MP Renukacharya : ಚಂದ್ರಶೇಖರ್ ಸಾವಿನ ಪ್ರಕರಣ ವಿನಯ್ ಗೂರೂಜಿ ಆಶ್ರಮದಲ್ಲಿ ತನಿಖೆ

ಚಿಕ್ಕಮಗಳೂರು : ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ(MP Renukacharya) ತಮ್ಮನ ಮಗ ಚಂದ್ರಶೇಖರನ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತುಂಗಭದ್ರಾ ಕಾಲುವೆಯಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿರುವ ಚಂದ್ರಶೇಖರ್‌ ಸಾವಿನ ಪ್ರಕರಣದ ಕುರಿತು ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಸದ್ಯ ಪೊಲೀಸರು ವಿನಯ ಗುರೂಜಿ ಆಶ್ರಮಕ್ಕೆ ತೆರಳಿ ತನಿಖೆಯನ್ನು ಆರಂಭಿಸಿದ್ದಾರೆ.

ಚಂದ್ರಶೇಖರ ಸಾವಿಗೂ ಮುನ್ನ ತನ್ನ ಗೆಳೆಯ ಕಿರಣ್‌ನೊಂದಿಗೆ ಗೌರಿಗದ್ದೆಯ ಆಶ್ರಮಕ್ಕೆ ಭೇಟಿ ನೀಡಿದ್ದ. ಹೀಗಾಗಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ಪೊಲೀಸರು ಭೇಟಿ ನೀಡಿ ವಿನಯ್‌ ಗುರೂಜಿ ಬಳಿ ಚಂದ್ರಶೇಖರ್‌ ಸಾವಿನ ಬಗ್ಗೆ ಹಲವಾರು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇನ್ನು ಮೃತ ಚಂದ್ರಶೇಖರ್‌ ಆಶ್ರಮದ ಭಕ್ತರಾಗಿದ್ದರು.

MP Renukacharya ಸಹೋದರನ ಪುತ್ರನ ಸಾವು : ತನಿಖೆ ಚುರುಕು

ಚಂದ್ರಶೇಖರ್ ಸಾವಿನ ಬೆನ್ನಲ್ಲೇ ವಿಜಯ್ ಗುರೂಜಿ ಅವರು ಬುದ್ದಿಮಾತು ಹೇಳಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಪ್ರತೀ ಬಾರಿಯಂತೆಯೇ ಚಂದ್ರಶೇಖರ್ ಆಶ್ರಮಕ್ಕೆ ಬಂದಿದ್ದರು. ಆದರೆ ಆ ದಿನ ಮಾತ್ರ ತಡವಾಗಿ ಆಶ್ರಮಕ್ಕೆ ಬಂದಿರುವುದರಿಂದ ಆತನ ಜೊತೆ ಹೆಚ್ಚೇನು ಮಾತನಾಡಲಿಲ್ಲ. ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೆ. ಜಾಗ್ರತೆಯಿಂದ ಮನೆಗೆ ಹೋಗುವಂತೆ ಇಬ್ಬರಿಗೂ ಹೇಳಿ ಕಳಿಸಿದ್ದೆ. ಘಟನೆ ಬಗ್ಗೆ ನನಗೂ ನೋವಿರುವುದಾಗಿ ತನಿಖೆ ವೇಳೆಯಲ್ಲಿ ವಿನಯ ಗುರೂಜಿಯವರು ತಿಳಿಸಿರುತ್ತಾರೆ. ಇನ್ನೂ ಹೆಚ್ಚಿನ ತನಿಖೆಗಾಗಿ ಆಶ್ರಮದ ಸಿಬ್ಬಂದಿಗಳಿಂದಲೂ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಇದನ್ನೂ ಓದಿ : The big twist : ಚಂದ್ರಶೇಖರ್‌ ನಿಗೂಢ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಕೊನೆಯ ಆ ಕರೆಯಲ್ಲಿತ್ತಾ ಸಾವಿನ ಸೀಕ್ರೆಟ್

ಇದನ್ನೂ ಓದಿ : Suicide Case : ಶಿವಮೊಗ್ಗದ ಖ್ಯಾತ ವೈದ್ಯರ ಸೊಸೆ ನೇಣಿಗೆ ಶರಣು

ಇದನ್ನೂ ಓದಿ : Bandemath swamiji suicide case : ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್ ಪತ್ತೆ

ಇನ್ನು ನವೆಂಬರ್‌ 9ರಂದು ಶಾಸಕ ರೇಣುಕಾಚಾರ್ಯ ಮನೆಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಆಗಮಿಸಿ ಸಾಂತ್ವನ ಹೇಳಲಿದ್ದಾರೆ.ಇಂದು ಶವ ಪರೀಕ್ಷೆ ವರದಿ ಪೊಲೀಸರ ಕೈ ಸೇರುವ ನಿರೀಕ್ಷೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮೂರು ತಂಗಳನ್ನು ರಚಿಸಲಾಗಿದ್ದು, ಮೂರು ತಂಡಗಳಿಂದ ಮಹತ್ವದ ಮಾಹಿತಿಯನ್ನು ಸಂಗ್ರಹಿಸಲಾಗಿರುತ್ತದೆ. ಪೂರ್ವವಲಯ ಐಜಿಪಿ ಡಾ. ತ್ಯಾಗರಾಜನ್‌ ನಿರ್ದೇಶನದಂತೆ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್‌ರಿಂದ ತನಿಖೆ ನಡೆಯುತ್ತಿದೆ. ಸಿಎಂ ಶಾಸಕರ ಮನೆಗೆ ಬರುವುದರವೊಳಗೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ನಿರ್ಧಾರ ಮಾಡಲಾಗಿದೆ. ತಮ್ಮ ಸಹೋದರನ ಮಗನ ಸಾವಿನ ನಂತರ ಮನೆಯಲ್ಲೇ ಇದ್ದ ರೇಣುಕಾಚಾರ್ಯ ಶವ ಪರೀಕ್ಷೆ ವರದಿ ನೋಡಿಕೊಂಡು ಮುಂದಿನ ಹೆಜ್ಜೆಯನ್ನು ಇಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

MP Renukacharya Chandrasekhar’s death case investigated at Vinay Guruji Ashram

Comments are closed.