Baby Cough Home Remedy : ಮಕ್ಕಳ ಕೆಮ್ಮಿಗೆ ಮನೆಮದ್ದಿನಲ್ಲಿದೆ ಪರಿಹಾರ

0

ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಜಾಗೃತಿವಹಿಸಿದ್ರೂ ಕಡಿಮೆಯೆನಿಸಿ ಬಿಡುತ್ತೆ. ಅದ್ರಲ್ಲೂ ಸಣ್ಣ ಮಕ್ಕಳಲ್ಲಂತೂ ಪದೇ ಪದೇ ಕಾಯಿಲೆಗಳು ಕಾಣಿಸಿಕೊಳ್ಳುವುದು ಮಾಮೂಲು. ಮಕ್ಕಳನ್ನು ಪದೇ ಪದೇ ಕಾಡುವ ಶೀತ ಹಾಗೂ ಕೆಮ್ಮು (Baby Cough) ಹೈರಾಣಾಗಿಸಿ ಬಿಡುತ್ತೆ. ಪುಟಾಣಿಗಳಿಗೆ ಕೆಮ್ಮು ಬಾದಿಸಿದ್ರೆ ಸಾಕು ಪೋಷಕರ ಪಾಲಿಗದು ನಿದ್ದೆಯಿಲ್ಲದ ರಾತ್ರಿಗಳು. ಮಕ್ಕಳಲ್ಲಿ ಕಾಡುವ ಶೀತ ಹಾಗೂ ಕೆಮ್ಮಕ್ಕೆ ಯಾವುದೇ ಅಡ್ಡಪರಿಣಾಮಗಳಿಲ್ಲದ ಮನೆ ಮದ್ದಿನಲ್ಲಿದೆ (Home Remedy) ಸರಳ ಪರಿಹಾರ. ಸರಳ ಸೂತ್ರಗಳನ್ನು ಅನುಸರಿಸಿ ಮಕ್ಕಳನ್ನು ಕೆಮ್ಮಿನಿಂದ ಪಾರು ಮಾಡಿ.

 best Home remedy for baby cough

ಎಣ್ಣೆ ಮಸಾಜ್
ಮಕ್ಕಳಿಗೆ ಶೀತ, ಕೆಮ್ಮದ ((Baby Cough)) ಜೊತೆಗೆ ಮೂಗುಕಟ್ಟುವ ಸಮಸ್ಯೆಯಿದ್ರೆ ಎಣ್ಣೆ ಮಸಾಜ್ ಬಹಳಸೂಕ್ತ. ನೀಲಗಿರಿ ಎಣ್ಣೆ, ರೋಸ್ ಮೆರಿ ಎಣ್ಣೆ ಹಾಗೂ ಪುದೀನಾ ಎಣ್ಣೆಯನ್ನು ಬಳಸಿ ಮಕ್ಕಳಿಗೆ ಹದವಾಗಿ ಮಸಾಜ್ ಮಾಡಬೇಕು. ಮಸಾಜ್ ಮಾಡಿದ ನಂತರದಲ್ಲಿ ಮಕ್ಕಳಿಗೆ ಉಣ್ಣೆಯ ಬಟ್ಟೆಯನ್ನು ತೊಡಿಸುವುದರಿಂದ ಕೆಮ್ಮು ಬಹುಬೇಗನೆ ಕಡಿಮೆಯಾಗುತ್ತದೆ.

 best Home remedy for baby cough

ಎದೆಗೆ ಹಚ್ಚಿ ಅರಶಿಣ
ಇನ್ನು ಮಕ್ಕಳನ್ನು ನಿರಂತರವಾಗಿ ಕಾಡುವ ಕೆಮ್ಮುವಿನ ರಕ್ಷಣೆಗೆ ಅರಶಿಣ ಬಹಳ ಸೂಕ್ತ. ಅರಶಿಣ ಪುಡಿಯನ್ನು ಬಿಸಿ ಮಾಡಿ ಅದನ್ನು ಎದೆಗೆ ಉಜ್ಜಿ ಹಾಲು ಕುಡಿಸಬೇಕು. ನಿತ್ಯವೂ ಬೆಳಗ್ಗಿ ಮತ್ತು ಸಂಜೆಯ ಹೊತ್ತಲ್ಲಿ ಮಾಡಿದ್ರೆ ಕೆಮ್ಮ ನಿಯಂತ್ರಣಕ್ಕೆ ಬರುತ್ತದೆ.

 best Home remedy for baby cough

ಹಬೆ ಕೊಡುವುದು ಅತ್ಯಂತ ಸೂಕ್ತ
ಕೆಮ್ಮ ಮತ್ತು ಶೀತದಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲು ಮಕ್ಕಳಿಗೆ ಹಬೆ (ಆವಿ) ಕೊಡುವುದು ಬಹಳ ಸೂಕ್ತ. ಕುದಿಸಿದ ನೀರಿನಿಂದ ಹಬೆ ಬರುವಾಗ ಟವಲ್ ನ್ನು ಹಬೆಗೆ ಹಿಡಿಯಬೇಕು. ನಂತರ ಅದೇ ಟವಲ್ ನಿಂದ ಮಗುವಿನ ಮೈಯನ್ನು ಹದವಾಗಿ ಉಜ್ಜುವುದರಿಂದ ಶಾಖ ದೇಹಕ್ಕೆ ಸಿಗುತ್ತದೆ. ಇನ್ನು ಹದವಾಗಿ ವಿಕ್ಸ್ ಅಥವಾ ಅಮೃತಾಂಜನ ಕೂಡ ಬಳಕೆ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಬೆನ್ನಿನ ಭಾಗವನ್ನು ನಿಧಾನಕ್ಕೆ ಉಜ್ಜುತ್ತಾ ಬಂದರೆ ಕಟ್ಟಿದ ಮೂಗು ತೆರೆಯಲು ಹೆಚ್ಚು ಸಹಕಾರಿಯಾಗುತ್ತದೆ.

 best Home remedy for baby cough

ಜೇನು, ಕರಿಮೆಣಸು, ತುಳಿಸಿ
ಮಕ್ಕಳ ಆರೋಗ್ಯವನ್ನು ಮನೆಯಲ್ಲಿ ಸಿಗುವ ಜೇನುತುಪ್ಪ, ಕರಿಮೆಣಸು ಹಾಗೂ ತುಳಸಿ ಹೆಚ್ಚು ಸೂಕ್ತ. ಔಷಧೀಯ ಗುಣವನ್ನು ಹೊಂದಿರುವ ಅರ್ಧ ಚಮಚ ಜೇನುತುಪ್ಪಕ್ಕೆ 1-2 ಪ್ರಮಾಣದಲ್ಲಿ ಕರಿಮೆಣಿನ ಪುಡಿಯನ್ನು ಸೇರಿಸಿಕೊಳ್ಳಬೇಕು. ನಂತರ ಜೇನುತುಪ್ಪ ಹಾಗೂ ಕರಿಮೆಣಸಿನ ಮಿಶ್ರಣವನ್ನು ಮಾಡಿಕೊಂಡು ಅದಕ್ಕೆ ತುಳಸಿರಸವನ್ನು ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

 best Home remedy for baby cough

ಇದನ್ನೂ ಓದಿ :  ಇನ್ಮುಂದೆ ಅಲ್ಟ್ರಾ ಸೌಂಡ್ ಸ್ಕಾನಿಂಗ್ ಮೂಲಕವೂ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಹಚ್ಚಬಹುದು

ಇದನ್ನೂ ಓದಿ : ಸರ್ವ ಮಾನಸಿಕ ರೋಗಗಳಿಗೆ ರಾಮಬಾಣ ಧ್ಯಾನ; ಯಾವುದೇ ತರಬೇತಿ ಇಲ್ಲದೆ ನೀವೂ ಟ್ರೈ ಮಾಡಿ

(best Home remedy for baby cough)

Leave A Reply

Your email address will not be published.