ಶಿಕ್ಷಣ ಇಲಾಖೆಗೆ ತೀವ್ರ ಮುಜುಗರ: 5 & 8 ನೇ ತರಗತಿ ಪಬ್ಲಿಕ್ ಎಕ್ಸಾಂಗೆ ಹೈಕೋರ್ಟ್ ಬ್ರೇಕ್

ಬೆಂಗಳೂರೂರು : ( 5th and 8th Public Exam Cancel) ಕೆಲ‌ದಿನಗಳಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಪಾಲಿಗೆ ತಲೆನೋವಾಗಿದ್ದ ಪಬ್ಲಿಕ್ ಪರೀಕ್ಷೆ ಭೂತಕ್ಕೆ ಈಗ ಹೈಕೋರ್ಟ್ ಬ್ರೇಕ್ ಹಾಕಿದ್ದು, ಶಿಕ್ಷಕರು ಸೇರಿದಂತೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹೌದು 5, 8ನೇ ತರಗತಿಗೆ ರಾಜ್ಯ ಶಿಕ್ಷಣ ಇಲಾಖೆ ನಡೆಸಲು ನಿರ್ಧರಿಸಿದ್ದ ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸಿ ಕರ್ನಾಟಕದ ಉಚ್ಛ ನ್ಯಾಯಾಲಯ ಆದೇಶಿಸಿದೆ. ಪಬ್ಲಿಕ್ ಪರೀಕ್ಷೆ ನಡೆಸದಂತೆ ಸರ್ಕಾರಕ್ಕೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದ್ದು, ಹೈಕೋರ್ಟ್ ಜಡ್ಜ್ ಪ್ರದೀಪ್ ಸಿಂಗ್ ಹೆರೂರ್ ಅವರಿಂದ ಮಹತ್ವದ ಆದೇಶ ಹೊರಡಿಸಿದ್ದಾರೆ.

ಈ ಶೈಕ್ಷಣಿಕ ವರ್ಷದಿಂದ 5, 8ನೇ ತರಗತಿ ಪಬ್ಲಿಕ್ ಪರೀಕ್ಷೆ ನಿರ್ಧರಿಸಿದ್ದ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಶಿಕ್ಷಣ ಇಲಾಖೆಯ ಈ ನಿರ್ಣಯ ಪ್ರಶ್ನಿಸಿ,ಪಬ್ಲಿಕ್ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅರ್ಜಿ ಸಲ್ಲಿಸಿದ್ದರು. ರುಪ್ಸಾ ಕರ್ನಾಟಕ ಖಾಸಗಿ ಶಾಲೆ ಸಂಘಟನೆ ಸಲ್ಲಿಸಿದ್ದ ಈ ವರುಷವೇ ಪಬ್ಲಿಕ್ ಪರೀಕ್ಷೆ ನೋಟಿಫಿಕೇಶನ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಲೊಕೇಶ್ ತಾಳಿಕಟ್ಟಿ ಖಾಸಗಿ ಶಾಲೆಗಳಿಗೆ ಕಲಿಕಾ ಚೇತರಿಕೆ ಸಿಲೆಬಸ್ ನ್ನೇ ಶಿಕ್ಷಣ ಇಲಾಖೆ ನೀಡಿಲ್ಲ ಎಂದು ವಾದ ಮಂಡಿಸಿದ್ದರು.
ಹೀಗಾಗಿ ಮಾ.13ರಿಂದ ಜರುಗಬೇಕಾಗಿದ್ದ 5, 8ನೇ ತರಗತಿ ಪರೀಕ್ಷೆಯನ್ನು (5th and 8th Public Exam Cancel) ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾತನಾಡಿದ ಲೋಕೇಶ್ ತಾಳಿಕಟ್ಟಿ,ಸಿಲೆಬಸ್ ನೀಡದೆ ಪಬ್ಲಿಕ್ ಪರೀಕ್ಷೆ ಹೇಗೆ ನಡೆಸಲು ಸಾಧ್ಯ ? ಇದನ್ನು ಶಿಕ್ಷಣ ಇಲಾಖೆ ಅರ್ಥ ಮಾಡಿಕೊಳ್ಳಬೇಕು. ಹೈಕೋರ್ಟ್ ಆದೇಶದಿಂದ ವಿದ್ಯಾರ್ಥಿ, ಪೋಷಕರು ಗೊಂದಲ ಪರಿಹಾರ ಆಗಿದೆ ಎಂದಿದ್ದಾರೆ. ಇನ್ನೂ 5, 8ನೇ ತರಗತಿ ಪಬ್ಲಿಕ್ ಪರೀಕ್ಷೆ ರದ್ದು ವಿಚಾರದಿಂದ ಖಾಸಗಿ ಶಾಲಾ ಸಂಘಟನೆಗಳಲ್ಲಿಯೇ ಅಸಮಾಧಾನ ಉಂಟಾಗಿದೆ. ಹೈಕೋರ್ಟ್ ಆದೇಶವನ್ನು ರುಪ್ಸಾ ಖಾಸಗಿ ಶಾಲಾ ಸಂಘಟನೆ ಸ್ವಾಗತಿಸಿದ್ದು, ಕ್ಯಾಮ್ಸ್ ಖಾಸಗಿ ಶಾಲಾ ಸಂಘಟನೆಯಿಂದ ವಿರೋಧ ವ್ಯಕ್ತಪಡಿಸಿದೆ. ಕ್ಯಾಮ್ಸ್ ಪಬ್ಲಿಕ್ ಪರೀಕ್ಷೆ ಪರ ಬ್ಯಾಟಿಂಗ್ ಮಾಡಿದ್ದು.ಹೈಕೋರ್ಟ್ ಆದೇಶ ಬೇಸರ ತರಿಸಿದೆ.ಮಕ್ಕಳ ಮೌಲ್ಯಮಾಪನಕ್ಕೆ ಅನುಕೂಲವಾಗ್ತಿತ್ತು. ಇದರಿಂದ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಸಾಧ್ಯವಿತ್ತು. ಆದರೆ ಹೈಕೋರ್ಟ್ ಪರೀಕ್ಷೆ ರದ್ದುಗೊಳಿಸಿದೆ ಎಂದಿದ್ದಾರೆ.

ಇದನ್ನೂ ಓದಿ : NEET PG 2023 : ಮಾರ್ಚ್ 31ರಂದು ನೀಟ್ ಪರೀಕ್ಷೆ ಫಲಿತಾಂಶ !

ಇದನ್ನೂ ಓದಿ : ಆಯಾ ಶಾಲೆಗಳಲ್ಲೇ 5, 8ನೇ ಕ್ಲಾಸ್ ಬೋರ್ಡ್ ಪರೀಕ್ಷೆ : ಶಿಕ್ಷಣ ಇಲಾಖೆ ಸೂಚನೆ

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Comments are closed.