Good Mental Health : ನಿಮ್ಮ ಮಕ್ಕಳ ಮನಸ್ಸು ಅರಿತುಕೊಳ್ಳಿ; ಮಕ್ಕಳ ಮಾನಸಿಕ ವಿಕಸನದಲ್ಲಿ ಪೋಷಕರ ಪಾತ್ರ

ಮಕ್ಕಳ ಉತ್ತಮ ಮಾನಸಿಕ ಆರೋಗ್ಯವು (Good Mental Health) ಧನಾತ್ಮಕ ಮತ್ತು ಆರೋಗ್ಯಕರ ಸಮಾಜಿಕ ಜೀವನ ಕಟ್ಟಿಕೊಡಲು ಸಹಾಯಮಾಡುತ್ತದೆ. ಇದು ಮಕ್ಕಳು ಸರಿಯಾಗಿ ಆಲೋಚನೆ ಮಾಡಲು, ಸಾಮಾಜಿಕತೆಯನ್ನು ಬೆಳೆಸಿಕೊಳ್ಳಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಅವಕಾಶ ಮಾಡಿಕೊಡುತ್ತದೆ. ಅವರ ಮಾನಸಿಕ ಆರೋಗ್ಯವು ಅವರು ತಮ್ಮನ್ನು, ಇತರರನ್ನು ಮತ್ತು ಪ್ರಪಂಚವನ್ನು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ತಿಳಿಯಪಡಿಸುತ್ತದೆ. ಉತ್ತಮ ಮಾನಸಿಕ ಆರೋಗ್ಯ ಹೊಂದಿರುವ ಮಗು ಅದರ ಜೀವನದಲ್ಲಿ ಬರುವ ಸವಾಲುಗಳನ್ನು, ಆತಂಕಗಳನ್ನು, ಒತ್ತಡವನ್ನು ಧನಾತ್ಮಕ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗುತ್ತದೆ. ಪರಿಣಾಮಕಾರಿ ಸಂವಹನ ಮತ್ತು ಸವಾಲುಗಳನ್ನು ಧನಾತ್ಮಕವಾಗಿ ನಿಭಾಯಿಸುವುದು ಇವುಗಳು ಪೋಷಕರು ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಮಕ್ಕಳ ಉತ್ತಮ ಮಾನಸಿಕ ಆರೋಗ್ಯವು ಅವರನ್ನು ಸತ್ಪ್ರಜೆಯನ್ನಾಗಿಸುತ್ತದೆ. ಜೀವನದಲ್ಲಿ ಯಾವುದೇ ಕಠಿಣ ಸಂದರ್ಭದಲ್ಲೂ ಮಾನಸಿಕ ಸ್ವಾಸ್ಥ್ಯ ಹಾಳಗದಂತೆ ಕಾಪಾಡಿಕೊಳ್ಳಲು ನೆರವಾಗುತ್ತದೆ. ಹಾಗಾದರೆ ಮಕ್ಕಳಲ್ಲಿ ಉತ್ತಮ ಮಾನಸಿಕ ಆರೋಗ್ಯವಿದೆ ಎಂದು ತಿಳಿಯುವದಾದರೂ ಹೇಗೆ? ಅದಕ್ಕೆ ಈ ಕೆಳಗಿನ ಅಂಶಗಳು ಸಹಾಯ ಮಾಡುತ್ತದೆ.

ಮಕ್ಕಳು ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಿದ್ದಾರೆ ಎಂಬುದನ್ನು ಈ ಕೆಳಗಿನ ಅಂಶಗಳು ಹೇಳುತ್ತದೆ:

  • ಧನಾತ್ಮಕ ಮತ್ತು ಸಂತೋಷದ ಸ್ವಯಂ ಪ್ರಜ್ಞೆ
  • ಕಲಿಕೆಯಲ್ಲಿ ಧನಾತ್ಮಕ ಚಿಹ್ನೆಗಳನ್ನು ತೋರಿಸುವುದು ಮತ್ತು ಅದರಲ್ಲಿ ಆನಂದವನ್ನು ಕಾಣುವುದು
  • ಕಷ್ಟ ಸಮಯದಲ್ಲಿ ತಮ್ಮ ಮೇಲೆ ಮತ್ತು ಇತರರ ಮೇಲೆ ದಯೆಯನ್ನು ತೋರಿಸುವುದು
  • ಕುಟುಂಬ ಮತ್ತು ಗೆಳೆಯರ ಜೊತೆಗೆ ಉತ್ತಮ ಸಂಬಂಧ ಹೊಂದಿರುವುದು
  • ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವುದು
  • ದುಃಖ, ಚಿಂತೆ, ಅಥವಾ ಕೋಪ ಮುಂತಾದ ಭಾವನೆಗಳನ್ನು ಸಮಪರ್ಕವಾಗಿ ನಿರ್ವಹಿಸುವುದು

ಇವೆಲ್ಲವುಗಳನ್ನು ಪೋಷಕರು ಗಮನಿಸಿದರೆ ಮಾತ್ರ ಮಕ್ಕಳಲ್ಲಿ ಉತ್ತಮ ಮಾನಸಿಕ ಆರೋಗ್ಯ ಕಾಣಲು ಸಾಧ್ಯ. ಮಕ್ಕಳನ್ನು ಸರಿಯಾಗಿ ಅರ್ಥೈಯಿಸಿಕೊಳ್ಳುವುದನ್ನು ಪೋಷಕರು ಕಲಿಯಬೇಕಾಗಿರುವುದ ತೀರಾ ಅಗತ್ಯ.

ಇದನ್ನೂ ಓದಿ : Caffeine Cause Acne : ಕೆಫಿನ್‌ ನಿಂದ ಮೊಡವೆ ಹೆಚ್ಚಾಗುತ್ತದೆಯೇ; ತಜ್ಞರು ಹೇಳುವುದಾದರೂ ಏನು….

ಇದನ್ನೂ ಓದಿ : Cracked Heels : ಈ ಮನೆಮದ್ದುಗಳನ್ನು ಟ್ರೈ ಮಾಡಿ; ಒಡೆದ ಹಿಮ್ಮಡಿಗಳಿಗೆ ಬೈ ಹೇಳಿ

(Good Mental Health know your child and ensure your child is in excellent mental health)

Comments are closed.