Best Superfoods : ಯಾವಾಗಲೂ ಫಿಟ್‌ ಆಗಿರಲು ಈ ಸೂಪರ್‌ಫುಡ್‌ಗಳು ನಿಮಗೆ ಸಹಾಯ ಮಾಡುತ್ತವೆ; ತಪ್ಪದೇ ಇವುಗಳನ್ನು ಸೇವಿಸಿ

ಬದಲಾಗುತ್ತಿರುವ ಋತುಮಾನಗಳ ಕಾಲದಲ್ಲಿ ಅನೇಕ ಸಣ್ಣ ಪುಟ್ಟ ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಅದಕ್ಕಾಗಿ ನಮ್ಮನ್ನು ನಾವು ಫಿಟ್‌ ಆಗಿ ಇರಿಸಿಕೊಳ್ಳಲು ದೇಹಕ್ಕೆ ಶಕ್ತಿ ಒದಗಿಸುವಂತಹ ಉತ್ತಮ ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ. ಅವು ನಮ್ಮನ್ನು ಫಿಟ್‌ ಆಗಿ ಇರಿಸುವುದರ ಜೊತೆಗೆ ರೋಗಗಳಿಂದಲೂ ಕಾಪಾಡುತ್ತವೆ. ಕೆಲವು ಸೂಪರ್‌ ಫುಡ್‌ಗಳ (Best Superfoods) ಸೇವನೆಯಿಂದ ನಮ್ಮ ಇಡೀ ದೇಹಕ್ಕೆ ಪ್ರಯೋಜನವಿದೆ. ಏಕೆಂದರೆ ಅವುಗಳು ವಿಟಮಿನ್‌, ಪ್ರೋಟೀನ್‌ ಹಾಗೂ ಖನಿಜಗಳಿಂದ ಕೂಡಿರುತ್ತವೆ. ಅವುಗಳನ್ನು ನಾವು ವಿವಿಧ ರೀತಿಯಲ್ಲಿ ಸೇವಿಸಬಹುದು. ಹೇಗೆ ತಿಂದರೂ ಅವು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ ಸೂಪರ್‌ಫುಡ್‌ಗಳ ಬಗ್ಗೆ ಇಲ್ಲಿದೆ ಓದಿ.

ನಮ್ಮನ್ನು ಯಾವಾಗಲು ಫಿಟ್‌ ಆಗಿರುವಂತೆ ನೋಡಿಕೊಳ್ಳುವ ಸೂಪರ್‌ಫುಡ್‌ಗಳು :

ಅಗಸೆ ಬೀಜ :
ಒಮೆಗಾ–3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಅಗಸೆ ಬೀಜ ಒಂದು ಉತ್ತಮ ‌‌ಸೂಪರ್ ಫೂಡ್‌ ಆಗಿದೆ. ಇದು ದೇಹದಲ್ಲಿ ತೈಲಗಳ ಅಂಶವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಮತ್ತು ಚರ್ಮವನ್ನು ತೇವವಾಗಿರಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್‌ ಫ್ರೀ ಆಗಿರುವ ಅಗಸೆ ಬೀಜವು ತೂಕ ಇಳಿಕೆಗೆ ಉತ್ತಮ ಸೂಪರ್‌ಫುಡ್‌ ಆಗಿದೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು, ಕೂದಲು ಉದುರುವುದನ್ನು ತಡೆಯಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಅಗಸೆ ಬೀಜ ಬಹಳ ಪ್ರಯೋಜನಕಾರಿಯಾಗಿದೆ.

ಪಪ್ಪಾಯಿ :
ಪಪ್ಪಾಯಿ ಎಲ್ಲಾ ಋತುವಿನಲ್ಲಿಯೂ ಸೇವಿಸಬಹುದಾದ ಹಣ್ಣು. ಇದು ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿದೆ. ಈ ಹಣ್ಣನ್ನು ಮಧುಮೇಹ ಮತ್ತು ಹೃದ್ರೋಗ ಸಮಸ್ಯೆ ಇರುವವರೂ ಸಹ ತಿನ್ನಬಹುದಾಗಿದೆ. ಪಪ್ಪಾಯಿಯು ಮಹಿಳೆಯರಿಗೆ ಬಹಳ ಉತ್ತಮವಾಗಿದೆ. ಹೇಗೆಂದರೆ ಅನಿಯಮಿತ ಋತುಚಕ್ರವನ್ನು ಹೊಂದಿರುವ ಮಹಿಳೆಯರಿಗೆ ಇದರಿಂದ ಬಹಳ ಪ್ರಯೋಜನವಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಮೂಲವಾಗಿದೆ.

ತೆಂಗಿನಕಾಯಿ :
ತೆಂಗಿನಕಾಯಿ ಒಂದು ಸೂಪರ್‌ಫುಡ್‌ ಆಗಿದೆ ಏಕೆಂದರೆ ಇದನ್ನು ಅಡುಗೆಗೆ, ಸೌಂದರ್ಯಕ್ಕೆ, ತಿನ್ನಲು ಹೀಗೆ ಎಲ್ಲಾ ರೀತಿಯಲ್ಲೂ ಬಳಸಬಹುದು. ತೆಂಗಿನೆಣ್ಣೆಯು ಬಾಡಿ ಲೋಷನ್‌ಗಳು, ಫೇಸ್ ಕ್ರೀಮ್‌ಗಳು ಅಥವಾ ಚರ್ಮದ ಮೇಲೆ ಅನ್ವಯಿಸುವ ಉತ್ತಮವಾದ ಮಾಯಿಶ್ಚರೈಸರ್ ಆಗಿದೆ. ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿರುವ ಇದನ್ನು ಆಹಾರಗಳಲ್ಲಿ ಸೇರಿಸಿಕೊಳ್ಳುವುದರಿಂದ ಅದ್ಭುತವಾದ ಪರಿಣಾಮಗಳನ್ನು ಪಡೆದುಕೊಳ್ಳಬಹುದಾಗಿದೆ.

ಅಲೋವೆರಾ:
ಚರ್ಮದ ಸಮಸ್ಯೆಗಳು, ಮೊಡವೆಗಳು, ಚರ್ಮದ ಟ್ಯಾನ್‌ ಮುಂತಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅಲೋವೆರಾವನ್ನು ವಿವಿಧ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಚರ್ಮದ ರಚನೆಯನ್ನು ಸುಧಾರಿಸಲು ಮತ್ತು ವಯಸ್ಸಾಗುವಿಕೆಯನ್ನು ನಿಧಾನಗೊಳಿಸಲು ಅಲೋವೆರಾ ಜೆಲ್ ಅನ್ನು ಬಳಸಲಾಗುತ್ತದೆ. ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆ ಮತ್ತು ಎದೆಯುರಿ ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಕಾಂತಿಯುತವಾದ ಚರ್ಮವನ್ನು ನೀಡುತ್ತದೆ ಮತ್ತು ಜೀರ್ಣಕಾರಿ ಪ್ರಯೋಜನಗಳನ್ನು ನೀಡುತ್ತದೆ.

ಇದನ್ನೂ ಓದಿ : Healthy Lifestyle- 4 tips : ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಬಳಸಿ ಈ 4 ಸರಳ ಸೂತ್ರಗಳು

ಇದನ್ನೂ ಓದಿ : Diabetes Symptoms : ದೇಹದ ಈ ಹೊರ ಅಂಗಾಂಗಗಳು ಹೇಳುತ್ತವೆ ನಿಮಗೆ ಮಧುಮೇಹ ಇದೆಯೇ ಅಥವಾ ಇಲ್ಲವೇ ಎಂದು…

(Best Superfoods that give you a good and healthy life)

Comments are closed.