17 year old girl murdered: ಮನೆಯ ಮುಂಭಾಗದಲ್ಲೇ ಕತ್ತು ಸೀಳಿ 17 ವರ್ಷದ ಬಾಲಕಿಯ ಹತ್ಯೆ; ಪ್ರಿಯಕರ ಅರೆಸ್ಟ್

ತಿರುವನಂತಪುರ: 17 year old girl murdered: ತಿರುವನಂತಪುರದಲ್ಲಿ ಇಂದು ಮುಂಜಾನೆ ನೆತ್ತರ ಕೋಡಿ ಹರಿದಿದೆ. 17 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ಮನೆ ಮುಂದೆಯೇ ಕತ್ತು ಸೀಳಿ ಹತ್ಯೆಗೈಯಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಆಕೆಯ ಗೆಳೆಯನನ್ನು ವಶಕ್ಕೆ ಪಡೆದಿದ್ದಾರೆ.

ತಿರುವನಂತಪುರ ಸಮೀಪದ ವರ್ಕಲದ ವಡಸ್ಸೆರಿಕೋಣಂ ಎಂಬಲ್ಲಿ ಪ್ರಕರಣ ನಡೆದಿದೆ. ಇಂದು ಮುಂಜಾನೆ ಬಾಲಕಿಯೊಬ್ಬಳು ತನ್ನ ಮನೆಯ ಮುಂದೆಯೇ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕೆಲ ದಿನಗಳಿಂದ ಒಬ್ಬನನ್ನು ಪ್ರೀತಿಸುತ್ತಿದ್ದ ಈಕೆ ತನ್ನ ಪ್ರೇಮಿಯ ಕೈಯಿಂದಲೇ ಕೊಲೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಕೆಲ ಗಂಟೆಗಳಲ್ಲೇ ಆರೋಪಿಯನ್ನು ಪತ್ತೆಹಚ್ಚಲಾಗಿದೆ. ಗೋಪು (20) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಲಕ್ನೋದಲ್ಲೊಂದು ದುರಂತ ಘಟನೆ: ಮಗುವಾಗಿಲ್ಲ ಎಂಬ ಕಾರಣಕ್ಕೆ ಪತ್ನಿಯ ಖಾಸಗಿ ಅಂಗಕ್ಕೆ ಗಾಯಗೊಳಿಸಿದ ಪತಿ

ಮೃತ ಬಾಲಕಿಯನ್ನು ಸಂಗೀತಾ ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ ವೇಳೆ ಆಕೆಯನ್ನು ಮನೆಯಿಂದ ಹೊರಗೆ ಕರೆಸಿಕೊಂಡು ಚಾಕುವಿನಿಂದ ಕತ್ತು ಸೀಳಲಾಗಿದೆ. ಈ ವೇಳೆ ಬಾಲಕಿಯ ಕಿರುಚಾಟ ಕೇಳಿ ಆಕೆಯ ಮನೆಮಂದಿ ಹೊರಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆರೋಪಿ ಎಸ್ಕೇಪ್ ಆಗಿದ್ದು. ಬಾಲಕಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವಿಪರೀತ ರಕ್ತಸ್ರಾವ ಆಗಿದ್ದ ಕಾರಣ ಆಕೆಯನ್ನು ಉಳಿಸಲಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ಬಾಲಕಿಯ ಮೊಬೈಲ್ ಪರಿಶೀಲಿಸಿದ್ದಾರೆ. ಅದರಲ್ಲಿ ಸಿಕ್ಕ ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ಕೆಲ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ಬಾಲಕಿಯ ಪ್ರಿಯಕರ ಗೋಪು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ ಸಂಬಂಧ ಎಫ್ ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಆದಷ್ಟು ಶೀಘ್ರದಲ್ಲೇ ಪತ್ತೆಹಚ್ಚಿ ಬಂಧಿಸುತ್ತೇವೆ. ಸೂಕ್ತ ವಿಚಾರಣೆ ಬಳಿಕವೇ ಸತ್ಯಾಸತ್ಯತೆ ಬಯಲಾಗುತ್ತದೆ. ಇಬ್ಬರ ನಡುವೆ ಬ್ರೇಕಪ್ ಆಗಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಪಳ್ಳಿಕಲ್ ಮೂಲದವನಾಗಿದ್ದು, ಮೃತ ಬಾಲಕಿ ಸಂಗೀತಾ ಸ್ಥಳೀಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Scooter collision: ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿಗೆ ಬೈಕ್‌ ಢಿಕ್ಕಿ: ಸ್ಥಳದಲ್ಲೇ ಮಗು ಸಾವು

17 year old girl murdered: 17-year old girl murdered in front of house in Thiruvananthapuram and her boy friend taken into custody

Comments are closed.