constipation in children : ಮಕ್ಕಳು ಮಲಬದ್ಧತೆಯಿಂದ ಬಳಲುತ್ತಿದ್ದಾರೆಯೇ ? ಇಲ್ಲಿದೆ ಮನೆಮದ್ದು

constipation in children : ಮಗುವಿನ ಪೋಷಣೆ ಹಾಗೂ ಆರೋಗ್ಯದ ವಿಚಾರ ಅಂದರೆ ಸಾಕು ಪೋಷಕರು ತುಸು ಹೆಚ್ಚೇ ಜಾಗರೂಕರಾಗಿ ಇರುತ್ತಾರೆ. ಸಾಂಕ್ರಾಮಿಕ ರೋಗಗಳು ಮಗುವಿಗೆ ಬಾರದಂತೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುತ್ತಾರೆ. ಸಾಕಷ್ಟು ಪೋಷಣೆಯ ನಡುವೆಯೂ ಅನೇಕ ಮಕ್ಕಳು ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತವೆ.

ಮಲಬದ್ಧತೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯವಾದ ಕಾಯಿಲೆ ಎಂದು ಎಂದಿಗೂ ಕಡೆಗಣಿಸಬೇಡಿ. ಪ್ರಸ್ತುತ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಮಕ್ಕಳು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಾರೆ. ಮಕ್ಕಳು ಪ್ರಕೃತಿ ಮಡಲಿನಲ್ಲಿ ಆಡೋದಕ್ಕಿಂತ ಒಳಾಂಗಣದಲ್ಲಿ ಆಡೋದು ಹೆಚ್ಚು. ದೇಹಕ್ಕೆ ಶ್ರಮ ಕೊಡುವದಕ್ಕಿಂತ ಮೊಬೈಲ್​ ಹಾಗೂ ಟಿವಿ ಮುಂದೆ ಕಾಲ ಕಳೆಯುತ್ತಾರೆ. ಇವೆಲ್ಲವೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಮಕ್ಕಳ ತಜ್ಞರ ಅಭಿಪ್ರಾಯವಾಗಿದೆ.

ಹಾಗಾದರೆ ಮಕ್ಕಳಲ್ಲಿ ಮಲಬದ್ಧತೆ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳು ಯಾವುದು..?

ಕಡಿಮೆ ಚಲನೆ/ ಹೊರಾಂಗಣ ಆಟ ಇರೋದಿಲ್ಲ/ ಹೆಚ್ಚು ಕುಳಿತುಕೊಳ್ಳುವುದು
ಕಡಿಮೆ ನೀರು ಕುಡಿಯುವುದು
ಜಂಕ್​ಫುಡ್​ಗಳ ಅತಿಯಾದ ಸೇವನೆ
ತಡರಾತ್ರಿ ಊಟ
ತಡವಾಗಿ ಮಲಗುವುದು
ಅನಿಯಮಿತ ಸಮಯದಲ್ಲಿ ಆಹಾರ ಸೇವನೆ
ನಿದ್ರೆಗೆ ತೊಂದರೆ
ಕರುಳಿನ ಆರೋಗ್ಯದಲ್ಲಿ ವ್ಯತ್ಯಾಸ
ಆಹಾರದಲ್ಲಿ ದ್ರವಯುಕ್ತ ಪದಾರ್ಥ ಇಲ್ಲದಿರುವುದು


ಹಾಗಾದರೆ ಮಲಬದ್ಧತೆಯಿಂದ ಮಕ್ಕಳನ್ನು ಕಾಪಾಡಿಕೊಳ್ಳಬೇಕು ಅಂದರೆ ನೀವು ಏನು ಮಾಡಬೇಕು..?

ಪ್ರತಿದಿನ ಬೆಳಗ್ಗೆ ಮಕ್ಕಳಿಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಲು ಬೆಚ್ಚಿಗಿನ ನೀರನ್ನು ನೀಡಿ
ರಾತ್ರಿ ನೆನೆಸಿಟ್ಟ ನಾಲ್ಕೈದು ಒಣದ್ರಾಕ್ಷಿಯನ್ನು ಮಕ್ಕಳಿಗೆ ಬೆಳಗ್ಗೆ ತಿನ್ನಲು ನೀಡಿ.
ಮಲಗುವ ಮುನ್ನ ಮಕ್ಕಳಿಗೆ 1 ಲೋಟ ಬೆಚ್ಚಗಿನ ಹಸುವಿನ ಹಾಲನ್ನು ಅರ್ಧ ಚಮಚ ಹಸುವಿನ ತುಪ್ಪದೊಂದಿಗೆ ನೀಡಿ.
ಹಸಿ ಆಹಾರದ ಬದಲು ಬೇಯಿಸಿದ ಆಹಾರವನ್ನೇ ಹೆಚ್ಚಾಗಿ ನೀಡಿ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
ಸಕ್ಕರೆಯುಕ್ತ, ಜಂಕ್​ ಫುಡ್​ಗಳ ಸೇವನೆ ಬೇಡಬೇಬೇಡ. ಬದಲಿಗೆ ಮಕ್ಕಳಿಗೆ ಹಣ್ಣು – ಹಂಪಲುಗಳನ್ನು ನೀಡಿ .
ಮಕ್ಕಳಿಗೆ ಆದಷ್ಟು ಹೊರಾಂಗಣ ಆಟಕ್ಕೆ ಪ್ರೋತ್ಸಾಹ ನೀಡಿ.
ಇಷ್ಟಾದರೂ ಮಕ್ಕಳಲ್ಲಿ ಮಲಬದ್ಧತೆ ಕಡಿಮೆಯಾಗದಿದ್ದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇದನ್ನು ಓದಿ : Benefits of Banana : ಒಂದು ಬಾಳೆಹಣ್ಣಿನಲ್ಲಿ ಅಡಗಿದೆ ಅಗಾಧ ಪ್ರಮಾಣದ ಆರೋಗ್ಯಕರ ಅಂಶ

ಇದನ್ನೂ ಓದಿ : Winter Hair Care Tips : ಚಳಿಗಾಲದಲ್ಲಿ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಮುಕ್ತಿಗೆ ಇಲ್ಲಿದೆ ಮನೆಮದ್ದು

Simple ayurvedic remedies to relieve constipation in children

Comments are closed.