man tried to commit suicide : ಅರುಂಧತಿ ಸಿನಿಮಾದಿಂದ ಪ್ರೇರಣೆ ಪಡೆದು ಯುವಕನ ಹುಚ್ಚಾಟ:ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

ತುಮಕೂರು : man tried to commit suicide : ಮನರಂಜನೆಯ ಉದ್ದೇಶಕ್ಕಾಗಿ ಸಿನಿಮಾವನ್ನು ನೋಡುವವರು ಒಂದೆಡೆಯಾದರೆ ಆ ಸಿನಿಮಾದಲ್ಲಿ ನಡೆಯುವ ಘಟನೆಗಳಿಂದ ಪ್ರೇರೇಪಿತರಾಗಿ ಅದನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಲು ಹೋಗುವವರೂ ನಮ್ಮಲ್ಲಿದ್ದಾರೆ. ಸಿನಿಮಾಗಳು ಕೇವಲ ಮನರಂಜನೆಯನ್ನು ನೀಡುತ್ತವೆ ,ಅದಕ್ಕೂ ನಿಜ ಜೀವನಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ಎಷ್ಟೇ ಹೇಳಿದರೂ ಸಹ ಕೆಲವರು ಅದನ್ನು ಕೇಳಲು ಸಿದ್ಧರಿರೋದಿಲ್ಲ. ಇದೇ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತಹ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ.


ಕೆಲವು ವರ್ಷಗಳ ಹಿಂದೆ ತೆಲುಗಿನಲ್ಲಿ ತೆರೆ ಕಂಡ ಅರುಂಧತಿ ಎಂಬ ಬ್ಲಾಕ್​ಬಸ್ಟರ್​ ಹಿಟ್​ ಸಿನಿಮಾ ನೆನಪಿದ್ದಿರಬಹುದು. ಇದೇ ಸಿನಿಮಾವನ್ನು ನೋಡಿದ ತುಮಕೂರಿನ ಯುವಕನೊಬ್ಬ ಮುಕ್ತಿ ಪಡೆದುಕೊಳ್ಭೇಕೆಂದು ಆತ್ಮಹತ್ಯೆಗೆ ಯತ್ನಿಸಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ. 22 ವರ್ಷದ ರೇಣುಕಾ ಎಂಬ ಹೆಸರಿನ ಯುವಕ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಗಿಡ್ಡಯ್ಯನಪಾಳ್ಯ ಎಂಬಲ್ಲಿರುವ ತನ್ನದೇ ರೇಷ್ಮೇ ತೋಟದಲ್ಲಿ ಬೆಂಕಿ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಗಿಡ್ಡಯ್ಯನಪಾಳ್ಯದ ನಿವಾಸಿಯಾಗಿದ್ದ ಸಿದ್ದಪ್ಪ ಎಂಬವರ ಪುತ್ರನಾಗಿದ್ದ ಈತ ತುಮಕೂರಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ಕಾಲೇಜು ಮುಗಿಸಿ ಮನೆಗೆ ವಾಪಸ್ಸಾಗಿದ್ದ ರೇಣುಕಾ ಅರುಂದತಿ ಎಂಬ ಸಿನಿಮಾವನ್ನು ವೀಕ್ಷಿಸಿದ್ದಾನೆ. ಅತಿಯಾದ ಸಿನಿಮಾ ನೋಡುವ ಹುಚ್ಚು ಬೆಳೆಸಿಕೊಂಡಿದ್ದ ಈತ ನಿನ್ನೆ ಅರುಂಧತಿ ಸಿನಿಮಾವನ್ನು ನೋಡುತ್ತಿದ್ದ ವೇಳೆ ಅದನ್ನು ಮನೆಯಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.


ಸಿನಿಮಾ ನೋಡಿ ಮುಗಿಸಿದ ಈತ ಪುರವರಕ್ಕೆ ತೆರಳಿ ಪೆಟ್ರೋಲ್​ ಬಂಕ್​​ನಿಂದ 20 ಲೀಟರ್​ ಪೆಟ್ರೋಲ್​ ತೆಗೆದುಕೊಂಡು ಬಂದಿದ್ದ. ಇದರಲ್ಲಿ 1 ಲೀಟರ್ ಪೆಟ್ರೋಲ್​ನಿಂದ ಈತ ತೋಟಕ್ಕೆ ತೆರಳಿ ಬೆಂಕಿ ಹಂಚಿಕೊಂಡಿದ್ದಾನೆ. ಪುತ್ರ ಬೆಂಕಿ ಹಚ್ಚಿಕೊಂಡು ಒದ್ದಾಡುತ್ತಿದ್ದುದನ್ನು ನೋಡಿ ಪೋಷಕರು ಕೂಡಲೇ ಈತ ಬಳಿಗೆ ಧಾವಿಸಿ ಬೆಂಕಿ ನಂದಿಸಿದ್ದಾರೆ.


ಈ ವೇಳೆ ಈತ ನನಗೆ ಮುಕ್ತಿ ಬೇಕೆಂದು ನರಳಾಡುತ್ತಲೇ ಕೂಗಿದ್ದಾನೆ. ಕೂಡಲೇ ಯುವಕನನ್ನು ಮಧುಗಿರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕೊಡಗೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : Independence Day 2022 : ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿದೆ ಕಡಲ ನಗರಿಯ ಈ ಕಟ್ಟೆ

ಇದನ್ನೂ ಓದಿ : river fishes : ಕಡಲ ತೀರದಲ್ಲಿ ಮೀನಿನ ಸುಗ್ಗಿ : ರಾತ್ರಿಯಿಡೀ ಮೀನಿಗಾಗಿ ಸಮುದ್ರದಲ್ಲೇ ಕುಳಿತ ಮತ್ಸ್ಯಪ್ರಿಯರು

A young man tried to commit suicide after watching the movie Arundhati

Comments are closed.