Corn Salad Benefits : ಡಯಟ್‌ ಮಾಡ್ಲಿಕ್ಕೆ ಫ್ರುಟ್‌ ಸಲಾಡ್‌ ಒಂದೇ ಅಲ್ಲ; ಈ ಸಲಾಡ್‌ ಕೂಡಾ ಉತ್ತಮ

ಇತ್ತೀಚಿನ ದಿನಗಳಲ್ಲಿ ತೂಕ ಕಳೆದುಕೊಳ್ಳಲು (Weight Loss) ಹರಸಾಹಸ ಪಡುವವರನ್ನು ನೋಡುತ್ತಿದ್ದೇವೆ. ಅದಕ್ಕಾಗಿ ಡಯಟ್‌ ಪ್ಲಾನ್‌ (Diet Plan) ಮಾಡುತ್ತಾರೆ. ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶವಿರುವ ಆಹಾರಗಳನ್ನೇ ಆಯ್ದುಕೊಳ್ಳುತ್ತಾರೆ. ಹಸಿ ತರಕಾರಿ, ಮೊಳಕೆಯೊಡೆದ ಕಾಳು, ಹಣ್ಣುಗಳನ್ನು ತಮ್ಮ ಡಯಟ್‌ನಲ್ಲಿ ಸೇರಿಸಿಕೊಂಡಿರುತ್ತಾರೆ. ಡಯಟ್‌ನಲ್ಲಿ ಸೇರಿಸಿಕೊಳ್ಳಲು ಅವುಗಳಷ್ಟೇ ಅಲ್ಲ, ಕಾರ್ನ್‌ ಕೂಡಾ ಉತ್ತಮವಾಗಿದೆ. ಕಾರ್ನ್‌ (Corn) ಅಥವಾ ಸ್ವೀಟ್‌ ಕಾರ್ನ್‌ (Sweet Corn) ಅನ್ನು ವಿವಿಧ ಅಡುಗೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಬೇಯಿಸಿ ಅಥವಾ ಹುರಿದು ತಿನ್ನುತ್ತಾರೆ. ಸೂಪ್‌ ಮತ್ತು ಸಲಾಡ್‌ಗಳಲ್ಲಿ ಬಳಸುತ್ತಾರೆ. ಡಯಟ್‌ಗೆ ಸರಿಹೊಂದುವ ಹಾಗೂ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವ ಕಾರ್ನ್‌ ಸಲಾಡ್‌ (Corn Salad Benefits) ಮಾಡುವುದು ಹೇಗೆ? ಇಲ್ಲಿದೆ ಓದಿ.

ಕಾರ್ನ್‌ ಹೇಗೆ ಪ್ರಯೋಜನಕಾರಿಯಾಗಿದೆ?

  • ಕಾರ್ನ್‌ ಅಧಿಕ ಫೈಬರ್‌ ಅಂಶ ಹೊಂದಿದೆ.
  • ಫೈಬರ್‌ನಿಂದ ಸಮೃದ್ಧವಾಗಿರುವುದರಿಂದ ಇದು ಹೃದಯದ ಆರೋಗ್ಯ ಕಾಪಾಡುತ್ತದೆ.
  • ಇದು ಆಂಟಿಒಕ್ಸಿಡೆಂಟ್‌ನ ಮೂಲವಾಗಿದೆ. ಜೀವಕೋಶಗಳನ್ನು ಕಾಪಾಡುತ್ತದೆ.
  • ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ.
  • ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.
  • ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.

ಇದನ್ನೂ ಓದಿ : Bamboo Bottle Benefits : ಬಿದಿರಿನ ಬಾಟಲಿಯಲ್ಲಿ ನೀರುಕುಡಿಯುವುದರಿಂದ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾ?

ಕಾರ್ನ್‌ ಸಲಾಡ್‌ ಅನ್ನು ಸುಲಭವಾಗಿ ಹೀಗೆ ತಯಾರಿಸಿ:

ಕಾರ್ನ್‌ ಸಲಾಡ್‌ ಅನ್ನು ಕಡಿಮೆ ಸಮಯದಲ್ಲಿ ತಯಾರಿಸಬಹುದು. ಇದನ್ನು ತಯಾರಿಸಲು ಅಡುಗೆ ಮನೆಯಲ್ಲಿರುವ ವಸ್ತುಗಳು ಸಾಕು.

  • ಮೊದಲಿಗೆ ಒಂದು ಕಾರ್ನ್‌ (ಸ್ವೀಟ್‌ ಕಾರ್ನ್‌) ತೆಗೆದುಕೊಂಡು ಅದರ ಕಾಳುಗಳನ್ನು ಬಿಡಿಸಿಕೊಳ್ಳಿ.
  • ಒಂದು ಪ್ಯಾನ್‌ಗೆ ನೀರು ಹಾಕಿ ಅದಕ್ಕೆ ಉಪ್ಪು ಸೇರಿಸಿ ಕುದಿಸಿ.
  • ಅದರಲ್ಲಿ ಕಾರ್ನ್‌ ಕಾಳುಗಳನ್ನು ಹಾಕಿ. 5 ರಿಂದ 8 ನಿಮಿಷಗಳ ವರೆಗೆ ಕುದಿಸಿ.
  • ನೀರನ್ನು ಸೋಸಿ, ಒಂದು ಪಾತ್ರೆಗೆ ಹಾಕಿಕೊಳ್ಳಿ.
  • ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಸವತೆಕಾಯಿ, ಟೊಮೆಟೋ, ಈರುಳ್ಳಿ, ತುರಿದ ಕ್ಯಾರೆಟ್‌, ಸರಿಸಿ.
  • ನಂತರ ಲಿಂಬು ರಸ, ಸ್ವಲ್ಪ ಉಪ್ಪು, ಬೇಕಿದ್ದರೆ ಚಾಟ್‌ ಮಸಾಲಾ ಸೇರಿಸಿ.
  • ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

ಇದನ್ನೂ ಓದಿ : Winter Hair Care :ಚಳಿಗಾಲದಲ್ಲಿ ಕೂದಲು ಆರೈಕೆಗೆ ಬಳಸಿ ಈ ಎಣ್ಣೆ

ಇದನ್ನೂ ಓದಿ : Refreshing Juice : ಬೇಸಿಗೆಯ ಬಿಸಿಲಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ ಈ ರಿಫ್ರೆಶೆಂಗ್‌ ಜ್ಯೂಸ್‌ಗಳು

(Corn Salad Benefits in the weight loss journey. Know the recipe and benefits of this)

Comments are closed.