Watar Drinking Habits : ನೀರು ಕುಡಿಯುವ ವಿಚಾರದಲ್ಲಿ ಮಾಡಲೇಬೇಡಿ ಈ ತಪ್ಪು..!

Watar Drinking Habits :ನೀರು ಕುಡಿಯೋದು ಒಂದು ಸಾಮಾನ್ಯ ವಿಚಾರವಾಗಿದೆ. ಮನೆಯಲ್ಲಿ, ಶಾಲೆಯಲ್ಲಿ, ಕಚೇರಿಯಲ್ಲಿ ಹೀಗೆ ಎಲ್ಲೆಂದರಲ್ಲಿ ನಾವು ನೀರನ್ನು ಕುಡಿಯುತ್ತೇವೆ. ನೀರು ಕುಡಿಯಲೆಂದೇ ಸ್ಥಳ ಅಥವಾ ಸಮಯವನ್ನು ನಿಗದಿ ಮಾಡೋದಿಲ್ಲ. ಅಲ್ಲದೇ ನೀರು ಕುಡಿಯುವ ಬಗ್ಗೆ ಯಾರೂ ಅತಿಯಾಗಿ ತಲೆಕೆಡಿಸಿಕೊಳ್ಳೋದೂ ಇಲ್ಲ. ಆದರೆ ಇಲ್ಲಿ ನಾವು ಎಡವುತ್ತೇವೆ. ನೀರನ್ನು ಕುಡಿಯಲು ನಾವು ಮಾಡುವ ಸಣ್ಣ ತಪ್ಪು ಕೂಡ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.


ಮನುಷ್ಯನದ ದೇಹವು 60 ಪ್ರತಿಶತ ನೀರನ್ನು ಒಳಗೊಂಡಿದೆ. ಆದ್ದರಿಂದ ನೀರನ್ನು ಕುಡಿಯಲು ನೀವು ಸರಿಯಾದ ಮಾರ್ಗವನ್ನು ಬಳಕೆ ಮಾಡಲೇಬೇಕು.

ಊಟದ ನಡುವೆ ನೀರು ಕುಡಿಯಬೇಡಿ. ಇದು ಜೀರ್ಣಕ್ರಿಯೆಯನ್ನು ಹದಗೆಡಿಸುತ್ತದೆ. ಇದು ಆ್ಯಸಿಡಿಟಿ ಉಂಟು ಮಾಡುತ್ತದೆ.ಅಲ್ಲದೇ ಇನ್ನೂ ಅನೇಕ ಅನಾನುಕೂಲತೆಗಳಿವೆ.ಹೀಗಾಗಿ ನೀವು ಊಟಕ್ಕೂ ಅರ್ಧ ಗಂಟೆಗೂ ಮುನ್ನ ನೀರು ಕುಡಿಯಬೇಕು. ಊಟವಾಗಿ 90 ನಿಮಿಷಗಳ ಕಾಲ ನೀರು ಕುಡಿಯಬಾರದು.


ಅತಿಯಾಗಿ ನೀರು ಕುಡಿದರೆ ದೇಹದಲ್ಲಿರುವ ಕ್ಯಾಲೋರಿ ಕರಗುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತೆ ಎಂದು ಹೇಳು್ತ್ತಾರೆ. ಹೀಗಾಗಿ ಅನೇಕರು ಅತಿಯಾಗಿ ನೀರು ಕುಡಿಯುತ್ತಾರೆ.ಬಾಯಾರಿಕೆ ಇಲ್ಲದೇ ಇದ್ದರೂ ಸಹ ನಾವು ನೀರು ಕುಡಿಯುತ್ತೇವೆ. ಇದು ನಿಜಕ್ಕೂ ಹಾನಿಕಾರಕವಾಗಿದೆ. ನಿಮಗೆ ಬಾಯಾರಿಕೆಯಾದಾಗ ಮಾತ್ರ ನೀರನ್ನು ಸರಿಯಾಗಿ ಕುಡಿಯಲು ಸಾಧ್ಯ. ಗಂಟಲಿನ ಮೂಲಕ ನೀರನ್ನು ನುಂಗುವುದು ಸುಲಭವಲ್ಲ. ಹೀಗಾಗಿ ನೀವು ಈ ಸಂದರ್ಭದಲ್ಲಿ ಒತ್ತಾಯದಿಂದ ನೀರು ಕುಡಿಯುತ್ತೀರಾ. ಇದರಿಂದ ನಿಮ್ಮ ಸೋಡಿಯಂ ಅಂಶದಲ್ಲಿ ಸಮಸ್ಯೆ ಉಂಟಾಗಲಿದೆ. ಇದು ಕಿಡ್ನಿ ಸಮಸ್ಯೆ ಹಾಗೂ ರಕ್ತದೊತ್ತಡ ಸಮಸ್ಯೆ ಉಂಟು ಮಾಡಬಹುದು.


ಫ್ರೀಜ್​ ಮಾಡಲಾದ ನೀರನ್ನು ಎಂದಿಗೂ ಕುಡಿಯಬಾರದು. ತಣ್ಣನೆಯ ನೀರು ಹೊಟ್ಟೆಯಲ್ಲಿರುವ ಹೊಟ್ಟೆಯಲ್ಲಿರುವ ಅಗ್ನಿ ತತ್ವದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಇದರಿಂದ ಜೀರ್ಣಕ್ರಿಯೆ ಹದಗೆಡುತ್ತದೆ.

health tips 5 times you shouldnt drink water here are right watar drinking habits

ಇದನ್ನು ಓದಿ : White hair Beauty Tips : ಅವಧಿಗೂ ಮುನ್ನವೇ ಕೂದಲು ಬೆಳ್ಳಗಾಗುತ್ತಿದೆಯೇ ? ಹಾಗಾದರೆ ಈ ಪದಾರ್ಥ ತಪ್ಪದೇ ಸೇವಿಸಿ

ಇದನ್ನೂ ಓದಿ : Coffee Chicory : ಕಾಫಿಯಲ್ಲಿರೋ ಚಿಕೋರಿ ಬಗ್ಗೆ ನಿಮಗೆಷ್ಟು ಗೊತ್ತು

Comments are closed.