Diabetes Affect Eyes:ಸಕ್ಕರೆ ಖಾಯಿಲೆಗೆ ಒಳಗಾಗಿದ್ದೀರಾ ? ಹಾಗಾದರೆ ಎಚ್ಚರ ವಹಿಸಿ ! ನಿಮ್ಮನ್ನು ಕಾಡಬಹುದು ಕಣ್ಣಿನ ಸಮಸ್ಯೆ

(Diabetes Affect Eyes)ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಕೊಲೆಸ್ಟ್ರಾಲ್ ,ರಕ್ತದೊತ್ತಡ, ದೃಷ್ಟಿ ನಷ್ಟ, ಹೃದಯ ಕಾಯಿಲೆ ಮತ್ತು ಮೂತ್ರಪಿಂಡದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಈ ಮಧುಮೇಹವು ಕಣ್ಣುಗಳ ಮೇಲೆ ಅತಿಯಾದ ಪರಿಣಾಮವನ್ನು ಬೀರುತ್ತದೆ. ಕಣ್ಣಿನ ಅತ್ಯಂತ ಸೂಕ್ಷವಾದ ಲೋಮನಾಳಗಳನ್ನು ನಾಶ ಪಡಿಸಿ ನಿಮ್ಮ ಕಣ್ಣು ದೃಷ್ಟಿ ಕಳೆದುಕೊಳ್ಳುವಂತೆ ಮಾಡುತ್ತದೆ. ನಿಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ನಿಮ್ಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗೆ ತಿಳಿಸಲಾದ ಕ್ರಮಗಳನ್ನು ಪಾಲನೆ ಮಾಡಿ.

(Diabetes Affect Eyes)ದೇಹದಲ್ಲಿ ಸಕ್ಕರೆ ಮಟ್ಟವು 126 ಸಂಖ್ಯೆಗಿಂತ ಹೆಚ್ಚಿದ್ದರೆ ಮಧುಮೇಹದ ಸಂಕೇತವಾಗಿದೆ. ಮಧುಮೇಹ ಹೆಚ್ಚಾದರೆ ರೆಟಿನಾವನ್ನು ಪೂರೈಸುವ ರಕ್ತನಾಳಗಳು ಹಾನಿಗೊಳಗಾಗುತ್ತವೆ.ಇದರಿಂದ ರೆಟಿನೋಪತಿ, ಗ್ಲುಕೋಮಾ ಮತ್ತು ಕಣ್ಣಿನ ಪೊರೆಗಳಂತಹ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಈ ಕಣ್ಣಿನ ಸಮಸ್ಯೆಗಳು ನಿಮ್ಮನ್ನು ಕಾಡಬಾರದೆಂದರೆ ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ತಿಳಿದುಕೊಂಡು ಇದಕ್ಕೆ ಬೇಕಾದ ಚಿಕಿತ್ಸೆಗಳನ್ನು ತೆಗೆದುಕೊಳ್ಳುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ. ಪತ್ಯೆಯನ್ನು ಪಾಲನೆ ಮಾಡುವ ಮೂಲಕ ನಿಮ್ಮ ದೇಹದ ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಂಡು ಕಣ್ಣಿನ ದೃಷ್ಟಿ ಕಾಪಾಡಿಕೊಳ್ಳಿ.

ಇದನ್ನೂ ಓದಿ:Brain eating amoeba: ಕೊರೊನಾ ಸೋಂಕು ಬೆನ್ನಲ್ಲೇ ಮೆದುಳು ತಿನ್ನುವ ಅಮೀಬಾ ಆತಂಕ: ಅಷ್ಟಕ್ಕೂ ಇದರ ಗುಣಲಕ್ಷಣಗಳೇನು?

ಇದನ್ನೂ ಓದಿ:Omicron BF.7: ನೀವು ಖರೀದಿಸುವ ಮಾಸ್ಕ್‌ ಎಷ್ಟು ಸೇಪ್ ?‌

ಮಧುಮೇಹ ಇರುವವರು ಸಿಗರೆಟ್‌ ಸೇದುವುದರಿಂದ ಕಣ್ಣಿನ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಇದರಿಂದ ನಿಮ್ಮ ಕಣ್ಣಿನ ದೃಷ್ಟಿ ಇನ್ನಷ್ಟು ಹದಗೆಡುತ್ತದೆ ಹಾಗಾಗಿ ಸಿಗರೆಟ್‌ ಸೇದುವುದನ್ನು ಆದಷ್ಟು ಕಡಿಮೆ ಮಾಡಿ ನಿಮ್ಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ. ಊಟವಾದ ನಂತರ ಪ್ರತಿದಿನ ವಾಕಿಂಗ್‌ ಮಾಡುವ ಮೂಲಕ ನಿಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಇದರಿಂದ ನಿಮ್ಮ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು. ಆರೋಗ್ಯಕರ ಆಹಾರವು ಸೇವನೆಯು ನಿಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ. ಆದಷ್ಟು ಪ್ರಿಡ್ಜ್‌ ನಲ್ಲಿರುವ ಆಹಾರವನ್ನು ಕಡಿಮೆ ಮಾಡಿ ವಿಟಮಿನ್ ಎ, ಸಿ, ಇ, ಬೀಟಾ-ಕ್ಯಾರೋಟಿನ್, ಲುಟೀನ್, ಒಮೆಗಾ-3 ಅಂಶ ಇರುವಂತಹ ಆಹಾರವನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಆಗಾಗ ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಮೂಲಕ ವೈದ್ಯರ ಹತ್ತಿರ ಸಲಹೆಗಳನ್ನು ತೆಗೆದುಕೊಳ್ಳಿ. ಈ ಸಲಹೆಗಳನ್ನು ಪಾಲನೆ ಮಾಡುವ ಮೂಲಕ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Diabetes Affect Eyes Are you suffering from diabetes? So be careful! Eye problem may bother you

Comments are closed.