Tender Coconut : ಎಳನೀರು ರೋಗಗಳಿಗೆ ರಾಮಬಾಣ

ಇತ್ತೀಚಿನ ವರ್ಷಗಳಲ್ಲಿ, ಎಳನೀರು ಸಾಕಷ್ಟು ಟ್ರೆಂಡಿ ಪಾನೀಯವಾಗಿದೆ. ನೈಸರ್ಗಿಕವಾಗಿ ಸಿಹಿ ಮತ್ತು ಜಲಸಂಚಯನದ ಜೊತೆಗೆ, ಎಳನೀರು ಹಲವಾರು ಪ್ರಮುಖ ಪೋಷಕಾಂಶಗಳಿಂದ ಕೂಡಿದೆ. ತೆಂಗಿನಕಾಯಿಗಳು (Coconut) ಉಷ್ಣವಲಯದ ಹವಾಮಾನದಲ್ಲಿ ವೈಜ್ಞಾನಿಕವಾಗಿ ಕೊಕೊಸ್ ನ್ಯೂಸಿಫೆರಾ (Cocos Nucifera)ಎಂದು ಕರೆಯಲ್ಪಡುವ ಮರಗಳ ಮೇಲೆ ಬೆಳೆಯುತ್ತವೆ ಮತ್ತು ಸಸ್ಯಶಾಸ್ತ್ರೀಯವಾಗಿ ಇದನ್ನು ಹಣ್ಣು ಎಂದು ಪರಿಗಣಿಸಲಾಗುತ್ತದೆ. ತೆಂಗಿನ ನೀರು ಎಳೆಯ, ಹಸಿರು ತೆಂಗಿನಕಾಯಿಯ ಮಧ್ಯದಲ್ಲಿ ಕಂಡುಬರುವ ದ್ರವವಾಗಿದೆ. ಇದು ಹಣ್ಣುಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ತೆಂಗು ಕಾಯಿ ಆಗಲು ಸುಮಾರು 10-12 ತಿಂಗಳುಗಳು ಬೇಕು. ಎಳನೀರು ಸಾಮಾನ್ಯವಾಗಿ 6-7 ತಿಂಗಳ ವಯಸ್ಸಿನ ಎಳೆಯ ತೆಂಗಿನಕಾಯಿಗಳಿಂದ ಬರುತ್ತದೆ. ಸರಾಸರಿ ಹಸಿರು ತೆಂಗಿನಕಾಯಿ ಅರ್ಧ ಅಥವಾ ಒಂದು ಕಪ್ ಎಳನೀರನ್ನು ಒದಗಿಸುತ್ತದೆ. ತೆಂಗಿನ ನೀರಿನಲ್ಲಿ ಶೇಕಡಾ 94% ನೀರು ಮತ್ತು ಕಡಿಮೆ ಕೊಬ್ಬನ್ನು ಹೊಂದಿರುತ್ತದೆ. (Tender Coconut)

  • ಒಂದು ಎಳನೀರು ಒಂದು ಇಂಜೆಕ್ಷನ್ ಗೆ ಸಮ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಕೆಳಗೆ ಇರುವ ಸಮಸ್ಯೆಗಳಿಗೆ ಪರಿಹಾರ ಅಂದ್ರೆ ಅದು ಎಳನೀರು ಮಾತ್ರ ಪ್ರತಿದಿನ ಒಂದು ಎಳನೀರು ಸೇವನೆ ಮಾಡಿ ಈ ಸಮಸ್ಯೆಗಳಿಂದ ದೂರವಿರಿ.
  • ಹೃದಯದ ಆರೋಗ್ಯಕ್ಕೆ ಎಳನೀರು ಇದು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್‌ ಹೆಚ್ಚು ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಿಸಬಹುದು, ಹಾಗೂ ಹಾರ್ಟ್ ಅಟ್ಯಾಕ್ ಆಗುವುದನ್ನು ತಡೆಯುತ್ತದೆ.  
  • ಬೊಜ್ಜು ಕರಗಲು ದಿನಾ ಅರ್ಧ ಗಂಟೆ ವ್ಯಾಯಾಮ ಹಾಗೂ ಒಂದು ಎಳನೀರು ಕುಡಿಯಿರಿ, ಬೊಜ್ಜು ಕರಗುವುದು, ಮುಖದ ಕಾಂತಿ ಕೂಡ ಹೆಚ್ಚುವುದು.
  • ದೇಹದಲ್ಲಿ ಮೆಗ್ನಿಷಿಯಂ ಅಂಶ ಕಡಿಮೆಯಾದರೆ ಮೈಗ್ರೇನ್‌ ಕಾಣಿಸುವುದು. ಮೈಗ್ರೇನ್‌ಗೆ ಎಳನೀರಿನಲ್ಲಿರುವ ಮೆಗ್ನಿಷಿಯಂ ಒಳ್ಳೆಯದೆಂದು ಎಕ್ಸ್‌ಪರ್ಟ್ಸ್‌ (Experts) ಕೂಡ ಸಲಹೆ ನೀಡುತ್ತಾರೆ. ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ ಇದರಲ್ಲಿ ಅಮೈನೋ ಆ್ಯಸಿಡ್‌ ಇದ್ದು ಸಕ್ಕರೆಯಂಶವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
  • ವಯಸ್ಸಾದಂತೆ ಸುಕ್ಕಾಗುವುದು ನೈಸರ್ಗಿಕ ನಿಯಮವಾದರೂ ಯೌವನ ಕಳೆ ಬೇಗನೆ ಮಾಸದಿರಲು ಎಳನೀರು ಸಹಾಯ ಮಾಡುತ್ತದೆ.
  • ಎಳನೀರಿನಲ್ಲಿರುವ ಪೊಟಾಷ್ಯಿಯಂ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ ಎಂದು ಸಾಬೀತಾಗಿದೆ.
  • ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ತುಂಬಾ ಸುಸ್ತು ಅನಿಸುವುದು. ಒಂದು ಎಳನೀರು ದಿನಪೂರ್ತಿ ಚಟುವಟಿಕೆಯಿಂದ ಇರಲು ಚೈತನ್ಯ ನೋಡುವುದು. ಹಾಗಾಗಿ ನಿಮ್ಮ ಹತ್ತಿರದ ಅಂಗಡಿಯ ಕಪಾಟಿನಲ್ಲಿ ಸಕ್ಕರೆಯೊಂದಿಗೆ ಸೇರಿಸಿದ ಬ್ರಾಂಡ್ಗಳ ಒಂದು ಶ್ರೇಣಿಯನ್ನು ತಪ್ಪಿಸಲು ಎಳನೀರನ್ನು ಕುಡಿಯಲು ಪ್ರಾರಂಭಿಸಿ.

    ಇದನ್ನೂ ಓದಿ: Insurance Payment Restrictions: ವಾಹನ ಚಾಲನೆಯಲ್ಲಿ ಅಪಘಾತ ಸಂಭವಿಸಿದರೆ ವಿಮಾ ಪಾವತಿ ನಿಬಂಧನೆಗಳು

    ಇದನ್ನೂ ಓದಿ:: WhatsApp new Feature : ಹೊಸ ಫೀಚರ್ ತರಲು ಮುಂದಾದ ವಾಟ್ಸಾಪ್ ; ಇನ್ನಷ್ಟು ಇಮೊಜಿ ರಿಯಾಕ್ಷನ್ ಬಳಕೆ ಸಾಧ್ಯ


    (Amazing Health Benefits of Tender Coconut Water)

Comments are closed.