Weight Gain : ಚಳಿಗಾಲದಲ್ಲಿ ತೂಕ ಹೆಚ್ಚಳವಾಗದಂತೆ ತಡೆಯಲು ಇಲ್ಲಿದೆ ನೋಡಿ ಟಿಪ್ಸ್​

Weight Gain :ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಂದರೆ ಸ್ವಲ್ಪ ಕಷ್ಟದ ಕೆಲಸವೇ ಸರಿ. ಚಳಿಗಾಲದಲ್ಲಿ ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯ, ದೇಹದ ಆರೋಗ್ಯ ಹೀಗೆ ಎಲ್ಲಾ ರೀತಿಯ ಸಮಸ್ಯೆಗಳೂ ಉಂಟಾಗುತ್ತದೆ. ಅಲ್ಲದೆ ಚುಮು ಚುಮು ಚಳಿಯಲ್ಲಿ ಜಂಕ್​ ಫುಡ್​ಗಳನ್ನು ತಿನ್ನಬೇಕು ಎಂಬ ಆಸೆ ಕೂಡ ಹೆಚ್ಚಾಗೋದ್ರಿಂದ ತೂಕ ಹೆಚ್ಚಳವಾಗುವುದೂ ಉಂಟು.


ಚಳಿ ಹೆಚ್ಚಿರೋದ್ರಿಂದ ವ್ಯಾಯಾಮ ಮಾಡಲು ಕೂಡ ಮನಸ್ಸು ಒಪ್ಪೋದಿಲ್ಲ. ಹೆಚ್ಚು ನಿದ್ರೆ ಮಾಡಬೇಕು ಎಂದುಕೊಳ್ತೇವೆ. ಚಳಿ ಇರುವಾಗ ಮನೆಯಿಂದ ಹೊರಬರೋಕೂ ಮನಸ್ಸಾಗೋದಿಲ್ಲ. ಇವೆಲ್ಲವೂ ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾದರೆ ಚಳಿಗಾಲದಲ್ಲಿ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕು ಅಂದರೆ ಇಲ್ಲಿರುವ ಕೆಲವು ಟಿಪ್ಸ್​ಗಳನ್ನು ಪಾಲನೆ ಮಾಡುವುದು ಒಳ್ಳೆಯದು.


ವ್ಯಾಯಾಮವನ್ನು ತಪ್ಪಿಸಲೇಬೇಡಿ – ಕ್ಯಾಲೋರಿಯನ್ನು ನೀವು ಬರ್ನ್​ ಮಾಡದ ಹೊರತು ಸಣ್ಣಗಾಗೋಕೆ ಸಾಧ್ಯವಿಲ್ಲ. ಪ್ರತಿದಿನ ವಾಕಿಂಗ್​ ಅಥವಾ ವ್ಯಾಯಾಮಗಳನ್ನು ತಪ್ಪಿಸಬೇಡಿ.


ಬೆಚ್ಚಗಿನ ದ್ರವಯುಕ್ತ ಆಹಾರ ಸೇವನೆ – ಗ್ರೀನ್​ ಟೀ, ಸೂಪ್​ಗಳನ್ನು ಹೆಚ್ಚೆಚ್ಚು ಸೇವನೆ ಮಾಡಿ. ದೇಹಕ್ಕೆ ದ್ರವ ಪದಾರ್ಥಗಳು ಹೋದಷ್ಟೂ ಒಳ್ಳೆಯದು. ಇದು ನಿಮಗೆ ಬೆಚ್ಚನೆಯ ಅನುಭವ ನೀಡುವುದರ ಜೊತೆಯಲ್ಲಿ ನಿಮ್ಮ ಕ್ಯಾಲೋರಿ ಬರ್ನ್ ಮಾಡುವಲ್ಲಿಯೂ ಸಹಕಾರಿಯಾಗಿದೆ.


ಪ್ರೋಟಿನ್ ಹೆಚ್ಚಿರುವ ಆಹಾರವನ್ನು ಸೇವಿಸಿ – ಮೀನು, ಕೋಳಿ, ಮೊಟ್ಟೆ, ಕಡಿಮೆ ಕೊಬ್ಬು ಹೊಂದಿರುವ ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಸೇವನೆ ಮಾಡಿ, ಇದರಿಂದ ನಿಮ್ಮ ದೇಹಕ್ಕೆ ಪ್ರೋಟಿನ್​ ಸಿಗಲಿದೆ. ಇದು ನಿಮ್ಮ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ.


ಒಳ್ಳೆಯ ಕೊಬ್ಬು ಇರುವಂತಹ ಆಹಾರ ಸೇವನೆ – ಡ್ರೈಫ್ರೂಟ್​ಗಳು ಹಾಗೂ ಮೀನು ನಿಮಗೆ ಒಳ್ಳೆಯ ಕೊಬ್ಬನ್ನು ನೀಡುತ್ತದೆ. ಇವು ಚಳಿಗಾಲದಲ್ಲಿ ನಿಮ್ಮ ತ್ವಚೆ ಡ್ರೈ ಆಗದಂತೆ ತಡೆಯುವಲ್ಲಿಯೂ ಸಹಕಾರಿಯಾಗಿದೆ.
ಕರಿಯಾದ ತಿಂಡಿಗಳು, ಜಂಕ್​ ಫುಡ್​ಗಳು, ಅತಿಯಾಗಿ ಸಕ್ಕರೆ ಹಾಕಿದ ಪಾನೀಯಗಳು, ಐಸ್​ ಕ್ರೀಂಗಳನ್ನು ಸೇವಿಸಲೇಬೇಡಿ. ಫೈಬರ್​ ಅಂಶ ಹೆಚ್ಚಿರುವ ಆಹಾರಗಳನ್ನು ಹೆಚ್ಚೆಚ್ಚು ಸೇವನೆ ಮಾಡಿ.

12 Ways to Avoid Winter Weight Gain, Expert Shares Tips

ಇದನ್ನು ಓದಿ : Sprouted Wheat : ಮೊಳಕೆಯೊಡೆದ ಗೋಧಿಯ ಸೇವನೆಯ ಹಿಂದಿದೆ ಇಷ್ಟೆಲ್ಲ ಲಾಭ

ಇದನ್ನೂ ಓದಿ : Relief From Joint Pain: ಚಳಿಗಾಲದಲ್ಲಿ ಗಂಟುನೋವೇ? ಇಲ್ಲಿದೆ ಪರಿಹಾರೋಪಾಯ

Comments are closed.