Ashwagandha : ಅಶ್ವಗಂಧದ ಬಳಕೆಯ ಹಿಂದಿದೆ ನೂರೆಂಟು ಲಾಭ..!

Ashwagandha :ಅದು ಯಾವುದೇ ದೇಹಾರೋಗ್ಯದ ಸಮಸ್ಯೆ ಆಗಿರಲಿ. ನೀವು ತಾಳ್ಮೆಯಿಂದ ಕಾದಲ್ಲಿ ಆರ್ಯುವೇದವು ನಿಮಗೆ ಪರಿಹಾರವನ್ನು ಖಂಡಿತವಾಗಿಯೂ ನೀಡಲಿದೆ. ಅಲ್ಲದೇ ಆಯುರ್ವೇದದ ಬಹುತೇಕ ಔಷಧಿಗಳನ್ನು ನೀವು ಮನೆಯಲ್ಲಿರುವ ಅಡುಗೆ ಪದಾರ್ಥಗಳನ್ನೇ ಬಳಕೆ ಮಾಡಿ ಮಾಡುವಂತದ್ದಾಗಿದೆ. ಇದರಲ್ಲಿ ಒಂದು ಅಶ್ವಗಂಧ . ಅಶ್ವಗಂಧ ಅಂದರೆ ಕುದುರೆಯಿಂದ ಬರುವ ಸುವಾಸನೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಅಶ್ವಗಂಧದಲ್ಲಿರುವ ವಿಶಿಷ್ಟ ವಾಸನೆ ಹಾಗೂ ಶಕ್ತಿಯಿಂದಾಗಿ ದೇಹವನ್ನು ಚುರುಕುಗೊಳಿಸುತ್ತದೆ.


ಅಶ್ವಗಂಧದ ಸೇವನೆಯಿಂದ ದೇಹಕ್ಕೆ ವಿವಿಧ ಪ್ರಮಾಣದಲ್ಲಿ ಲಾಭ ಕಾದಿದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದರೆ ನೀವು ಅಶ್ವಗಂಧವನ್ನು ಬಳಕೆ ಮಾಡಬಹುದಾಗಿದೆ. ಕೋವಿಡ್​ ಸಂದರ್ಭದಲ್ಲಂತೂ ಅಶ್ವಗಂಧವು ವ್ಯಾಪಕವಾಗಿ ಪ್ರಸಿದ್ಧಿಯನ್ನು ಪಡೆಯಿತು. ಅಶ್ವಗಂಧವನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ನಿದ್ರಾಜನಕ, ಆ್ಯಂಟಿ ಬ್ಯಾಕ್ಟಿರಿಯಲ್​ ಆಗಿ ಬಳಕೆ ಮಾಡಲಾಗುತ್ತದೆ.


ಹಾಗಾದರೆ ಅಶ್ವಗಂಧದಲ್ಲಿರುವ ಲಾಭಗಳೇನು ಅನ್ನೋದನ್ನು ತಿಳಿದುಕೊಳ್ಳೋಣ:


ತೂಕ ಇಳಿಸಲು ಸಹಕಾರಿ
ನಿದ್ರಾಹೀನತೆಯನ್ನು ನಿವಾರಿಸುತ್ತದೆ
ಉರಿಯೂತದ ವಿರುದ್ಧ ಹೋರಾಡುತ್ತದೆ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ
ನೋವನ್ನು ನಿಲ್ಲಿಸುತ್ತದೆ
ಥೈರಾಯ್ಡ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ
ಒತ್ತಡವನ್ನು ಕಡಿಮೆ ಮಾಡುತ್ತದೆ
ಮಧುಮೇಹದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ


ಅಶ್ವಗಂಧದ ಲಾಭದ ಬಗ್ಗೆ ಮಾತನಾಡುವಾಗ ಹೆಚ್ಚಾಗಿ ಎಲ್ಲರೂ ಹೇಳುವುದು ಅದರ ಬೇರುಗಳ ಬಗ್ಗೆ. ಅಶ್ವಗಂಧದ ಬೇರುಗಳು ದೇಹದಲ್ಲಿರುವ ಕೊಬ್ಬಿನ ಅಂಶ ನಿವಾರಿಸುವಲ್ಲಿ, ಮಧುಮೇಹ ನಿಯಂತ್ರಿಸುವಲ್ಲಿ. ಕಫ ನಿಯಂತ್ರಿಸುವಲ್ಲಿ, ಶ್ವಾಸಕೋಶದ ಆರೋಗ್ಯವನ್ನು ಕಾಪಾದುವಲ್ಲಿ ಸೇರಿದಂತೆ ಇನ್ನೂ ಅನೇಕ ರೀತಿಯ ಲಾಭಗಳನ್ನು ತಂದುಕೊಡುತ್ತದೆ.

ನೀರು ಕುಡಿಯುವ ವಿಚಾರದಲ್ಲಿ ಮಾಡಲೇಬೇಡಿ ಈ ತಪ್ಪು..!
ನೀರು ಕುಡಿಯೋದು ಒಂದು ಸಾಮಾನ್ಯ ವಿಚಾರವಾಗಿದೆ. ಮನೆಯಲ್ಲಿ, ಶಾಲೆಯಲ್ಲಿ, ಕಚೇರಿಯಲ್ಲಿ ಹೀಗೆ ಎಲ್ಲೆಂದರಲ್ಲಿ ನಾವು ನೀರನ್ನು ಕುಡಿಯುತ್ತೇವೆ. ನೀರು ಕುಡಿಯಲೆಂದೇ ಸ್ಥಳ ಅಥವಾ ಸಮಯವನ್ನು ನಿಗದಿ ಮಾಡೋದಿಲ್ಲ. ಅಲ್ಲದೇ ನೀರು ಕುಡಿಯುವ ಬಗ್ಗೆ ಯಾರೂ ಅತಿಯಾಗಿ ತಲೆಕೆಡಿಸಿಕೊಳ್ಳೋದೂ ಇಲ್ಲ. ಆದರೆ ಇಲ್ಲಿ ನಾವು ಎಡವುತ್ತೇವೆ. ನೀರನ್ನು ಕುಡಿಯಲು ನಾವು ಮಾಡುವ ಸಣ್ಣ ತಪ್ಪು ಕೂಡ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

ಮನುಷ್ಯನದ ದೇಹವು 60 ಪ್ರತಿಶತ ನೀರನ್ನು ಒಳಗೊಂಡಿದೆ. ಆದ್ದರಿಂದ ನೀರನ್ನು ಕುಡಿಯಲು ನೀವು ಸರಿಯಾದ ಮಾರ್ಗವನ್ನು ಬಳಕೆ ಮಾಡಲೇಬೇಕು.

ಊಟದ ನಡುವೆ ನೀರು ಕುಡಿಯಬೇಡಿ. ಇದು ಜೀರ್ಣಕ್ರಿಯೆಯನ್ನು ಹದಗೆಡಿಸುತ್ತದೆ. ಇದು ಆ್ಯಸಿಡಿಟಿ ಉಂಟು ಮಾಡುತ್ತದೆ.ಅಲ್ಲದೇ ಇನ್ನೂ ಅನೇಕ ಅನಾನುಕೂಲತೆಗಳಿವೆ.ಹೀಗಾಗಿ ನೀವು ಊಟಕ್ಕೂ ಅರ್ಧ ಗಂಟೆಗೂ ಮುನ್ನ ನೀರು ಕುಡಿಯಬೇಕು. ಊಟವಾಗಿ 90 ನಿಮಿಷಗಳ ಕಾಲ ನೀರು ಕುಡಿಯಬಾರದು.

ಅತಿಯಾಗಿ ನೀರು ಕುಡಿದರೆ ದೇಹದಲ್ಲಿರುವ ಕ್ಯಾಲೋರಿ ಕರಗುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತೆ ಎಂದು ಹೇಳು್ತ್ತಾರೆ. ಹೀಗಾಗಿ ಅನೇಕರು ಅತಿಯಾಗಿ ನೀರು ಕುಡಿಯುತ್ತಾರೆ.ಬಾಯಾರಿಕೆ ಇಲ್ಲದೇ ಇದ್ದರೂ ಸಹ ನಾವು ನೀರು ಕುಡಿಯುತ್ತೇವೆ. ಇದು ನಿಜಕ್ಕೂ ಹಾನಿಕಾರಕವಾಗಿದೆ. ನಿಮಗೆ ಬಾಯಾರಿಕೆಯಾದಾಗ ಮಾತ್ರ ನೀರನ್ನು ಸರಿಯಾಗಿ ಕುಡಿಯಲು ಸಾಧ್ಯ. ಗಂಟಲಿನ ಮೂಲಕ ನೀರನ್ನು ನುಂಗುವುದು ಸುಲಭವಲ್ಲ. ಹೀಗಾಗಿ ನೀವು ಈ ಸಂದರ್ಭದಲ್ಲಿ ಒತ್ತಾಯದಿಂದ ನೀರು ಕುಡಿಯುತ್ತೀರಾ. ಇದರಿಂದ ನಿಮ್ಮ ಸೋಡಿಯಂ ಅಂಶದಲ್ಲಿ ಸಮಸ್ಯೆ ಉಂಟಾಗಲಿದೆ. ಇದು ಕಿಡ್ನಿ ಸಮಸ್ಯೆ ಹಾಗೂ ರಕ್ತದೊತ್ತಡ ಸಮಸ್ಯೆ ಉಂಟು ಮಾಡಬಹುದು.

ಫ್ರೀಜ್​ ಮಾಡಲಾದ ನೀರನ್ನು ಎಂದಿಗೂ ಕುಡಿಯಬಾರದು. ತಣ್ಣನೆಯ ನೀರು ಹೊಟ್ಟೆಯಲ್ಲಿರುವ ಹೊಟ್ಟೆಯಲ್ಲಿರುವ ಅಗ್ನಿ ತತ್ವದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಇದರಿಂದ ಜೀರ್ಣಕ್ರಿಯೆ ಹದಗೆಡುತ್ತದೆ.

9 Reasons Why You Should Include Ashwagandha in Your Diet Right Away!

ಇದನ್ನು ಓದಿ : Beauty Tips: ಬ್ಲಾಕ್​ ಟೀ ಸೇವನೆಯ ಹಿಂದೆ ಅಡಗಿದೆ ಬ್ಯೂಟಿ ಸೀಕ್ರೆಟ್​..!

ಇದನ್ನೂ ಓದಿ : Coffee Chicory : ಕಾಫಿಯಲ್ಲಿರೋ ಚಿಕೋರಿ ಬಗ್ಗೆ ನಿಮಗೆಷ್ಟು ಗೊತ್ತು

Comments are closed.