Vastu Tips : ಮಕ್ಕಳು ಓದಿನ ಕಡೆಗೆ ಗಮನ ನೀಡುತ್ತಿಲ್ಲವೇ..? ಹಾಗಾದರೆ ಮನೆಯಲ್ಲಿ ಮಾಡಿ ಈ ಬದಲಾವಣೆ

Vastu Tips :ಪ್ರತಿಯೊಂದು ಕುಟುಂಬದಲ್ಲಿಯೂ ಮಕ್ಕಳಿಗೆ ಮಹತ್ವದ ಸ್ಥಾನವಿರುತ್ತದೆ. ಪೋಷಕರಿಗೆ ಭವಿಷ್ಯದ ಆಶಾಕಿರಣವೆಂಬಂತೆ ಮಕ್ಕಳು ಇರುತ್ತಾರೆ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಅವರಿಗೆ ಉಜ್ವಲ ಭವಿಷ್ಯವನ್ನು ನೀಡಬೇಕು ಎಂಬ ಆಸೆ ಪ್ರತಿಯೊಬ್ಬ ಪೋಷಕರಿಗೂ ಇರುತ್ತದೆ.ಹೀಗಾಗಿ ಅವರ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರು ಇನ್ನಿಲ್ಲದ ಹರಸಾಹಸವನ್ನು ಮಾಡುತ್ತಾರೆ .

ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ನೀಡಬೇಕು ಎಂದು ಪೋಷಕರು ಹರಸಾಹಸ ಪಟ್ಟರೂ ಸಹ ಕೆಲವು ಮಕ್ಕಳು ಓದಿನ ಕಡೆಗೆ ಮನಸ್ಸೇ ಮಾಡೋದಿಲ್ಲ. ನೀವು ಎಷ್ಟೇ ದೊಡ್ಡ ಶಾಲೆಗೆ ಕಳುಹಿಸಿ ಲಕ್ಷಗಟ್ಟಲೇ ಫೀಸು ಸುರಿದರೂ ಸಹ ಮಕ್ಕಳ ಓದಿನಲ್ಲಿ ಪ್ರಗತಿ ಕಾಣೋದೇ ಇಲ್ಲ. ಇಂತಹದೊಂದು ಸಮಸ್ಯೆಯಿಂದ ಬಹುತೇಕ ಪೋಷಕರು ಚಿಂತಾಕ್ರಾಂತರಾಗುತ್ತಾರೆ.

ಸಮಸ್ಯೆ ಯಾವುದೇ ಆಗಿರಲಿ. ನೀವು ಮೂಲದಲ್ಲಿ ಪರಿಹಾರ ಹುಡುಕದ ಹೊರತು ಅದಿಕ್ಕೆ ಪರಿಹಾರ ಸಿಗೋದೇ ಇಲ್ಲ. ಹೀಗಾಗಿ ನೀವು ಕೂಡ ಮಕ್ಕಳಿಗೆ ಓದು ಎಂದು ಪೀಡಿಸುವ ಬದಲು ಇನ್ನು ಬೇರೆಲ್ಲ ಸಮಸ್ಯೆ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಮಗುವಿನ ಸ್ಟಡಿ ರೂಮಿನಲ್ಲಿರುವ ವಾಸ್ತು ದೋಷಗಳನ್ನು ಪರಿಹರಿಸಿದಲ್ಲಿ ನೀವು ಖಂಡಿತವಾಗಿಯೂ ಈ ಸಮಸ್ಯೆಯಿಂದ ಪಾರಾಗಲಿದ್ದೀರಿ.

ಮಕ್ಕಳ ಕೋಣೆಯಲ್ಲಿ ಇಡುವ ಸ್ಟಡಿ ಟೇಬಲ್​​ನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿಯೇ ಇಡಬೇಕು. ಅಧ್ಯಯನ ಮಾಡುವ ವೇಳೆಯಲ್ಲಿ ಮಕ್ಕಳ ಮುಖವು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಿ. ಇದರಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಲಿದೆ. ಅಲ್ಲದೇ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಲಿದೆ. ಮಕ್ಕಳು ಓದಿ ಆದ ಬಳಿಕ ಪುಸ್ತಕಗಳನ್ನು ಇಡುವ ಸ್ಥಳವು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಿ. ಪುಸ್ತಕಗಳನ್ನು ಇಡುವ ಜಾಗವು ಎಂದಿಗೂ ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳಿ.
ಯಾವ ಮನೆಯಲ್ಲಿ ಪ್ರತಿದಿನ ಗಣೇಶನಿಗೆ ಪೂಜೆ ಸಲ್ಲುತ್ತದೆಯೋ ಅಂತಹ ಮನೆಗಳಲ್ಲಿರುವ ಮಕ್ಕಳ ಬುದ್ಧಿಶಕ್ತಿ ಹಾಗೂ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ.

ಮಕ್ಕಳು ಓದಿಕೊಳ್ಳುವ ಕೋಣೆಯಲ್ಲಿ ಎಂದಿಗೂ ಸಂತೋಷಮಯವಾಗಿ ಇರುವಂತ ಚಿತ್ರಗಳನ್ನು ಅಳವಡಿಸಿ. ಮಹಾನ್​ ವ್ಯಕ್ತಿಗಳ ಫೋಟೋವನ್ನು ಮಕ್ಕಳ ಕೋಣೆಯಲ್ಲಿ ಇರಿಸಿ. ಇದರಿಂದ ಅವರಿಗೆ ಸ್ಪೂರ್ತಿ ಸಿಗಲಿದೆ. ಕೋಣೆಯ ಪೂರ್ವ ದಿಕ್ಕಿನಲ್ಲಿ ಸರಸ್ವತಿ ಫೋಟೋವನ್ನು ಅಳವಡಿಸಿ. ಮಕ್ಕಳ ಕೋಣೆಯಲ್ಲಿ ಯಾವಾಗಲೂ ಸಂತೋಷವನ್ನು ಸಂಕೇತಿಸುವ ಚಿತ್ರಗಳನ್ನು ಹೊಂದಿರಬೇಕು. ಮಹಾನ್ ವ್ಯಕ್ತಿಗಳ ಫೋಟೋಗಳನ್ನು ಅವರ ಕೊಠಡಿಗಳಲ್ಲಿ ಇರಿಸಿ. ಇದರಿಂದ ಅವರು ತಮ್ಮಂತೆಯೇ ಆಗಲು ಯೋಚಿಸುತ್ತಾರೆ. ನೀವು ಕೋಣೆಯ ಪೂರ್ವ ದಿಕ್ಕಿನಲ್ಲಿ ಮಾ ಸರಸ್ವತಿಯ ಚಿತ್ರವನ್ನು ಹಾಕಬಹುದು.

ಇದನ್ನು ಓದಿ :Tirupati Govindaraja Temple : ಅಭಿಷೇಕವೇ ನಡೆಯದ ವಿಗ್ರಹ : ತಿರುಪತಿಯಲ್ಲಿದೆ ಅಪರೂಪದ ದೇಗುಲ

ಇದನ್ನೂ ಓದಿ: Winter Hair Care Tips : ಚಳಿಗಾಲದಲ್ಲಿ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಮುಕ್ತಿಗೆ ಇಲ್ಲಿದೆ ಮನೆಮದ್ದು

(vastu tips vastu tips for children to be top in studies what are the things to be kept in mind in a sturdy room)

Comments are closed.