ಹಿತ್ತಲ ಕಳೆ, ಪುರಾಣದ ಸೌಗಂಧಿಕಾ ಪುಷ್ಪ ನಿಮಗೆ ಗೊತ್ತಾ ?

0
  • ರಕ್ಷಾ ಬಡಾಮನೆ

ಈ ಗಿಡ ಯಾವುದೇ ಇರಲಿ ಅದರೆ ಅದರಲ್ಲಿರೋ ಔಷದೀಯ ಗುಣಗಳು ತರ್ಕಕ್ಕೆ ನಿಲುಕದ್ದು ಎಂದರೆ ತಪ್ಪಾಗದು. ಸಾಮಾನ್ಯವಾಗಿ ಮನೆಯ ಸುತ್ತಮುತ್ತಲಿನ ಸ್ಥಳದಲ್ಲಿ ಅರಶಿನ ಗಿಡದ ರೀತಿಯಲ್ಲಿ ಬೆಳೆಯುವ ಸೌಗಂಧಿಕಾ ಪುಷ್ಪ ಅಥವಾ ಸುಗಂಧಿ ಗಿಡವನ್ನು ನೀವು ನೋಡಿರುತ್ತೀರಿ. ಕಳೆ ಎಂದು ಕಿತ್ತು ಬಿಸಾಡಿ ಇರಬಹುದು. ಈ ಗಿಡವು ಹಳದಿ, ಬಿಳಿ ಅಥವಾ ಬಿಳಿ ಬಣ್ಣದ ಹೂವಿನಲ್ಲಿ ಹಳದಿ ನಾಮದ ಹೂಗಳು ಬೆಳೆಯುತ್ತದೆ. ಇದರ ಸೌಂದರ್ಯ ಮತ್ತು ಸುಗಂದಕ್ಕೆ ಮಾರು ಹೋಗದವರೆ ಇಲ್ಲ.

ಈ ಗಿಡಕ್ಕೆ ಹೆಚ್ಚು ಪಾಲನೆ ಪೋಷಣೆಗಳ ಅಗತ್ಯವಿಲ್ಲ ಸಲ್ಪ ನೀರು ಹೆಚ್ಚಿಗೆ ಇದ್ದರೆ ಸಾಕು ತುಂಬಾ ಸೊಂಪಾಗಿ ಬೆಳೆದು ಬಿಡುತ್ತದೆ. ಇದರ ಮೂಲ ನೇಪಾಳ ಮತ್ತು ಹಿಮಾಲಯ ಪರ್ವತ ಶ್ರೇಣಿಗಳು.

ಈ ಹೂವಿಗೆ ಇತಿಹಾಸ ಕೂಡ ಇದೆ ಒಂದು ಬೀಮನ ಕತೆ ಯಾದರೆ ಇನ್ನೊಂದು ಈ ಹೂವಿನ ಮೊಗ್ಗು ಸುರುಳಿ ಆಕಾರದಲ್ಲಿ ಇರುವುದರಿಂದ ಸ್ವತಂತ್ರ ಹೋರಾಟದ ಸಮಯದಲ್ಲಿ ಮಹತ್ವ ಸಂದೇಶಗಳನ್ನು ರವಾನಿಸಲು ಮಹಿಳೆಯರು ಈ ಹೂವುಗಳನ್ನು ಬಳಸುತ್ತಿದರಂತೆ. ಇದೊಂದು ಔಷದೀಯ ಸಸ್ಯ ಕೂಡ ಇದರ ಔಷದೀಯ ಗುಣಗಳು

ಇದರ ಹೂವು ಮತ್ತು ಬೇರುಗಳನ್ನು ಆಯುರ್ವೇದ ಚಿಕಿತ್ಸೆ ಮಾಡಲು ಉಪಯೋಗಿಸುತ್ತಾರೆ. ಉರಿ ಮೂತ್ರ ಮತ್ತು ಮೂತ್ರ ಕಟ್ಟುವ ಸಮಸ್ಯೆಗಳಿದ್ದಲ್ಲಿ ಬೇರಿನ ಕಷಾಯವನ್ನು ಬಹಳ ಉಪಯುಕ್ತ.

ಸುಗಂಧಿ ಗಿಡದ ಬೇರನ್ನು ಆನೆಕಾಲು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದರ ಬೇರನ್ನು ಅರೆದು ಚರ್ಮಕ್ಕೆ ಹಚ್ಚಿದರೆ ತುರಿಕೆಗಳು ಗುಣವಾಗುತ್ತದೆ.

ವಿಪರೀತ ಜ್ವರ ಇದ್ದಾಗ ಜ್ವರವನ್ನು ತಗ್ಗಿಸಲು ಇದರ ಬೇರನ್ನು ಅರೆದು ಹಣೆಗೆ ಹಚ್ಚುತ್ತಾರೆ. ಇದರ ಎಣ್ಣೆ ಎನ್ನು ಪರ್ಯಾಯವಾಗಿ ಪೂರಕ ರಕ್ತ ಸಾರ ಚಿಕಿತ್ಸೆಗೆ ಬಳಸಲಾಗುತ್ತದೆ.

ಸೌಗಂಧಿಕಾ ಗಿಡದ ಸಾರವು ಆಹಾರದಲ್ಲಿ ಇರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೊರಡುತ್ತದೆ. ಸಂದಿವಾತ ಇದ್ದಲ್ಲಿ ಈ ಗಿಡದ ಎಲೆಯನ್ನು ಬೇಯಿಸಿ ಹಚ್ಚಿದರೆ ಕಡಿಮೆಯಾಗುತ್ತದೆ.

ಸಕ್ಕರೆ ಕಾಯಿಲೆಗಳನ್ನು ಕಮ್ಮಿ ಮಾಡಬಹುದಾಗಿದೆ ಈ ಗಿಡದ ಸಾರದಿಂದ. ತಲೆ ನೋವು ಮತ್ತು ಉರಿಯೂತದಿಂದ ಉಂಟಾಗುವ ನೋವುಗಳನ್ನು ಸೌಗಂಧಿಕಾ ಪುಷ್ಪ ಪರಿಹಾರ ಮಾಡುತ್ತದೆ.

ಸೌಗಂಧಿಕಾ ಸಸ್ಯದಲ್ಲಿರುವ ಸಾರವನ್ನು ಕಣ್ಣಿನ ಬಲವರ್ದಕ ವಾಗಿ ಹಾಗೂ ಕಣ್ಣಿನ ಪೊರೆ ನಿವಾರಿಸಲು ಬಳಸುತ್ತಾರೆ.

Leave A Reply

Your email address will not be published.