Coconut Oil Tips : ತೆಂಗಿನ ಎಣ್ಣೆಯ ಈ ರಹಸ್ಯ ನಿಮಗೆ ಗೊತ್ತಾ…!!!

  • ಸುಶ್ಮಿತಾ ಸುಬ್ರಹ್ಮಣ್ಯ

ತೆಂಗಿನ ಎಣ್ಣೆ ಬಳಕೆ ಈಗಿನ ಕಾಲದ್ದಲ್ಲ. ಪುರಾತನ ಕಾಲದಿಂದಲೂ ತೆಂಗಿನ ಎಣ್ಣೆ ಅದರದ್ದೆ ಆದ ಮಹತ್ವವನ್ನು ಉಳಿಸಿ ಕೊಂಡಿದೆ. ನಮ್ಮ ಹಿರಿಯರು ಏನೇ ಹೇಳಿದರು ಅದರಲ್ಲಿ ಒಂದು ಆರೋಗ್ಯದ ಗಟ್ಟು ಅಡಗಿರುತ್ತದೆ ಅನ್ನೋದು ಸತ್ಯ. ತೆಂಗಿನ ಎಣ್ಣೆಯ ಕೆಲಸ ಬರೀ ಅಡುಗೆ ಮನೆಗೆ ಸೀಮಿತವಲ್ಲ. ಆರೋಗ್ಯ, ಸೌಂದರ್ಯದಲ್ಲೂ ಎತ್ತಿದ ಕೈ ಈ ತೆಂಗಿನ ಎಣ್ಣೆಯದ್ದು. ಹಸುಗೂಸಿನಿಂದ ಹಿಡಿದು ವೃದ್ದಾಪ್ಯದ ವರೆಗೂ ಇದನ್ನ ಉಪಯೋಗಿಸದವರಿಲ್ಲ.

ಕೊಬ್ಬರಿ ಎಣ್ಣೆಯ ನವಿರಾದ ಸುವಾಸನೆ ಆಹಾರವನ್ನು ಹೆಚ್ಚು ಇಷ್ಷವಾಗುವಂತೆ ಮಾಡುತ್ತದೆ. ಕೊಬ್ಬರಿಯ ಮಿಠಾಯಿಗಳು ಹಾಗೂ ಕೊಬ್ಬರಿ ಎಣ್ಣೆಯ ಒಗ್ಗರಣೆ ನೀಡಿದ ಖಾದ್ಯಗಳು ಹೆಚ್ಚು ರುಚಿಕರವಾಗಿರುತ್ತವೆ. ಇದರಲ್ಲಿ ಸುಮಾರು 84% ಪರ್ಯಾಪ್ತ ಕೊಬ್ಬು ಇರುತ್ತದೆ. ಈ ಕೊಬ್ಬು ಹೃದಯದ ಕ್ಷಮತೆ ಹೆಚ್ಚಿಸುತ್ತದೆ. ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ತೂಕ ಇಳಿಸಲು ನೆರವಾಗುತ್ತದೆ.

ಕೊಬ್ಬರಿ ಎಣ್ಣೆಯಲ್ಲಿ ಮಧ್ಯಮ ಸಂಕೋಲೆಯ ಟ್ರೆಂಗ್ಲಿಸರೈಡುಗಳ ಕಾರಣ ಈ ಎಣ್ಣೆಯನ್ನು ದಹಿಸಲು ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಅಲ್ಲದೇ ಇದರಲ್ಲಿರುವ ಕೊಬ್ಬಿನ ಆಮ್ಲಗಳು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಹಸಿವನ್ನು ಕಡಿಮೆಯಾಗಿಸುವ ಮೂಲಕ ಹೆಚ್ಚಿನ ಆಹಾರ ಸೇವಿಸದಂತೆ ತಡೆಯುತ್ತದೆ. ಒಟ್ಟಾರೆಯಾಗಿ ಇದು ತೂಕ ಇಳಿಕೆಗೆ ನೆರವಾಗುತ್ತದೆ.

ತೆಂಗಿನ ಎಣ್ಣೆಯಿಂದ ಸ್ಮರಣ ಶಕ್ತಿ ಹೆಚ್ಚುತ್ತದೆ. ಕೊಬ್ಬರಿ ಎಣ್ಣೆಯನ್ನು ಮಿತವಾಗಿ ಸೇವಿಸುದರಿಂದ ಮರೆತ ವಿಷಯಗಳನ್ನು ನೆನಪಿಸಿಕೊಳ್ಳುವ ಕ್ಷಮತೆ ಹೆಚ್ಚುತ್ತದೆ. ಅಂಗಾಂಗಳನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೇ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ. ಹಾಗೂ ಪಿತ್ತಕೋಶದ ಕಾಯಿಲೆಗಳಿಂದಲೂ ರಕ್ಷಿಸುತ್ತದೆ.

ಜೀರ್ಣಾಂಗಗಳ ಆರೋಗ್ಯವನ್ನು ಹೆಚ್ಚಿಸಿ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಹಾರ್ಮೋನುಗಳ ಸಮತೋಲನೆ ಕಾಪಾಡುತ್ತದೆ ವಿಶೇಷವಾಗಿ ಮಹಿಳೆಯರ ದೇಹದಲ್ಲಿ ಸ್ರವಿಸುವ ರಸದೂತಗಳು ಸಮತೋಲನ ಕಳೆದುಕೊಂಡರೆ ಕೊಬ್ಬರಿ ಎಣ್ಣೆ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ಕ್ಯಾನ್ಸರ್‌ ಅನ್ನು ಕೂಡ ಗುಣಪಡಿಸಬಲ್ಲ ಗುಣ ತೆಂಗಿನ ಎಣ್ಣೆಯಲ್ಲಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೇ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ರೀಡಾಪಟುಗಳು, ದೇಹದಾರ್ಢ್ಯ ಪಟುಗಳು ತೂಕ ಇಳಿಸಲು ಇಚ್ಛಿಸುವ ವ್ಯಕ್ತಿಗಳು ಕೊಬ್ಬರಿ ಎಣ್ಣೆಯನ್ನು ಸೇವಿಸುವುದರಿಂದ ಇದರ ಕೊಬ್ಬಿನ ಪ್ರಮಾಣ ಸುಲಭವಾಗಿ ಶಕ್ತಿಯಾಗಿ ಪರಿವರ್ತಿತವಾಗುತ್ತದೆ. ಹಾಗೂ ಕೊಬ್ಬಾಗಿ ದೇಹದಲ್ಲಿ ಸಂಗ್ರಹವಾಗುವುದಿಲ್ಲ. ಕೊಬ್ಬರಿ ಎಣ್ಣೆಯಲ್ಲಿ ಒತ್ತಡದಿಂದ ಹೊರಬರಲು ನೆರವಾಗುತ್ತದೆ. ಇದರಲ್ಲಿ ಸಾಂತ್ವಾನಗೊಳಿಸುವ ಗುಣವನ್ನು ಹೊಂದಿದ್ದು ಮಾನಸಿಕ ಒತ್ತಡದಿಂದ ಹೊರಬರಲು ನೆರವಾಗುತ್ತದೆ. ತಲೆಗೆ ಕೊಂಚ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿದ ಬಳಿಕ ಮಾನಸಿಕ ಒತ್ತಡದಿಂದ ಹೊರಬರಲು ನೆರವಾಗುತ್ತದೆ.

ಇಷ್ಟೇ ಅಲ್ಲದೇ ಹಲ್ಲುಗಳ ವಿಷಯದಲ್ಲು ತೆಂಗಿನ ಎಣ್ಣೆ ಪ್ರಯೋಜನಕಾರಿ. ಹಲ್ಲುಗಳ ಆರೋಗ್ಯವನ್ನು ಇದು ವೃದ್ಧಿಸುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಸ್ವಲ್ಪ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿ ನಾಲಗೆಯಿಂದ ಅಥವಾ ಕೈಯಿಂದ ಬಾಯಿಯ ವಳಗಡೆ ಮಸಾಜ್ ಮಾಡುವುದರಿಂದ ಹಲ್ಲುಗಳ ಹಾಗೂ ವಸಡುಗಳ ಸಮಸ್ಯೆ ಏನೇ ಇದ್ದರು ಪರಿಹಾರವಾಗುತ್ತದೆ.

Comments are closed.