Banana Shake Side Effects : ಮಕ್ಕಳಿಗೆ ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಕೊಡುವ ಮೊದಲು ಇದನ್ನೊಮ್ಮೆ ಓದಿ…

ಹಾಲು (Milk), ಹಣ್ಣು (Fruits) ಇವುಗಳು ಮಕ್ಕಳಿಗೆ ಶಕ್ತಿಯನ್ನು ನೀಡುತ್ತದೆ. ಅದಕ್ಕಾಗಿ ಬಹಳಷ್ಟು ಜನರು ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ (Banana Milk Shake) ಕೊಡುತ್ತಾರೆ ಇಲ್ಲವೇ ಬಾಳೆಹಣ್ಣು ಮತ್ತು ಹಾಲು ಒಟ್ಟಿಗೆ ಕೊಡುತ್ತಾರೆ. ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಬಹಳ ಜನಪ್ರಿಯ ಅಷ್ಟೇ ರುಚಿಯಾದ ಪಾನೀಯ ಹೌದು. ಇದು ಬೆಳಗ್ಗಿನ ಬ್ರೆಕ್‌ಫಾಸ್ಟ್‌ ನಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಉತ್ತಮವಾದುದಲ್ಲ ಎಂದು ಆಹಾರ ತಜ್ಞರು ಹೇಳುತ್ತಾರೆ. ಬಾಳೆಹಣ್ಣು ಮತ್ತು ಹಾಲು ಇವೆರಡೂ ಬೇರೆ ಬೇರೆ ರೀತಿಯ ಪೋಷಕಾಂಶಗಳನ್ನು ಹೊಂದಿದೆ. ಬಾಳೆಹಣ್ಣಿನಲ್ಲಿ ನಾರಿನಾಂಶ ಅಧಿಕವಾಗಿದೆ. ಆದರೆ ಹಾಲಿನಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಅವೆರಡನ್ನು ಒಟ್ಟಿಗೆ ಸೇವಿಸಿದಾಗ ಅದು ಒಂದೇ ರೀತಿಯ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ (Banana Shake Side Effects). ಬದಲಿಗೆ ಕೆಲವು ದುಷ್ಟರಿಣಾಮಗಳನ್ನು ಉಂಟು ಮಾಡುತ್ತದೆ. ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಕುಡಿಯುವುದರಿಂದ ಕೆಲವು ಅಡ್ಡ ಪರಿಣಾಮಗಳಿವೆ.

ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಕುಡಿಯುವುದರಿಂದಾಗುವ ಅಡ್ಡ ಪರಿಣಾಮಗಳು :

ಸಕ್ಕರೆಯ ಪ್ರಮಾಣ ಏರಬಹುದು :
ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಕುಡಿಯುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಸ್ಥಿರವಾಗಿರದೇ ಏರುಪೇರಾಗಬಹುದು. ಕಡಿಮೆ GI ಮಟ್ಟ ಹೊಂದಿರುವ ಅಂದರೆ ಸಕ್ಕರೆಯ ಅಂಶ ಕಡಿಮೆ ಇರುವ ಹಣ್ಣುಗಳನ್ನು ಸಹ ಮಕ್ಕಳಿಗೆ ಕೊಡುವುದು ಉತ್ತಮ.

ತೂಕ ಹೆಚ್ಚಾಗಬಹುದು :
ಬಾಳೆಹಣ್ಣಿನಲ್ಲಿ ಅತಿ ಹೆಚ್ಚು ಸಕ್ಕರೆಯ ಪ್ರಮಾಣ ಇರುತ್ತದೆ. ಇದು ದೇಹದ ತೂಕ ಏರಲು ಉತ್ತೇಜಿಸುತ್ತದೆ. ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ನಲ್ಲಿ ಮೇಲಿಂದ ಸ್ವಲ್ಪ ಸಕ್ಕರೆಯನ್ನು ಸೇರಿಸುವುದರಿಂದ ತೂಕ ಬಹು ಬೇಗನೆ ಏರುತ್ತದೆ. ಇದು ಮಕ್ಕಳಲ್ಲೂ ಬೊಜ್ಜು ಹೆಚ್ಚಾಗಲು ಕಾರಣವಾಗಿದೆ.

ಮಲಬದ್ಧತೆ ಕಾಣಿಸಬಹುದು :
ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆ ದೂರವಾಗುತ್ತದೆ ಎಂದು ನಾವೆಲ್ಲರೂ ಕೇಳಿದ್ದೇವೆ. ಆದರೆ ಪ್ರತಿದಿನ ಬಾಳೆಹಣ್ಣನ್ನು ತಿಂದು, ಜೊತೆಗೆ ಅದರ ಮಿಲ್ಕ್‌ ಶೇಕ್‌ನ್ನು ಕುಡಿದಾಗ ಅದರಿಂದ ಅಡ್ಡ ಪರಿಣಾಮಗಳು ಕಂಡು ಬರುತ್ತವೆ. ಇದು ದೀರ್ಘಕಾಲದ ಮಲಬದ್ಧತೆಗೂ ಕಾರಣವಾಗುತ್ತದೆ. ಏಕೆಂದರೆ ಬಾಳೆಹಣ್ಣಿನಲ್ಲಿ ಟ್ಯಾನಿಕ್‌ ಆಮ್ಲ್‌ವು ಅಧಿಕವಾಗಿದೆ. ಈ ರಾಸಾಯನಿಕವು ಸಣ್ಣ ಪ್ರಮಾಣದಲ್ಲಿ ಹಾನಿಕಾರಕವಲ್ಲ. ಅತಿಯಾದರೆ ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ. ಅದಕ್ಕಾಗಿ ಮಿತವಾಗಿ ತಿನ್ನಿ.

ಮೈಗ್ರೇನ್‌ ಕಾಣಿಸಬಹುದು :
ಸಂಶೋಧನೆಗಳಿಂದ ತಿಳಿದು ಬಂದಿದ್ದೇನೆಂದರೆ ಮೈಗ್ರೇನ್‌ಗೆ ಕೆಲವು ರಾಸಾಯನಿಕಗಳೂ ಕಾರಣ. ಬಾಳೆಹಣ್ಣಿನಲ್ಲಿ ಆ ರೀತಿಯ ಕೆಲವು ರಾಸಾಯನಿಕಗಳಿವೆ. ಅವು ಮೈಗ್ರೇನ್‌ ಅನ್ನು ಹೆಚ್ಚಿಸುತ್ತದೆ. ಮೈಗ್ರೇನ್‌ ಇರುವವರು ಬಾಳೆಹಣ್ಣು ಮತ್ತು ಅದರ ಮಿಲ್ಕ್‌ ಶೇಕ್‌ ಕುಡಿಯುವ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ :Rice Beauty tips :ಉಳಿದ ಅನ್ನ ಎಸೆಯುವ ಮುನ್ನ ಈ ಸ್ಟೋರಿ ಓದಿ

ಇದನ್ನೂ ಓದಿ : High Cholesterol : ಈ 5 ಹಣ್ಣುಗಳನ್ನು ತಿನ್ನಿ; ಅಧಿಕ ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳಿ…

(Banana Shake Side Effect Do you have this drink every day)

Comments are closed.