Fruits For Digestion : ಜೀರ್ಣ ಶಕ್ತಿ ಹೆಚ್ಚಿಸುವ 5 ಅದ್ಭುತ ಹಣ್ಣುಗಳು

ಹಣ್ಣುಗಳು (Fruits) ದೇಹಕ್ಕೆ ಅಗತ್ಯವಿರುವ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತವೆ. ಅಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳು ಪ್ರಕೃತಿ ನಮಗೆ ನೀಡಿದ ಉಡುಗೊರೆಯಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಅವುಗಳಲ್ಲಿ ಮುಖ್ಯವಾದದ್ದು ಜೀರ್ಣಕ್ರಿಯೆಗೆ ಸಹಾಯಮಾಡುವುದಾಗಿದೆ (Fruits For Digestion). ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನಿಂದಾಗಿ ಹಣ್ಣುಗಳು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಜೀರ್ಣ ಶಕ್ತಿ ಹೆಚ್ಚಿಸುವ ಉತ್ತಮ ಆಹಾರಗಳ ಪಟ್ಟಿಯಲ್ಲಿ ಹಲವಾರು ಹಣ್ಣುಗಳು ಮತ್ತು ತರಕಾರಿಗಳು ಸ್ಥಾನ ಪಡೆದುಕೊಂಡಿವೆ. ಆದರೆ, ಫೈಬರ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ ಹೇರಳವಾಗಿರುವ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡಬಲ್ಲ ಉತ್ತಮವಾದ ಹಣ್ಣುಗಳನ್ನು ನೀವು ಹುಡುಕುತ್ತಿದ್ದೀರಾ? ಇಲ್ಲಿ ಅಂತಹ ಹಣ್ಣುಗಳ ಪರಿಚಯ ಇಲ್ಲಿದೆ. ನಿಮಗೆ ಸರಿಹೊಂದುವ ಹಣ್ಣುಗಳನ್ನು ಆಯ್ದುಕೊಳ್ಳಿ.

ಜೀರ್ಣಕ್ರಿಯೆಯ ಮೂಲಕ, ದೇಹವು ಆಹಾರವನ್ನು ಪ್ರೋಟೀನ್‌ಗಳು, ಲಿಪಿಡ್‌ಗಳು, ವಿಟಮಿನ್‌ಗಳು, ಖನಿಜಗಳು, ಕಾರ್ಬೋಹೈಡ್ರೇಟ್‌ಗಳು (ಫೈಬರ್) ಮತ್ತು ನೀರನ್ನು ಮತ್ತಷ್ಟು ಹೀರಿಕೊಳ್ಳುವ ರೂಪಗಳಾಗಿ ವಿಭಜಿಸುತ್ತದೆ. ನಂತರ ಅವುಗಳನ್ನು ಶಕ್ತಿ, ಜೀವಕೋಶದ ಅಭಿವೃದ್ಧಿ ಮತ್ತು ದುರಸ್ತಿಗಾಗಿ ಬಳಸಲಾಗುತ್ತದೆ. ಪರಿಣಾಮವಾಗಿ, ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ಶಕ್ತಿಯುತವಾಗಿರಲು ಮತ್ತು ರೋಗ ಮುಕ್ತವಾಗಿರಲು ಜೀರ್ಣಕ್ರಿಯೆ ನಿರ್ಣಾಯಕ ಕಾರ್ಯವಾಗಿದೆ.

ಜೀರ್ಣ ಶಕ್ತಿ ಹೆಚ್ಚಿಸಲು ಸಹಾಯ ಮಾಡುವ ಹಣ್ಣುಗಳು :
ಹಲವಾರು ಹಣ್ಣುಗಳಲ್ಲಿ ಫೈಬರ್ ಮತ್ತು ವಿಟಮಿನ್‌ಗಳು ಹೇರಳವಾಗಿವೆ. ಅವು ಜೀರ್ಣಕ್ರಿಯೆಗೆ ಸಹಾಯವನ್ನೂ ಮಾಡುತ್ತವೆ.

ಸೇಬು (ಆಪಲ್) :
ಸೇಬು ಹಣ್ಣು ನಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಬಾಲ್ಯದಿಂದಲೂ ನಮಗೆ ಗೊತ್ತೇ ಇದೆ. ಅವು ಬಹಳಷ್ಟು ಪೆಕ್ಟಿನ್ ಫೈಬರ್ ಅನ್ನು ಹೊಂದಿರುತ್ತವೆ. ಪೆಕ್ಟಿನ್, ದೇಹದ ಬೇಡಿಕೆಗಳಿಗೆ ಅನುಗುಣವಾಗಿ, ಮಲಬದ್ಧತೆ ಮತ್ತು ಅತಿಸಾರದಿಂದ ಪರಿಹಾರವನ್ನು ನೀಡುತ್ತದೆ. ಹೀಗಾಗಿ ಇದು ಜೀರ್ಣಕ್ರಿಯೆಗೆ ಸಹಾಯ ಮಾಡಬಲ್ಲ ಅತ್ಯುತ್ತಮವಾದ ಹಣ್ಣುಗಳಲ್ಲಿ ಒಂದಾಗಿದೆ.

ಕಿವಿ :
ಹಸಿರು ಬಣ್ಣದ ಕಿವಿ ಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಏಕೆಂದರೆ ಇದು ಆಕ್ಟಿನಿಡಿನ್ ಕಿಣ್ವವನ್ನು ಒಳಗೊಂಡಿದೆ. ಈ ಕಿಣ್ವಗಳು ಪ್ರೋಟೀನ್ ಜೀರ್ಣಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಫೈಬರ್ ಅಂಶದಿಂದಾಗಿ ಈ ಹಣ್ಣು ವಿರೇಚಕ ಪರಿಣಾಮವನ್ನು ಹೊಂದಿದೆ ಎಂದು ಗುರುತಿಸಲ್ಪಟ್ಟಿದೆ.
ಸಂಶೋಧನೆಯ ಪ್ರಕಾರ, ದಿನವೊಂದಕ್ಕೆ ಎರಡು ಕಿವಿ ಹಣ್ಣು, ಸುಮಾರು ಶೇಕಡಾ 20 ರಷ್ಟು ಪ್ರಮಾಣದ ಫೈಬರ್‌ನ ಅನ್ನು ದೇಹಕ್ಕೆ ನೀಡುತ್ತದೆ. ಇಷ್ಟೇ ಅಲ್ಲದೇ ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ.

ಏಪ್ರಿಕಾಟ್‌ :
ಈ ಹಣ್ಣಿನಲ್ಲಿ ಫೈಬರ್ ಅಧಿಕವಾಗಿದೆ. ಇದು ಕರುಳಿನ ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡಿ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಚರ್ಮದ ಆರೋಗ್ಯಕ್ಕೆ ಅವಶ್ಯಕವಾಗಿದೆ ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ.

ಬಾಳೆಹಣ್ಣು :
ಬಾಳೆಹಣ್ಣಿನಲ್ಲಿ ಫೈಬರ್ ಅಧಿಕವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕರುಳಿನ ನಿಯಮಿತ ಚಲನೆಯನ್ನು ಬಾಳೆಹಣ್ಣು ಉತ್ತೇಜಿಸುತ್ತದೆ. ಬಾಳೆಹಣ್ಣು ಆಂಟಾಸಿಡ್ ಗಳನ್ನು ಹೊಂದಿದೆ. ಇದು ಹೊಟ್ಟೆಯ ಒಳಪದರದಲ್ಲಿ ಉಂಟಾಗುವ ಹುಣ್ಣುಗಳಿಂದ ಹೊಟ್ಟೆಯನ್ನು ರಕ್ಷಿಸುತ್ತದೆ. ಬಾಳೆಹಣ್ಣಿನಲ್ಲಿರುವ ಆಂಟಾಸಿಡ್ ಗುಣಲಕ್ಷಣಗಳು ಎದೆಯುರಿಯನ್ನು ನಿವಾರಿಸುತ್ತದೆ. ಹೊಟ್ಟೆಯ ಹುಣ್ಣುಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳ ನಿರ್ಮೂಲನೆಗೂ ಸಹಾಯ ಮಾಡುತ್ತದೆ.

ಸೀಬೆ ಹಣ್ಣು (ಪೇರಲೆ ಹಣ್ಣು) :
ಅತಿ ಸುಲಭವಾಗಿ ಸಿಗುವ ಸೀಬೆ ಹಣ್ಣು, ವಿವಿಧ ಜಠರಗರುಳಿನ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ. ಪೇರಲೆ ಅತಿ ಹೆಚ್ಚು ಫೈಬರ್ ಹೊಂದಿರುವ ಹಣ್ಣುಗಳಲ್ಲಿ ಒಂದಾಗಿದೆ. ಕೇವಲ ಒಂದು ಪೇರಲೆ ಹಣ್ಣು ದೈನಂದಿನ ಅಗತ್ಯ ಪ್ರಮಾಣದ ಫೈಬರ್‌ನ 12% ಅನ್ನು ಹೊಂದಿರುತ್ತದೆ. ಇದು ನಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು.

ಇದನ್ನೂ ಓದಿ : Benefits of Clove : ನೀವು ತಿಳಿಯಲೇಬೇಕಾದ ಲವಂಗದ 5 ಆರೋಗ್ಯ ಪ್ರಯೋಜನಗಳು

ಇದನ್ನೂ ಓದಿ : Yoga For Anti-aging : ವಯಸ್ಸಿನ ಕಳೆ ಮರೆಮಾಚಲು ಈ ಐದು ಯೋಗಾಸನಗಳನ್ನು ತಪ್ಪದೇ ಮಾಡಿ.

(Fruits For Digestion these 5 fruits improve your digestion)

Comments are closed.