Gastric problem Solution : ಗ್ಯಾಸ್ಟ್ರಿಕ್‌ ಸಮಸ್ಯೆಗೆ ಬಾರ್ಲಿ ರಾಮಬಾಣ : ಒಮ್ಮೆ ಟ್ರೈ ಮಾಡಿ

ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆ ಸರಿಯಾಗಿ ಆಗದಿದ್ದಾಗ, ಸರಿಯಾದ ಸಮಯಕ್ಕೆ ಆಹಾರ ಮತ್ತು ನೀರಿನ ಸೇವನೆಯನ್ನು ಮಾಡದೇ ಇದ್ದಾಗ ಗ್ಯಾಸ್ಟ್ರಿಕ್‌ ಸಮಸ್ಯೆ(Gastric problem Solution) ಉಂಟಾಗುತ್ತದೆ. ನಮ್ಮ ದೇಹದಲ್ಲಿರುವ ಜಠರದಲ್ಲಿ ಉಂಟಾಗುವ ಉರಿಯನ್ನು ಗ್ಯಾಸ್ಟ್ರಿಕ್‌ ಎನ್ನಲಾಗುತ್ತದೆ. ಜಠರವು ನಾವು ತಿಂದಿರುವ ಆಹಾರವನ್ನು ಜೀರ್ಣಕ್ರಿಯೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನಾವು ತಿನ್ನುವ ಆಹಾರ ಮತ್ತು ನೀರಿನ ಆಧಾರದ ಮೇಲೆ ಗ್ಯಾಸ್ಟ್ರಿಕ್‌ ಉಂಟಾಗುತ್ತದೆ. ಈ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಬಾರ್ಲಿಯ ಮೂಲಕ ಸುಲಭ ರೀತಿಯಲ್ಲಿ ಉಪಶಮನ ಮಾಡಬಹುದಾಗಿದೆ. ಅದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಬಾರ್ಲಿ
  • ಶುಂಠಿ
  • ಜೀರಿಗೆ
  • ಧನ್ಯಕಾಳು

ಮಾಡುವ ವಿಧಾನ :
ಮೊದಲಿಗೆ ಒಂದು ಕಪ್‌ ಬಾರ್ಲಿಯನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಪುಡಿ ಮಾಡಿದ ಬಾರ್ಲಿಯನ್ನು ಒಂದು ಬಾಟಲಿಯಲ್ಲಿ ಶೇಖರಿಸಿ ಇಡಬೇಕು.
ನಂತರ ಒಂದು ಪಾತ್ರೆಯಲ್ಲಿ ನಾಲ್ಕು ಲೋಟ ನೀರಿಗೆ ಎರಡರಿಂದ ಮೂರು ಚಮಚ ಬಾರ್ಲಿ ಪುಡಿಯನ್ನು (ಬಿಸಿ ನೀರಿಗೆ ಬಾರ್ಲಿ ಪುಡಿ ಹಾಕಿದ್ದರೆ ಗಂಟು ಗಂಟಾಗುತ್ತದೆ)ಹಾಕಿ ಚೆನ್ನಾಗಿ ಮಿಕ್ಸ ಮಾಡಿಕೊಳ್ಳಬೇಕು. ನಂತರ ಅದನ್ನು ಗ್ಯಾಸ್‌ ಆನ್‌ ಮಾಡಿ ಅದಕ್ಕೆ ಒಂದು ಚಮಚ ಜೀರಿಗೆ, ಒಂದು ಚಮಚ ಧನ್ಯಕಾಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಚೆನ್ನಾಗಿ ಕುದಿಸಿದ ಮೇಲೆ ಅದನ್ನು ಸೊಸಿ ಕುಡಿಯಬೇಕು. ಇದನ್ನು ತುಂಬಾ ಗ್ಯಾಸ್ಟ್ರಿಕ್‌ ಆದಾಗ ಕುಡಿಯುವುದರಿಂದ ಕೂಡಲೆ ಉಪಶಮನವಾಗುತ್ತದೆ.

ಇದನ್ನೂ ಓದಿ : Hair Straightening Product : ಹೇರ್‌ ಸ್ಟ್ರೈಟ್ನಿಂಗ್ ಮಾಡಿದ್ರೆ ಮಹಿಳೆಯರಿಗೆ ಗರ್ಭಗೋಶ ಕ್ಯಾನ್ಸರ್

ಇದನ್ನೂ ಓದಿ : Sore Throat : ಚಳಿಗಾಲದಲ್ಲಿ ಉಂಟಾಗುವ ಸಾಮಾನ್ಯ ಗಂಟಲು ನೋವಿಗೆ ಈ ಮನೆಮದ್ದುಗಳೇ ಉತ್ತಮ ಪರಿಹಾರ

ಇದನ್ನೂ ಓದಿ : Protect your Skin Winter Season: ಚಳಿಗೆ ಚರ್ಮ ಒಡೆಯದಂತೆ ರಕ್ಷಿಸಿಕೊಳ್ಳಲು ಸುಲಭ ಪರಿಹಾರ

ಉಪಯೋಗ :
ಬಾರ್ಲಿ ಒಂದು ಜಾತಿಯ ಏಕದಳ ಧಾನ್ಯವಾಗಿರುತ್ತದೆ. ಬಾರ್ಲಿಯನ್ನು ಗಂಜಿ ಅಥವಾ ಪಾನೀಯಗಳ ರೂಪದಲ್ಲಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ಆರೋಗ್ಯವನ್ನು ನೀಡುತ್ತದೆ. ಬಾರ್ಲಿ ಸೇವನೆಯಿಂದಾಗಿ ದೇಹದ ಉಷ್ಣತೆಯನ್ನು ಸಮತೋಲದಲ್ಲಿ ಇಡುತ್ತದೆ. ಮೂತ್ರಕೋಶದಲ್ಲಿ ಸ್ಟೋನ್‌ ಅಥವಾ ಕಿಡ್ನಿ ಸ್ಟೋನ್ ಆದಾಗ ಬಾರ್ಲಿಯನ್ನು ನೀರಿನಲ್ಲಿ ಹಾಕಿ ಬಿಸಿ ಮಾಡಿ ಕುಡಿಯುವುದರಿಂದ ಸ್ಟೋನ್‌ ಮೂತ್ರದ ಮೂಲಕ ಹೊರಗೆ ಬರುತ್ತದೆ. ಅಷ್ಟೇ ಅಲ್ಲದೇ ದೇಹದಲ್ಲಿ ಬೇಡದೇ ಇರುವ ನೀರು ತುಂಬಿದಾಗ ಇದನ್ನು ಮಾಡಿ ಕುಡಿಯುದರಿಂದ ದೇಹದಲ್ಲಿ ಬೇಡದೇ ಇರುವ ನೀರನ್ನು ಹೊರಗೆ ಹಾಕುತ್ತದೆ. ಗರ್ಭಿಣಿಯರಿಗೆ ಹೊಟ್ಟೆಯಲ್ಲಿ ನೀರು ಜಾಸ್ತಿ ಆದಾಗ ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಸಮತೋಲವನ್ನು ಕಾಪಾಡುತ್ತದೆ.

Barley Remedy for Gastric Problem Solution : Try it once

Comments are closed.