Guava : ಮುಖದ ಸೌಂದರ್ಯಕ್ಕೆ ಪೇರಳೆ ತಿನ್ನಿ

0
  • ರಕ್ಷಾ ಬಡಾಮನೆ

ಪೇರಳೆ ಹಣ್ಣು ಔಷಧೀಯ ಗುಣವನ್ನು ಹೊಂದಿದೆ. ಪೇರಳೆ ಹಣ್ಣಿನಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ ಮತ್ತು ಮಿನರಲ್ಸ್ ಇದೆ. ಮಾತ್ರವಲ್ಲ ಕಬ್ಬಣದಂಶದ ಜೊತೆಗೆ ಕ್ಯಾಲ್ಸಿಯಂ ಮೆಗ್ನೇಶಿಯಂ, ಫಾಸ್ಪರಸ್ ಮತ್ತು ಪೊಟ್ಯಾಶಿಯಂ ಅನ್ನು ಒಳಗೊಂಡಿದೆ. ಪೇರಳೆ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ವೃದ್ದಿಸುತ್ತದೆ.

ಪೇರಳೆ ಹಣ್ಣನ್ನು ಗರ್ಭಿಣಿ ಮಹಿಳೆಯರು ಸೇವನೆ ಮಾಡಬಾರದು ಅಂತಾ ಹಲವರು ಹೇಳ್ತಾರೆ. ಆದರೆ ಪೇರಳೆ ಹಣ್ಣಿನಲ್ಲಿರುವ ಕಾರ್ಟಿಸೋಲ್ ಅಂಶ ಗರ್ಭದಲ್ಲಿರೋ ಮಗುವಿನ ಬೆಳವಣಿಗೆಗೆ ಅತೀ ಅಗತ್ಯ. ಪೇರಳೆ ಹಣ್ಣಿ ಒತ್ತಡವನ್ನು ನಿವಾರಿಸೋ ಗುಣವನ್ನು ಹೊಂದಿರುವುದರಿಂದ ನಿತ್ಯವೂ ಪೇರಳೆ ಹಣ್ಣನ್ನು ತಿನ್ನುತ್ತಾ ಬಂದ್ರೆ ಮಹಿಳೆಯರು ಒತ್ತಡ ಮತ್ತು ಗರ್ಭಿಣಿ ಸ್ತ್ರೀಯರ ನರ ಮಂಡಲವನ್ನು ಶಾಂತಿಗೊಳಿಸುತ್ತದೆ.

ಪೇರಳೆ ಹಣ್ಣಿನಲ್ಲಿ ಲೆಕೊಪಿನ್ ಮತ್ತು ವಿಟಮಿನ್ ಸಿ ಅಂಶವಿದೆ. ಹೀಗಾಗಿ ಸೀಬೆ ಹಣ್ಣು ಕ್ಯಾನ್ಸರ್ ಕ್ಯಾನ್ಸರ್ ಉಂಟು ಮಾಡುವ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಕಾರಿಯಾಗಿದೆ.

ಸೀಮೆ ಹಣ್ಣನ್ನು ಬೆಳಗಿನ ಅವಧಿಯಲ್ಲಿ ಸೇವನೆ ಮಾಡುವುದರಿಂದ ಹೆಚ್ಚು ಅನುಕೂಲವನ್ನು ಪಡೆಯಬಹುದಾಗಿದೆ. ಪೇರಳೆ ಹಣ್ಣು ಮಾತ್ರವಲ್ಲ ಪೇರಳೆಯ ಎಲೆಯಲ್ಲಿಯೂ ಕೂಡ ಔಷಧೀಯ ಗುಣವಿದ್ದು, ವಿಟಮಿನ್ ಸಿ ಹೇರಳ ಪ್ರಮಾಣದಲ್ಲಿದೆ. ಪೇರಳೆ ಎಲೆಯನ್ನು ಗಂಧದೊಂದಿಗೆ ಬೆಳೆಸಿ ಹಚ್ಚುವುದರಿಂದ ಅನೇಕ ಚರ್ಮ ರೋಗಗಳನ್ನು ತಡೆಯುತ್ತದೆ.

ಬಿಸಿಯಾದ ನೀರಿನಲ್ಲಿ ಪೇರಳೆ ಎಲೆಗಳನ್ನು ತಂದು ಚೆನ್ನಾಗಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಅಲರ್ಜಿ ಸಮಸ್ಯೆ ಪರಿಹಾರವಾಗಲಿದೆ.

ಬಾಯಿಯ ಆರೋಗ್ಯಕ್ಕೆ ಪೇರಳೆ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ. ಅದರಲ್ಲೂ ಹಲ್ಲುಗಳು ಹೊಳೆಯುವಂತೆ ಮಾಡುವ ಶಕ್ತಿ ಪೇರಳೆಗೆ ಇದೆ. ಪೇರಳೆಯ ಹಣ್ಣಿಗೆ ಉಪ್ಪನ್ನು ಹಾಕಿ ಚೆನ್ನಾಗಿ ಅಗಿಯಬೇಕು. ಹೀಗೆ ಮಾಡುವುದರಿಂದ ಹಲ್ಲುಗಳು ಹೊಳೆಯುವುದರ ಜೊತೆಗೆ ಮೌತ್ ಪ್ರಶ್ನರ್ ರೀತಿಯಲ್ಲಿ ಕಾರ್ಯನಿರ್ವಹಿಸಿ, ಬಾಯಿಯಲ್ಲಿ ವಾಸನೆ ಬಾರದಂತೆ ನೋಡಿಕೊಳ್ಳುತ್ತದೆ.

ಮುಖದಲ್ಲಿ ಮೊಡವೆ ಆಗಿದೆ ಅನ್ನೋ ಚಿಂತೆ ನಿಮ್ಮನ್ನು ಕಾಡುತ್ತಿದ್ರೆ, ರಾಸಾಯನಿಕಯುಕ್ತ ಔಷಧ ಬಳಕೆಯನ್ನು ನಿಲ್ಲಿಸಿ ಪೇರಳೆ ಹಣ್ಣಿನ ಮೊರೆ ಹೋಗಬಹುದು. ಪೇರಳೆ ಹಣ್ಣಿನ ಎಲೆಯ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಸುಮಾರು 15 ನಿಮಿಸಗಳ ನಂತರ ತೊಳೆಯುವುದರಿಂದ ಮುಖ ಹೊಳೆಯುತ್ತದೆ. ಮಾತ್ರವಲ್ಲ ಮೊಡವೆಯೂ ಕಡಿಮೆಯಾಗುತ್ತದೆ. ಪೇರಳೆ ನಮ್ಮ ಆರೋಗ್ಯಕ್ಕೆ ಪೂರಕವಾಗಿದ್ದು, ಹೆಚ್ಚು ಹೆಚ್ಚು ಪೇರಳೆ ಸೇವನೆಯಿಂದ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದಾಗಿದೆ.

Eat Guava for the beauty of the face

Leave A Reply

Your email address will not be published.