ವೈರಸ್ ಸೋಂಕಿಗೆ ಮನೆಮದ್ದು ಪರಿಹಾರ !

0
  • ಶ್ರೀರಕ್ಷಾ ಬಡಾಮನೆ

ದುಡ್ಡಿಗಿಂತ ಆರೋಗ್ಯವು ತುಂಬಾ ಮುಖ್ಯವೆನ್ನುವುದು ಕೊರೊನಾ ದಾಳಿ ಇಂದ ಅರ್ಥವಾಗಿರುವುದಂತೂ ಸುಳ್ಳಲ್ಲ. ನಮ್ಮನ್ನು ಕಾಡುವ ಕೊರೊನಾ ಸೇರಿದಂತೆ ನಾನಾ ರೀತಿಯ ವೈರಸ್ ಗಳಿಂದ ಮುಕ್ತರಾಗೋದು ಹೇಗೆ.

ನಿತ್ಯವೂ ಜನರು ಒಂದಿಲ್ಲೊಂದು ರೀತಿಯಲ್ಲಿ ವೈರಸ್ ವಿರುದ್ದ ಹೋರಾಡುವ ತಂತ್ರಗಳನ್ನು ಹುಡುಕುತ್ತಾರೆ. ದುಬಾರಿ ಖರ್ಚಿಲ್ಲದೇ ಮನೆಮದ್ದಿನ ಮೂಲಕ ವೈರಸ್ ಸಮಸ್ಯೆಯಿಂದ ಪಾರಾಗಬಹುದು.

ಮರ ಗಡಿಗಳ ನಾಶ ಇತ್ತೀಚಿನ ವರ್ಷಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಆದ್ರೆ ವೈರಸ್ ತಡೆಗೆ ಕೆಲ ಗಿಡಗಳೇ ಪೂರಕ.

ಕಹಿಬೇವು, ಪಾರಿಜಾತ, ದಾಸವಾಳ, ಬಿಲ್ವಪತ್ರೆ ಮುಂತಾದ ಔಷದೀಯ ಗಿಡ ಗಳನ್ನು ಮನೆಯ ಸುತ್ತ ನೆಡಬೇಕು ಇದರಿಂದ ಮನೆಯ ವಾತಾವರಣ ಹಿತಕರ ಹಾಗೂ ಆರೋಗ್ಯಯುತ ವಾಗಿರುತ್ತೆ.

ಕಹಿಬೇವು ತುಂಬಾ ಉಪಯುಕ್ತ ವಾದ ಗಿಡ. ಈ ಗಿಡದ ತೊಗಟೆ ಗಳು ಮತ್ತು ಇದರ ಎಲೆಗಳನ್ನು ಮನೆಯ ದ್ವಾರದಲ್ಲಿ ಇರಿಸುವುದರಿಂದ ಆದಷ್ಟು ರೋಗ ರುಜಿನಗಳು ಮನೆಯ ಒಳಗೆ ಪ್ರವೇಶಿಸದಂತೆ ತಡೆಯುತ್ತದೆ.

ಕಾಮಧೇನು ಎಂದು ಕರೆಯಲ್ಪಡುವ ಹಸುವಿನ ಸಗಣಿಯನ್ನು ಬೆರಣಿ ಮಾಡಿ ಅದನ್ನು ವಾರಕ್ಕೆ ಎರಡು ಬಾರಿ ಮನೆಯ ಸುತ್ತ ಹೋಗೆ ಹಾಕುವುದರಿಂದ ಕೂಡ ಈ ವೈರಸ್ ಗಳು ಮನೆಯ ಒಳಗೆ ಬರುವುದರಿಂದ ಪಾರಾಗಬಹುದು.

ಇನ್ನು ದೇಹಕ್ಕೆ ಬಂದರೆ ಸಲ್ಪ ಬೇವಿನ ತೊಗಟೆ ,ಅಮೃತ ಬಳ್ಳಿಯ ಎಲೆ ಮತ್ತು ಕಡ್ಡಿ, ತುಳಸಿಯ ಕಡ್ಡಿ, ಎಲೆ, ಪಾರಿಜಾತದ ತೊಗಟೆ ಆತವ ಕಡ್ಡಿ, ಬಿಲ್ವ ಪತ್ರೆಯ ಎಲೆ ಮತ್ತು ತೊಗಟೆಯ ಜೊತೆಗೆ ಅರಶಿನ ಹಾಕಿ ನೀರಿನಲ್ಲಿ ಹಾಕಿ ಕುದಿಸಿ ಕಷಾಯ ಮಾಡಿ ಕುದಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

https://kannada.newsnext.live/health-grow-immunitypower-turmeric-neem-ashwagandha-tulasi/

ಯಾವುದೇ ವೈರಸ್ ಗಳಿಗೂ ನಮ್ಮ ದೇಹವು ಸ್ಥಳವಾಗದಂತೆ ತಡೆಯುತ್ತದೆ .ಇದನ್ನು ವಾರಕ್ಕೆ ಎರಡು ಬಾರಿ ಮಾಡಿದರು ಸಾಕಾಗುತ್ತದೆ. ಈ ವೈರಸ್ ಗಳು ನಮ್ಮ ದೇಹಕ್ಕೆ ಯಾವುದೇ ಪರಿಣಾಮ ವಾಗ ಬಾರದೆಂದರೆ ನಾವು ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಬೇಕು. ಆದರಿಂದ ಆಹಾರ ಕ್ರಮವನ್ನು ಸರಿ ಪಡಿಸಿಕೊಳ್ಳಬೇಕು ಆದಷ್ಟು ಕರಿದ ತಿಂಡಿ ಗಳನ್ನ ಕಡಿಮೆ ತಿನ್ನುವುದು ಕೂಡ ತುಂಬಾ ಉಪಕಾರಿ ಯಾಗಿದೆ.

https://kannada.newsnext.live/sandlwood-sudeep-bigboss-show-ends-corona-covid-19-rules/
Leave A Reply

Your email address will not be published.