Beans For Diabetes Patients: ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡುವ ಬೀನ್ಸ್‌ ಡಯಾಬಿಟಿಸ್‌ ರೋಗಿಗಳಿಗೆ ವರದಾನ

ಮಧುಮೇಹ ಅಥವಾ ಡಯಾಬಿಟಿಸ್‌ ಒಂದು ಅಪಾಯಕಾರಿ ಕಾಯಿಲೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವು (Blood Sugar Level) ಹೆಚ್ಚಾಗುವಂತೆ ಮಾಡುತ್ತದೆ. ಒಮ್ಮೆ ಮಧುಮೇಹಕ್ಕೆ ತುತ್ತಾದರೆ ಅದನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ. ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಸಹಾಯದಿಂದ ನಿಯಂತ್ರಣದಲ್ಲಿಡಬಹುದಷ್ಟೆ. ಇತ್ತೀಚಿನ ದಿನಗಳಲ್ಲಿ, ಕೆಟ್ಟ ಆಹಾರ ಪದ್ಧತಿ ಮತ್ತು ದುರಭ್ಯಾಸಗಳಿಂದಾಗಿ, ಮಧುಮೇಹವು ಹೆಚ್ಚು ಹೆಚ್ಚು ಜನರನ್ನು ಕಾಡುತ್ತಿದೆ. ಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿರಬಹುದು, ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಂಪೂರ್ಣವಾಗಿ ನಮ್ಮ ಕೈಯಲ್ಲಿದೆ. ಆಹಾರದ ಕಡುಬಯಕೆಗಳನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನು ಹತೋಟಿಗೆ ತರಬಹುದು. ಕಡಿಮೆ ಗ್ಲೈಸೆಮಿಕ್ಸ್‌ ಇಂಡೆಕ್ಸ್‌ ಇರುವ ಬೀನ್ಸ್‌, ಮಧುಮೇಹಿಗಳಿಗೆ ಹೇಗೆ ವರದಾನವಾಗಿದೆ (Beans For Diabetes Patients) ಇಲ್ಲಿದೆ ಓದಿ.

ಡಯಾಬಿಟಿಸ್‌ ರೋಗಿಗಳ ಆಹಾರ ಕ್ರಮ ಹೇಗಿರಬೇಕು?
ಡಯಾಬಿಟಿಸ್ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಕಡಿಮೆ ಗ್ಲೈಸೆಮಿಕ್‌ ಸೂಚ್ಯಂಕವಿರುವ ಆಹಾರಗಳನ್ನು ಸೇವಿಸಬೇಕು. ನಿಯಮಿತವಾಗಿ ವ್ಯಾಯಾಮ ಮತ್ತು ದೇಹದ ತೂಕ ಕಾಪಾಡಿಕೊಳ್ಳಬೇಕು.

ಮಧುಮೇಹ ರೋಗಿಗಳಿಗೆ ಬೀನ್ಸ್ ಹೇಗೆ ಪ್ರಯೋಜನಕಾರಿಯಾಗಿದೆ?
ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಕಪ್ಪು ಬೀನ್ಸ್ ಅಥವಾ ಕೆಂಪು ಕಿಡ್ನಿ ಬೀನ್ಸ್ ಮಧುಮೇಹದ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಅಧ್ಯಯನದ ಪ್ರಕಾರ ಬೀನ್ಸ್‌ ಸೇವಿಸಿದ ಟೈಪ್ -2 ಮಧುಮೇಹ ಹೊಂದಿರುವ ವಯಸ್ಕರು ರಕ್ತದಲ್ಲಿನ ಸಕ್ಕರೆಯ ಅಂಶವು ಹೆಚ್ಚಾಗುವುದಿಲ್ಲ. ಬೀನ್ಸ್ ತಿಂದ 90, 120 ಮತ್ತು 150 ನಿಮಿಷಗಳ ನಂತರವೂ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಿಯೇ ಇರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಪ್ರೋಟೀನ್‌ ನಿಂದ ಸಮೃದ್ಧವಾಗಿರುವ ಬೀನ್ಸ್ ಮಧುಮೇಹ ಹೊಂದಿರುವ ರೋಗಿಗಳಿಗೆ ಪ್ರಯೋಜನಕಾರಿ ಎಂದು ವೈದ್ಯರು ಹೇಳುತ್ತಾರೆ. ಅವುಗಳಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಕೂಡ ಇದೆ. ಇದು ಅಕ್ಕಿ ಅಥವಾ ಆಲೂಗಡ್ಡೆಗಿಂತ ಹೆಚ್ಚು ಪ್ರೋಟೀನ್ ಅಂಶವನ್ನು ಹೊಂದಿದೆ ಎಂದು ಹೇಳಿದೆ.

ಬೀನ್ಸ್ ಬಳಸುವುದು ಹೇಗೆ?
ವೈದ್ಯರ ಪ್ರಕಾರ, ಬೀನ್ಸ್ ಅನ್ನು ಅನ್ನ ಅಥವಾ ರೊಟ್ಟಿಯೊಂದಿಗೆ ತಿನ್ನಬಹುದು. ಕೆಲವರು ಇದನ್ನು ಸೈಡ್ ಡಿಶ್ ಆಗಿಯೂ ಬಳಸುತ್ತಾರೆ. ಅಷ್ಟೇ ಅಲ್ಲ, ಬೀನ್ಸ್ ಅನ್ನು ಸಲಾಡ್‌ಗಳು, ಸೂಪ್‌ಗಳು ಅಥವಾ ಕ್ಯಾಸರೋಲ್‌ಗಳಲ್ಲಿಯೂ ಬಳಸಬಹುದು. ಆದರೆ, ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಅವಶ್ಯಕ. ಬೀನ್ಸ್‌ನಿಂದ ಗರಿಷ್ಠ ಪ್ರಯೋಜನಗಳನ್ನು ಪಡೆದುಕೊಳ್ಳಲು, ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಸೇವಿಸುವುದು ಉತ್ತಮ ಎಂದು ಕೆಲವು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ : Horoscope Today : ನಿತ್ಯಭವಿಷ್ಯ ಮೇ 22

ಇದನ್ನೂ ಓದಿ : ನಿದ್ರೆ ಬರ್ತಾ ಇಲ್ಲವೇ ? ನಿದ್ರಾಹೀನತೆಯನ್ನು ತಡೆಯಲು ಇಲ್ಲಿದೆ ಸುಲಭ ವಿಧಾನ

(Beans For Diabetes Patients. How beans can lower blood sugar level)

Comments are closed.