Millets ನಿಂದ ಮಾಡಬಹುದಾದ ತಿಂಡಿಗಳನ್ನು ಟ್ರೈ ಮಾಡಿದ್ದೀರಾ?ಅದು ರುಚಿಗೂ ಸೈ, ಆರೋಗ್ಯಕ್ಕೂ ಜೈ!

Millets(ಸಿರಿಧಾನ್ಯ) ಗಳಿಂದ ಆಹಾರ ತಯಾರಿಸುವುದು ಭಾರತೀಯರಿಗೆ ಶತಮಾನಗಳಷ್ಟು ಹಿಂದಿನದು. ದೇಶದಾದ್ಯಂತ ರಾಗಿ, ಜೋಳ ಮತ್ತು ಬಾಜ್ರಾಗಳಂತಹ ಸಿರಿಧಾನ್ಯ(Millets)ಗಳನ್ನು ಬೇರೆ ಬೇರೆ ಸಮುದಾಯದವರು ತಿನ್ನುವ ಶ್ರೀಮಂತ ಇತಿಹಾಸವಿದೆ. ಕುತೂಹಲದ ವಿಷಯವೇನೆಂದರೆ, ಪ್ರಪಂಚದಲ್ಲೇ ಈ ಸಿರಧಾನ್ಯಗಳನ್ನು ಅತ್ಯಂತ ಹೆಚ್ಚಾಗಿ ಉತ್ಪಾದಿಸುವ ರಾಷ್ಟ್ರ ಭಾರತ. ಈ ಪೋಶಕಾಂಶಯುಕ್ತ ಧಾನ್ಯಗಳು ಪ್ರೋಟೀನ್‌, ಕಾರ್ಬೋಹೈಡ್ರೇಟ್‌ ಮತ್ತು ಫೈಬರ್‌ಗಳಿಂದಲೇ ತುಂಬಿದೆ. ರಾಗಿಯಲ್ಲಿರುವ ಕ್ಯಾಲ್ಸಿಯಂ ಅಂಶವು ಉಳಿದೆಲ್ಲ ಧಾನ್ಯಗಳಿಗಿಂತ 3 ಪಟ್ಟು ಅಧಿಕವಾಗಿದೆ. ಹಾಲಿಗಿಂತಲೂ ಅಧಿಕ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಗ್ಲುಟನ್‌ ಫ್ರೀ ಆಗಿರುವ ಜೋಳದಲ್ಲಿಆಂಟಿಒಕ್ಸಿಡೆಂಟ್‌ ಸಂಪೂರ್ಣಧಾನ್ಯಗಳಿಗಿಂತ 3–4 ಪಟ್ಟು ಹೆಚ್ಚಿದೆ. ಜೊತೆಗೆ ಇದು ಸುಪರ್‌ ಇಮ್ಯುನಿಟಿ ಬೂಸ್ಟರ್‌ ಸಹ ಆಗಿದೆ. ಇದರಿಂದ ಮಾಡುವ ಕೇಕ್‌ ಬಹಳ ರುಚಿಕರವಾಗಿರುತ್ತದೆ.

ಆದರೂ, ನಾವು, ಈ ಸೂಪರ್‌ ಫುಡ್‌ಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿಲ್ಲ. ಗೋಧಿ ಮತ್ತು ಅಕ್ಕಿಯಂತಹ ಒಂದೇ ತೆರನಾದ ಆಹಾರಗಳನ್ನು ಉಪಯೋಗಿಸುವ ಪದ್ಧತಿ ಬೆಳೆಸಿಕೊಂಡ ಈ ದೇಶದಲ್ಲಿ ಸ್ವತಃ ಬೆಳೆಯುವ ಸಿರಿಧಾನ್ಯಗಳ ಮಹತ್ವವನ್ನವು ನಾವು ಮರೆತಂತಿದೆ. ಏನೇ ಆಗಲೀ ನಿಧನವಾಗಿ ಬದಲಾವಣೆಗಳಾಗುತ್ತಿವೆ. ಈ ಸಿರಿಧಾನ್ಯಗಳು ತಮ್ಮದೇ ಆದ ಬ್ರಾಂಡ್‌ಗಳಲ್ಲಿ ಬರುತ್ತಿವೆ. ಇದಕ್ಕೆ ನಮ್ಮ ಸರಕಾರ ಮತ್ತು ಯುನೈಟೆಡ್‌ ನೇಷನ್ಸ್‌ಗಳೂ ಸಹ ಈ ಸಿರಿಧಾನ್ಯಗಳ ಪ್ರಯೋಜನಗಳನ್ನು ಹೇಳುವುದರಲ್ಲಿ ಕೈಜೋಡಿಸಿವೆ. ಇತ್ತೀಚೆಗೆ ಮಂಡನೆಯಾದ ಬಜೆಟ್‌ನಲ್ಲೂ ಕೂಡಾ ಈ ಧಾನ್ಯಗಳ ಬಗ್ಗೆ ಫೋಕಸ್‌ ಮಾಡಿದೆ ಮತ್ತು 2023 ಅನ್ನು ಇಂಟರ್‌ನ್ಯಾಷನಲ್‌ ಇಯರ್‌ ಆಪ್‌ ಮಿಲೆಟ್ಸ್‌ ಎಂದು ಗೊತ್ತುಪಡಿಸಲಾಗಿದೆ.
ಇದನ್ನೂ ಓದಿ: Haldi Doodh: ಅರಿಶಿಣ ಹಾಲಿನ ಪ್ರಯೋಜನಗಳೇನು ಗೊತ್ತಾ!

ನಾವು ನಿಮಗಾಗಿ ಈ ಮಿಲೆಟ್ಸ್‌ಗಳಿಂದ ಮಾಡಬಹುದಾದ ಅಂತಹ 5 ರೆಸಿಪಿಗಳನ್ನು ಹೇಳಿದ್ದೇವೆ. ಅವುಗಳನ್ನು ನಿಮ್ಮ ನಿತ್ಯದ ಡಯಟ್‌ನಲ್ಲಿ ಒಂದಾಗಿಸಿ.

  1. ಮಿಲೆಟ್‌ ಚಪಾತಿ:
    ಅತ್ಯಂತ ಸುಲಭವಾಗಿ ಮಿಲೆಟ್‌ಗಳನ್ನು ಸೇವಿಸುವ ರೀತಿಯೆಂದರೆ ಅದು ಚಪಾತಿಗಳಲ್ಲಿ ಸೇರಿಸುವುದು. ಅರ್ಧದಷ್ಟು ಗೋಧಿಹಿಟ್ಟಿನ ಜೊತೆಗೆ ಈ ಮಿಲೆಟ್‌ನ ಹಿಟ್ಟುಗಳಾದ ರಾಗಿ ಅಥವಾ ಜೋಳವನ್ನು ಉಳಿದ ಅರ್ಧದಷ್ಟು ಭಾಗವನ್ನು ಸೇರಿಸಿ, ಚಪಾತಿ ಹಿಟ್ಟು ತಯಾರಿಸಿ. ಕೆಲವು ವಾರಗಳ ನಂತರ ಸಂಪೂರ್ಣವಾಗಿ ಅದರದೇ ಚಪಾತಿ ಸೇವಿಸಲು ರೂಢಿಯಾಗುತ್ತದೆ. ಈ ಸೂಪರ್‌ ಧಾನ್ಯದಿಂದ ಮಾಡಿದ ಚಪಾತಿಯ ಜೊತೆಗೆ ಯಾವುದೇ ತರಕಾರಿಗಳ ಕಾಂಬಿನೇಷನ್‌ ರುಚಿಯಾಗಿರುತ್ತದೆ.
  2. ಮಿಲೆಟ್‌ ಇಡ್ಲಿ:
    ವಿಷಾದವೆಂದರೆ ಅಕ್ಕಿಯಿಂದ ತಯಾರಿಸಿದ ಇಡ್ಲಿ ಕಾರ್ಬೋಹೈಡ್ರೇಟ್‌ ನಿಂದಲೇ ಕೂಡಿರುವುದು ಆಲಸ್ಯವನ್ನು ಹೆಚ್ಚಿಸುತ್ತದೆ ಅನ್ನುವ ಸಂಗತಿ ಹಲವರಿಗೆ ತಿಳಿದಂತಿಲ್ಲ. ಮುಂದಿನ ಬಾರಿ ಇಡ್ಲಿಯಿಂದ ಬ್ರೆಕ್‌ಫಾಸ್ಟ್‌ ಮಾಡಬೇಕೆಂದಿದ್ದರೆ ಅಕ್ಕಿಯ ಬದಲಾಗಿ ರಾಗಿ ಉಪಯೋಗಿಸಿ. ಈಮಿಶ್ರಣದಿಂದ ಮಾಡಿದ ಇಡ್ಲಿಯು ರುಚಿಯಾಗಿದ್ದು ಬಹಳ ಸಮಯದವರೆಗೆ ಹಸಿವೆಯನ್ನು ತಡೆಯುತ್ತದೆ ಮತ್ತು ಆರೋಗ್ಯಕ್ಕೂ ಉತ್ತಮ.
  3. ಮಿಲೆಟ್‌ ಫ್ರೈಡ್‌ ರೈಸ್‌ ಅಥವಾ ಫುಲಾವ್‌ :
    ಮಿಲೆಟ್‌ಗಳಿಲ್ಲಿ ಒಂದಾದ ಫಾಕ್ಸ್‌ಟೈಲ್‌ ಅಥವಾ ನವಣೆ ಅಕ್ಕಿಯಿಂದ ಮಾಡಬಹುದಾದ ಫ್ರೈಡ್‌ ರೈಸ್‌, ಫುಲಾವ್‌ಗಳ ಬದಲೀ ಧಾನ್ಯವಾಗಬಲ್ಲದು. ಈ ಧಾನ್ಯವು ಉತ್ತಮ ಕ್ಯಾಲೋರಿ ಹೊಂದಿದ್ದು ಎನರ್ಜಿಯ ಪವರ್‌ಹೌಸ್‌ ಆಗಿದೆ. ಇದನ್ನು ಡಯಟ್‌ನಲ್ಲಿ ಸೇರಿಸಿಕೊಳ್ಳುವುದರಿಂದ ಗ್ಲೈಸೆಮಿಕ್‌ ಕಂಟ್ರೋಲ್‌ ಹೆಚ್ಚಿಸಲು ಮತ್ತು ಇನ್ಸುಲಿನ್‌, ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಕಾರಿ. ಇದು ಟೈಪ್‌ 2 ಡಯಾಬಿಟೀಸ್‌ ಇರುವವರಿಗೆ ಗ್ಲೂಕೋಸ್‌ ಕರಗಿಸಲು ಸಹಾಯಮಾಡುತ್ತದೆ.
  1. ಮಿಲೆಟ್‌ ಗಂಜಿ:
    ಒಂದೇ ತರಹದ ಗಂಜಿ ಕುಡಿದು ಬೋರ್‌ ಆಗಿದೆಯೇ? ಹಾಗಾದರೆ, ರಾಗಿ, ಅಕ್ಕಿ, ಹೆಸರು ಬೇಳೆ ಮತ್ತು ಜೋಳ ಇವುಗಳನ್ನು ಸೇರಿಸಿ ಗಂಜಿ ಮಾಡಿಲು ಪ್ರಯತ್ನಿಸಿ. ಕೆಲವು ತಾಜಾ ಹಣ್ಣುಗಳನ್ನು ಸೇರಿಸಿ. ಇದು ಅತ್ಯಂತ ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ಇದು ದೊಡ್ಡವರಷ್ಟೇ ಅಲ್ಲ ಮತ್ತು ಮಕ್ಕಳೂ ಸಹ ಇಷ್ಟಪಡುವ ಆಹಾರವಾಗಬಲ್ಲದು.
  2. ಮಿಲೆಟ್‌ ಪ್ಯಾನ್‌ಕೇಕ್‌:
    ಮಿಲೆಟ್‌ನಿಂದ ಕೇಕ್‌ ಮಾಡಬಹುದು ಅಂದರೆ ನಿಮಗೆ ಆಶ್ಚರ್ಯವೆನಿಬಹುದಲ್ಲವೇ? ನಿಜವಾಗಿಯೂ, ಮಿಲೆಟ್‌ಗಳಿಂದ ಮಾಡಿದ ಪ್ಯಾನ್‌ಕೇಕ್‌ ಬಹಳ ರುಚಿಯಾಗಿರುತ್ತದೆ. ಯಾವಾಗಲೂ ಬಳಸುವ ಹಿಟ್ಟಿನ ಬದಲಿಗೆ ಮಿಲೆಟ್‌ ಹಿಟ್ಟುಗಳಾದ ನವಣೆ, ಬಾಜ್ರಾ, ಮತ್ತು ಅಮರಂತ್‌ಗಳನ್ನು ಉಪಯೋಗಿಸಿ. ಇದು ಸಂಪೂರ್ಣವಾಗಿ ನಿಮ್ಮ ವಾರಾಂತ್ಯದ ಆಲಸ್ಯ ಹೋಗಲಾಡಿಸುವ ರುಚಿಯಾದ ಬ್ರೆಕ್‌ಫಾಸ್ಟ್‌ ಆಗಬಲ್ಲದು.

ಇದನ್ನೂ ಓದಿ:Avocado Oil: ಏನಿದು ಅವಕಾಡೊ ಎಣ್ಣೆ? ಸೌಂದರ್ಯಕ್ಕೂ ಆರೋಗ್ಯಕ್ಕೂ ಭಾರೀ ಉತ್ತಮ

(Amazing Benefits of Millets in daily diet)

Comments are closed.