇಶನ್ ಪದ್ದತಿಯಲ್ಲಿ ಶಾಲೆಗೆ ಹಾಜರಾಗಬೇಕು. ಅಲ್ಲದೇ ಗರ್ಭಿಣಿ ಶಿಕ್ಷಕರು ಹಾಗೂ ಅಂಕವೈಕಲ್ಯತೆ ಹೊಂದಿದವರಿಗೆ ಮನೆಯಿಂದಲೇ ಕಾರ್ಯ ನಿರ್ವಹಣೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

Comments are closed.