ಈ ಬಾರಿಯೂ ನಮಗಿಲ್ಲ ಕಪ್‌ : ಪ್ಲೇ ಆಫ್‌ನಿಂದ ಹೊರ ಬಿದ್ದ ಆರ್‌ಸಿಬಿ

ಬೆಂಗಳೂರು : (RCB vs GT IPL 2023) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಅಂತಿಮ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅಬ್ಬರದ ಶತಕದ ನಡುವಲ್ಲೇ ಗುಜರಾತ್‌ ಟೈಟಾನ್ಸ್‌ ವಿರುದ್ದ 6 ವಿಕೆಟ್‌ಗಳ ಸೋಲು ಕಂಡಿದೆ. ಈ ಮೂಲಕ ಐಪಿಎಲ್‌ ಪ್ಲೇ ಆಫ್‌ನಿಂದ ಹೊರಬಿದ್ದಿದ್ದು, ಮುಂಬೈ ಇಂಡಿಯನ್ಸ್‌ ತಂಡ ನಾಲ್ಕನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ನೀಡಿದ್ದ 198 ರನ್‌ ಬೆನ್ನತ್ತಿದ ಗುಜರಾತ್‌ ಟೈಟಾನ್ಸ್‌ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಶುಭಮನ್‌ ಗಿಲ್‌ ಹಾಗೂ ವಿಜಯ್‌ ಶಂಕರ್‌ ಜೋಡಿ ಭರ್ಜರಿ ಬ್ಯಾಟಿಂಗ್‌ ನಡೆದಿದೆ. 14 ಎಸೆತಗಳನ್ನು ಎದುರಿಸಿದ್ದ ವೃದ್ದಿಮಾನ್‌ ಸಾಹ 12 ರನ್‌ ಗಳಿಸಿ ಮೊಹಮ್ಮದ್‌ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ನಂತರ ಇನ್ನಿಂಗ್ಸ್‌ ಕಟ್ಟಿದ್ದ ಶುಭಮನ್‌ ಗಿಲ್‌ 52 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್‌ ನೆರವಿನಿಂದ 104 ರನ್ ಬಾರಿಸಿದ್ದಾರೆ. ಇನ್ನು ವಿಜಯ ಶಂಕರ್‌ 35 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ೫೩ರನ್‌ ಬಾರಿಸಿದ್ದಾರೆ. ವಿಜಯ ಶಂಕರ್‌ ಔಟಾಗುತ್ತಲೇ ಕ್ರೀಸ್‌ಗೆ ಬಂದ ಶನಕ ಶೂನ್ಯಕ್ಕೆ ಔಟಾದ್ರೆ, ಡೇವಿಡ್‌ ಮಿಲ್ಲರ್‌ 6 ಹಾಗೂ ರಾಹುಲ್‌ ತಿವಾಟಿಯ 4 ರನ್‌ ಬಾರಿಸಿ ನಿರಾಸೆ ಮೂಡಿಸಿದ್ದಾರೆ. ಅಂತಿಮವಾಗಿ ಗುಜರಾತ್‌ ಟೈಟಾನ್ಸ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 198 ರನ್‌ ಬಾರಿಸಿದೆ. ರಾಯಲ್‌ ಚಾಲೆಂಜರ್ಸ್‌ ತಂಡದ ಪರ ಮೊಹಮ್ಮದ್‌ ಸಿರಾಜ್‌ 2, ವೈಶಾಖ್‌ ವಿಜಯ ಕುಮಾರ್‌ ಹಾಗೂ ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಬ್ಯಾಟಿಂಗ್‌ ನಡೆಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB vs GT IPL 2023) ತಂಡದ ಸವಾಲಿನ ಮೊತ್ತ ಪೇರಿಸಿದೆ. ವಿರಾಟ್‌ ಕೊಹ್ಲಿ (Virat Kohli) ಅವರ ಅಬ್ಬರದ ಶತಕದ ನೆರವಿನಿಂದ ಬೆಂಗಳೂರು ತಂಡ ಗುಜರಾತ್‌ ಟೈಟಾನ್ಸ್‌ಗೆ ಬರೋಬ್ಬರಿ 198 ರನ್‌ ಸವಾಲು ನೀಡಿತ್ತು. ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಗಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಕಣಕ್ಕೆ ಇಳಿದಿದ್ದ ವಿರಾಟ್‌ ಕೊಹ್ಲಿ ಹಾಗೂ ಫಾಪ್‌ ಡೂಪ್ಲಸಿಸ್‌ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 67 ರನ್‌ ಗಳಿಸಿತ್ತು. 28 ರನ್‌ ಗಳಿಸಿದ ಡುಪ್ಲಸಿಸ್‌ ನೂರ್‌ ಅಹಮದ್‌ಗೆ ವಿಕೆಟ್‌ ಒಪ್ಪಿಸಿದ್ರೆ, ನಂತರ ಬಂದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಆಟ ಕೇವಲ 11 ರನ್‌ಗಳಿಗೆ ಸೀಮಿತವಾಯ್ತು. ಯುವ ಆಟಗಾರ ಮಹಿಪಾಲ್‌ 3 ಎಸೆತ ಎದುರಿಸಿ ಕೇವಲ ಒಂದು ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದಾರೆ.

ಒಂದೆಡೆಯಲ್ಲಿ ವಿಕೆಟ್‌ ಉರುಳುತ್ತಿದ್ದರೂ ಕೂಡ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಿದ ವಿರಾಟ್‌ ಕೊಹ್ಲಿ 61ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 101ರನ್‌ ಗಳಿಸಿದ್ದಾರೆ. ಇನ್ನು ಮೈಕಲ್‌ ಬ್ರೆಸ್‌ವೆಲ್‌ 16 ಎಸೆತಗಳಲ್ಲಿ 26 ರನ್‌ ಗಳಿಸಿದ್ರೆ, ಅನುಜ್‌ ರಾವತ್‌ 15 ಎಸೆತಗಳಲ್ಲಿ 23 ರನ್‌ ಸಿಡಿಸಿ ತಂಡ ಉತ್ತಮ ಮೊತ್ತ ನೆರವೇರುವಲ್ಲಿ ಸಹಕಾರ ನೀಡಿದ್ರು. ಆದರೆ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಮೊದಲ ಎಸೆತಗಳಲ್ಲಿಯೇ ಯಶ್‌ ದುಲ್‌ಗೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಗುಜರಾತ್‌ ತಂಡದ (RCB vs GT) ಪರ ನೂರ್‌ ಅಹಮದ್‌ 3 , ಮೊಹಮದ್‌ ಶೆಮಿ, ಯಶ್‌ ದುಲ್‌, ರಶೀದ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಅಂತಿಮ ಲೀಗ್‌ ಪಂದ್ಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ನಿರ್ಣಾಯವಾಗಿತ್ತು. ಒಂದೊಮ್ಮೆ ಬೆಂಗಳೂರು ತಂಡ ಗೆಲುವು ಸಾಧಿಸಿದ್ರೆ ಪ್ಲೇ ಆಫ್‌ ಹಂತಕ್ಕೆ ಪ್ರವೇಶ ಪಡೆಯಲಿತ್ತು. ಆದರೆ ಬೆಂಗಳೂರು ತಂಡ ಐಪಿಎಲ್‌ನಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಪ್ಲೇ ಆಫ್‌ ಪ್ರವೇಶಿಸಿದೆ. ಗುಜರಾತ್‌ ಟೈಟಾನ್ಸ್‌ ತಂಡ ಅಗ್ರಸ್ಥಾನಿಯಾಗಿ ಪ್ಲೇ ಆಫ್‌ ಪ್ರವೇಶಿಸಿದ್ದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಎರಡು ಹಾಗೂ ಮೂರನೇ ಸ್ಥಾನಿಯಾಗಿ ಪ್ಲೇ ಆಫ್‌ ಪ್ರವೇಶಿಸಿವೆ.

ಮೊದಲ ಪ್ಲೇ ಆಪ್‌ ಪಂದ್ಯ ಮೇ 23 ರಂದು ಸಂಜೆ 7.30 ಕ್ಕೆ ನಡೆಯಲಿದ್ದು, ಅಗ್ರಸ್ಥಾನಿ ಗುಜರಾತ್‌ ಟೈಟಾನ್ಸ್‌ ವಿರುದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಸೆಣೆಸಾಡಲಿದೆ. ಎರಡನೇ ಪ್ಲೇ ಆಫ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಸೆಣೆಸಾಡಲಿವೆ. ಕಳೆದ ಬಾರಿ ಗುಜರಾತ್‌ ಟೈಟಾನ್ಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಐಪಿಎಲ್‌ ನಲ್ಲಿ ಅತೀ ಹೆಚ್ಚು ಬಾರಿ ಚಾಂಪಿಯನ್‌ ಆಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಪ್ಲೇ ಆಫ್‌ ಪ್ರವೇಶಿಸಿದ್ರೆ, ಹೊಸ ತಂಡಗಳಾಗಿರುವ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಪ್ಲೇ ಆಫ್‌ ಪ್ರವೇಶ ಪಡೆದಿವೆ.

ಇದನ್ನೂ ಓದಿ : Rahul out of WTC final : ರಾಹುಲ್‌ಗೆ ಮತ್ತೊಮ್ಮೆ ಕೈ ಕೊಟ್ಟ ಅದೃಷ್ಟ, WTC ಫೈನಲ್‌ನಿಂದ ಔಟ್

ಇದನ್ನೂ ಓದಿ : RCB vs GT : ವಿರಾಟ್‌ ಕೊಹ್ಲಿ ಸಿಡಿಲಬ್ಬರದ ಶತಕ, ಗುಜರಾತ್‌ ಗೆ 198 ರನ್‌ ಸವಾಲು

Comments are closed.