Eyes: ಕಣ್ಣಿನಲ್ಲೇ ಇದೆ ಎಲ್ಲಾ! ನಿಮ್ಮ ಆರೋಗ್ಯದ ಗುಟ್ಟು ಹೇಳುತ್ತದೆ ಕಣ್ಣು

ಕಣ್ಣು(Eyes) ನಿಮ್ಮ ಆರೋಗ್ಯದ ಸ್ಥಿತಿಯನ್ನು ಬಹಿರಂಗಪಡಿಸುವುದು ಎಂಬುದು ನಿಮಗೆ ಗೊತ್ತೇ? ಹೌದು, ಖಂಡಿತವಾಗಿಯೂ ಕಣ್ಣುಗಳು ಆರೋಗ್ಯದ ಸ್ಥಿತಿಯನ್ನು ಹೇಳುವುದು. ನೋಡುವವರಿಗೆ ನಿಮ್ಮ ಆರೋಗ್ಯದ ಬಗ್ಗೆ ಸೂಕ್ಷವಾಗಿ ತಿಳಿಸಿಬಿಡುದು. ಈ ಚಿಹ್ನೆಗಳು ಮೊದಲ ಹಂತದಲ್ಲಿಯೇ ದೈಹಿಕ ತೊಂದರೆಗಳನ್ನು ತಿಳಿಸಲು ಸಹಾಯ ಮಾಡುತ್ತವೆ ಮತ್ತು ಅದನ್ನು ಗುಣಪಡಿಸಲೂಬಹುದು. ಆದ್ದರಿಂದ ನಾವು ನಿಮಗೆ ಕಣ್ಣಿನಲ್ಲಿಯೇ ತಿಳಿದುಕೊಳ್ಳಬಹುದಾದ ಆರೋಗ್ಯದ ತೊಂದರೆಗಳ ಬಗ್ಗೆ ಇಲ್ಲಿ ಹೇಳುತ್ತಿದ್ದೇವೆ.

  • ಕ್ಯಾನ್ಸರ್‌
    ನಿಮ್ಮ ಕಣ್ಣು ಬ್ರೆಸ್ಟ್‌ ಕ್ಯಾನ್ಸರ್‌ನ ಸಾಧ್ಯತೆಯನ್ನು ತೋರಿಸುತ್ತದೆ. ಯಾವಾಗ ಕ್ಯಾನ್ಸರ್‌ ಕೋಶಗಳು ದೇಹದ ಎಲ್ಲಾ ಭಾಗಗಳಿಗೆ ಹರಡುತ್ತಿವೆ ಎಂದಾದರೆ, ಅದು ನಿಮ್ಮ ಕಣ್ಣುಗಳಲ್ಲಿ ಕಾಣಿಸುತ್ತದೆ. ಕಣ್ಣಿನ ಗೋಡೆಯಲ್ಲಿರುವ ಅಂಗಾಂಶದ ಮಧ್ಯದ ಪದರದಲ್ಲಿ ಅಸಹಜವಾದ ಗಾಯಗಳು ಅಥವಾ ದ್ರವ್ಯರಾಶಿ/ ಗಡ್ಡೆಗಳು ಕ್ಯಾನ್ಸರ್‌ ಕೋಶಗಳು ಕಣ್ಣಿಗೆ ಹರಡಿವೆ ಎಂದು ಸೂಚಿಸುತ್ತದೆ. ಮಂದ ದೃಷ್ಟಿ, ಕಣ್ಣಿನ ನೋವು, ಫ್ಲೋಟರ್‌ಗಳು ಕಾಣಿಸುವುದು ಇವೆಲ್ಲಾ ಬ್ರೆಸ್ಟ್‌ ಕ್ಯಾನ್ಸರ್‌ನ ಕೆಲವು ಸಂಕೇತಗಳಾಗಿವೆ.
  • ಮಧುಮೇಹ
    ಅಸ್ಪಷ್ಟವಾಗಿ ಕಾಣಿಸುವುದು ಸಹ ಕಣ್ಣಿನ ತೊಂದರೆಯಾಗಿದೆ. ಅದು ಟೈಪ್‌ 2 ಡಯಾಬಿಟೀಸ್‌ (ಮಧುಮೇಹ) ಗೆ ಸಂಬಂಧಿಸಿದ್ದಾಗಿದೆ. ದೀರ್ಘಕಾಲದ ರಕ್ತದಲ್ಲಿಅಧಿಕ ಸಕ್ಕರೆಯ ಅಂಶವು ರಕ್ತ ಕಣಗಳ ಮೇಲೆ ಒತ್ತಡವನ್ನು ಹೇರುತ್ತವೆ. ಇದು ಕಣ್ಣುಗಳ ಹಿಂಭಾಗದಲ್ಲಿ ರಕ್ತದ ಚುಕ್ಕೆಗಳಿಗೆ ಕಾರಣವಾಗುತ್ತದೆ. ಅದರ ಅರ್ಥ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಅಪಾಯಕಾರಿ ಮಟ್ಟವನ್ನು ತಲುಪಿದೆ ಎಂದು. ಆದ್ದರಿಂದ ತಕ್ಷಣದ ಚಿಕಿತ್ಸೆ ಅಗತ್ಯ. ಇಷ್ಟಾದರೂ ಕೂಡಾ ಗ್ಲುಕೋಸ್‌ ಲೆವಲ್‌ ಅನ್ನು ಚಿಕಿತ್ಸೆ ನೀಡದೆ ಬಿಟ್ಟರೆ, ಅದು ಕುರುಡುತನಕ್ಕೆ ಕಾರಣವಾಗಬಹುದು.
  • ಹಾನಿಗೊಳಗಾದ ರೆಟಿನಾ
    ಯಾವಾಗಲೂ ಕಣ್ಣಿನ ಸುತ್ತ ಒಂದು ಸಣ್ಣ ಪೆಕ್ಸ್‌ ಚಲಿಸುವುದನ್ನು ತೇಲುವದು ಎನ್ನುತ್ತಾರೆ. ಆದರೆ ಫ್ಲೊಟರ್‌ಗಳ ಸಂಖ್ಯೆಯಲ್ಲಿ ಹಠಾತ್‌ ಹೆಚ್ಚಳವು ರೆಟಿನಾದ ಕಣ್ಣೀರು ಅಥವಾ ಬೇರ್ಪಡುವಿಕೆಯ ಕಡೆಗೆ ಢಿಕ್ಕಿ ಹೊಡೆಯುವುದು. ಗಮನಾರ್ಹವಾಗಿ ಈ ಲಕ್ಷಣಗಳನ್ನು ಬಹಳ ಕಾಲದವರೆಗೆ ಅಲಕ್ಷಿಸುವಂತೆಯೇ ಇಲ್ಲ ಏಕೆಂದರೆ ಮುಂದೆ ಅದು ಕಣ್ಣಿನ ಮೇಲೆ ತೀವ್ರ ಹಾನಿಯುಂಟು ಮಾಡಬಹುದು.

ಇದನ್ನೂ ಓದಿ : Eye Health in Work From Home: ವರ್ಕ್ ಫ್ರಮ್ ಹೋಮ್‌ನಲ್ಲಿ ಕಣ್ಣಿನ ಕಾಳಜಿ ಮಾಡಲು ಹೀಗೆ ಮಾಡಿ

  • ಕಾಮಾಲೆ(ಜೊಂಡೀಸ್‌)
    ನಮಗೆಲ್ಲಾ ತಿಳಿದಿರುವಂತೆ ಪೋಷಕರು ಕಣ್ಣುಗಳನ್ನು ನೋಡುವುದರ ಮೂಲಕ ಕಾಮಾಲೆ ಅಥವಾ ಜೊಂಡೀಸ್‌ ಲಕ್ಷಣವಿದೆಯೇ ಎಂದು ಪರೀಕ್ಷಿಸುತ್ತಾರೆ. ಅದು ಏಕೆಂದರೆ ಬಿಳಿಯ ಕಣ್ಣು ಗುಡ್ಡೆಗಳು ಹಳದಿ ಬಣ್ಣಕ್ಕೆ ತಿರುಗಿರುವುದು ಕಾಮಾಲೆ ರೋಗದಿಂದ ಬಳಲುತ್ತಿರುವ ಲಕ್ಷಣ ಹೇಳುವ ಚಿಹ್ನೆಯಾಗಿದೆ. ಕಾಮಾಲೆಯು ಅತಿಯಾದ ಬೈಲುರುಬಿನ್‌ ಸ್ರವಿಸುವುದರಿಂದ ಉಂಟಾಗುವುದು. ಇದು ರಕ್ತದಲ್ಲಿನ ಕೆಂಪು ರಕ್ತ ಕಣಗಳ ವಿಭಜನೆಯಿಂದ ರೂಪುಗೊಂಡ ಹಳದಿ ಸಂಯುಕ್ತವಾಗಿದೆ.
  • ಸೋಂಕು (ಇನ್ಫೆಕ್ಷನ್‌)
    ಕಾರ್ನಿಯಾದ ಮೇಲಾದ ಬಿಳಿಯ ಚುಕ್ಕೆಗಳು ಕಾರ್ನಿಯಲ್‌ ಸೋಂಕಿನ ಲಕ್ಷಣವನ್ನು ಹೇಳುತ್ತದೆ. ಸಾಮಾನ್ಯವಾಗಿ ಕನ್ನಡಕವನ್ನು ಬಿಟ್ಟು ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವವರಿಗೆ ಈ ಸೋಂಕು ತಗಲುವುದು ಹೆಚ್ಚು. ಬ್ಯಾಕ್ಟೀರಿಯಾ ಅಥವಾ ಫಂಗಸ್‌ ನಿಂದ ಕಲುಷಿತವಾದ ಲೆನ್ಸ್‌ಗಳೇ ಈ ಸೋಂಕಿಗೆ ಮೂಲ ಕಾರಣ. ಆದರೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದರಿಂದ ಕಾರ್ನಿಯಲ್‌ ಗುರುತು ಮತ್ತು ನೋವಿಗೆ ಕಾರಣವಾಗಬಹುದು.
  • ಅಧಿಕ ಕೊಲೆಸ್ಟ್ರಾಲ್‌
    ನಿಮ್ಮ ಕೆಲೆಸ್ಟ್ರಾಲ್ ಲೆವಲ್‌ ಅನ್ನು ಆಗಾಗ ಪರೀಕ್ಷಿಸಿಕೊಳ್ಳದಿದ್ದರೆ ಅದು ಕ್ರಮೇಣ ನಿಮ್ಮ ಕಣ್ಣುಗಳಲ್ಲಿ ಕಾಣಿಸಲು ಪ್ರಾರಂಭಿಸುವುದು. ನಿಮ್ಮ ಕೊಲೆಸ್ಟ್ರಾಲ್‌ ಲೆವಲ್‌ ಮಿತಿಮೀರಿದರೆ ಬಿಳಿ, ಗ್ರೇ ಅಥವಾ ನೀಲಿ ಉಂಗುರುಗಳು ಐರೀಸ್‌ ನ ಸುತ್ತ ರೂಪುಗೊಳ್ಳುವುದು. ವಯಸ್ಸಾದಂತೆ ಈ ಗುರುತುಗಳು ಕಾಣಿಸುತ್ತವೆ ಆದರೆ ಮತ್ತೊಂದು ಪ್ರಮುಖ ಕಾರಣವೆಂದರೆ ಅಧಿಕ ಕೊಲೆಸ್ಟ್ರಾಲ್‌. ಈ ರೀತಿಯ ಯಾವುದೇ ಚಿಹ್ನೆಗಳು ನಿಮ್ಮ ಕಣ್ಣಿನ ಸುತ್ತ ಕಾಣಿಸಿಕೊಂಡರೆ ಮೊದಲು ನಿಮ್ಮ ಕೊಲೆಸ್ಟ್ರಾಲ್‌ ಲೆವಲ್‌ ಚೆಕ್‌ ಮಾಡಿಸಿಕೊಳ್ಳಿ.

ಇದನ್ನೂ ಓದಿ : Eye Donate Just Misscall : ಮಿಸ್ ಕಾಲ್ ಕೊಡಿ, ನೇತ್ರದಾನಕ್ಕೆ ಹೆಸರು ನೋಂದಾಯಿಸಿ : ಪುನೀತ್ ಪುಣ್ಯತಿಥಿಯಂದು ವಿಭಿನ್ನ ಪ್ರಯತ್ನ

(Eyes say everything about your health)

Comments are closed.