Adi Mudra : ಈ ಮುದ್ರೆ ಮಾಡಿ ಖಿನ್ನತೆಯಿಂದ ದೂರವಿರಿ!!

ಇತ್ತೀಚಿನ ದಿನಗಳಲ್ಲಿ ನಾವು ಒತ್ತಡವನ್ನು (Stress) ಎದುರಿಸುತ್ತಿದ್ದೇವೆ. ಬೆಲೆಗಳ ಏರಿಕೆ, ಅತಿಯಾದ ತಾಪಮಾನ, ಪರೀಕ್ಷೆಯ ಮತ್ತು ಕೆಲಸದ ಒತ್ತಡ ಮುಂತಾದವುಗಳು. ಇಂತಹ ಸಂದರ್ಭಗಳಲ್ಲಿ ನಮ್ಮ ಮನಸ್ಸನ್ನು ಶಾಂತಗೊಳಿಸಲು ಪ್ರಾಣಾಯಾಮ, ಯೋಗ ಮತ್ತು ಧ್ಯಾನ (Yoga And Meditation) ಮುಂತಾದವುಗಳ ಮೊರೆ ಹೋಗುತ್ತೇವೆ. ಆದಾಗ್ಯೂ, ಕೆಲವು ಮುದ್ರೆಗಳು(Adi mudra) ನಮಗೆ ಖಿನ್ನತೆ ದೂರಮಾಡಲು ಸಹಾಯ ಮಾಡುತ್ತವೆ.

ಭೂಮಿ, ಗಾಳಿ, ಬೆಂಕಿ, ನೀರು ಮತ್ತು ಆಕಾಶ ಎಂಬ ಐದು ಅಂಶಗಳ ನಡುವಿನ ಸಮತೋಲವನ್ನು ಕಾಪಾಡಿಕೊಳ್ಳುವ ಮೂಲಕ ಮುದ್ರೆಗಳು ದೇಹದೊಳಗೆ ಪ್ರಾಣ ಅಥವಾ ಶಕ್ತಿಯ ಸುಗಮ ಚಲನೆಯನ್ನು ಖಚಿತಪಡಿಸುತ್ತದೆ. ಮುದ್ರೆಯು ಬೆರೆಳುಗಳನ್ನು ಮಡಿಚುವುದು, ಹಿಗ್ಗಿಸುವುದು, ಬಗ್ಗಿಸುವುದು, ಬೆಸೆದುಕೊಳ್ಳುವುದು, ಮತ್ತು ಬೆರಳ ತುದಿಗಳನ್ನು ಸ್ಪರ್ಶಿಸುವುದರಿಂದ ರೂಪುಗೊಂಡಿದೆ. ಈ ಸನ್ನೆಗಳ ಮೂಲಕ ಕೈಯ ಪ್ರತಿಯೊಂದು ಪ್ರದೇಶವು ಮನಸ್ಸು ಮತ್ತು ದೇಹದ ನಿರ್ದಿಷ್ಟ ಭಾಗಕ್ಕೆ ಸಂಪರ್ಕ ಹೊಂದಿ ದೇಹ ಮತ್ತು ಮನಸ್ಸಿನೊಂದಿಗೆ ನಾವು ಮಾತನಾಡಬಹುದು.

ಖಿನ್ನತೆಯನ್ನು ಹೋಗಲಾಡಿಸಲು ಸಹಾಯ ಮಾಡುವ ಮುದ್ರೆಯನ್ನು ಆದಿ (ಮೊದಲು/ಪ್ರಾಥಮಿಕ) ಮುದ್ರೆ ಎಂದು ಕರೆಯಲಾಗುತ್ತದೆ. ಆದಿ ಮುದ್ರೆಯು ಮನಸ್ಸಿನ ಶಾಂತತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುತ್ತದೆ. ಮತ್ತು ಧ್ಯಾನದ ಅಭ್ಯಾಸಗಳಿಗೆ ಪರಿಪೂರ್ಣವಾಗಿದೆ. ಈ ಮುದ್ರೆಯು ಮೆದುಳಿನ ನರಗಳನ್ನು ಉತ್ತೇಜಿಸುತ್ತದೆ ಮತ್ತು ಏಕಾಗ್ರತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ.

ಆದಿ ಮುದ್ರೆಯನ್ನು ಮಾಡುವುದು ಹೇಗೆ ?

ಅಂಗೈ ಒಳಭಾಗದಲ್ಲಿ ಹೆಬ್ಬರಳನ್ನು ಒತ್ತಿ ಮತ್ತು ಉಳಿದ ಬೆರಳುಗಳನ್ನು ಅದರ ಮೇಲೆ ಮಡಿಚಿ ನಂತರ ಮೃದುವಾಗಿ ಮುಷ್ಠಿಯನ್ನು ಕಟ್ಟಿ. ಆದಿ ಮುದ್ರೆಯನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದರೂ ಅಭ್ಯಾಸ ಮಾಡಹುದು. ಆದರೂ ಉತ್ತಮ ಫಲಿತಾಂಶಕ್ಕಾಗಿ, ಪದ್ಮಾಸನ ಭಂಗಿಯಲ್ಲಿ ಕುಳಿತು ತೊಡೆಗಳ ಮೇಲೆ ಮುಷ್ಠಿ ಕಟ್ಟಿದ ಕೈ ಇಟ್ಟು ವಿಶ್ರಾಂತಿ ಮಾಡುವ ಮೂಲಕ ಶಾಂತ ವಾತಾವರಣದಲ್ಲಿ ಮುದ್ರೆಯನ್ನು ಅಭ್ಯಾಸ ಮಾಡಲು ಶಿಫಾರಸು ಮಾಡಲಾಗಿದೆ. ನೀವು ಅಧಿಕ ರಕ್ತದೊತ್ತಡ ಅಥವಾ ಅಸ್ತಮಾದಿಂದ ಬಳಲುತ್ತಿದ್ದಿರೆ ಆದಿ ಮುದ್ರೆಯನ್ನು ಮಾಡಬೇಡಿ.

ಆದಿ ಮುದ್ರೆಯ ಪ್ರಯೋಜನಗಳು :

  • ನರಮಂಡಲಕ್ಕೆ ವಿಶ್ರಾಂತಿಯನ್ನು ನೀಡುತ್ತದೆ.
  • ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ.
  • ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  • ಗೊರಕೆಯನ್ನು ಕಡಿಮೆ ಮಾಡುತ್ತದೆ.
  • ದೇಹದ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Gyan Mudra : ಜ್ಞಾನ ಮುದ್ರೆ : ನಿದ್ರಾಹೀನತೆ ಮತ್ತು ಮಧುಮೇಹ ಸಮಸ್ಯೆಗೆ ಉತ್ತಮ ಪರಿಹಾರ !!

ಇದನ್ನೂ ಓದಿ : Ghee Benefits : ತುಪ್ಪದ ಪ್ರಯೋಜನ ಕೇಳಿದ್ರೆ ಬೆರಗಾಗ್ತಿರಾ

(Adi mudra can help us destress)

Comments are closed.