Health Tips : ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ವಾಸಿಯಾಗಲಿದೆ ಈ ಮಾರಕ ಕಾಯಿಲೆ..!

ನೆಲ್ಲಿಕಾಯಿಗೆ ಆರ್ಯುವೇದದಲ್ಲಿ ತುಂಬಾನೇ ಮಹತ್ವವಿದೆ. ನೆಲ್ಲಿಕಾಯಿಯಲ್ಲಿರುವ(Health Tips) ಅಗಾಧ ಪ್ರಮಾಣದ ಪೋಷಕಾಂಶಗಳ ಕಾರಣ ಇದನ್ನು ಸೂಪರ್​ ಫ್ರೂಟ್​ ಎಂದು ಕರೆಯಲಾಗುತ್ತದೆ . ಆಯುರ್ವೇದದ ಅನೇಕ ಔಷಧಿಗಳಲ್ಲಿ ನೆಲ್ಲಿಕಾಯಿಯನ್ನು ಬಳಕೆ ಮಾಡಲಾಗುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್​ ಸಿ ಅಂಶವು ಅಗಾಧ ಪ್ರಮಾಣದಲ್ಲಿದೆ. ಇದರ ಸೇವನೆಯಿಂದ ನಿಮ್ಮ ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ ಹಾಗೂ ಜೀರ್ಣಕ್ರಿಯೆಯು ಅತ್ಯಂತ ಸರಾಗವಾಗಿ ಇರಲಿದೆ. ಇದನ್ನು ಹೊರತುಪಡಿಸಿ ನೆಲ್ಲಿಕಾಯಿಯ ಸೇವನೆಯು ಎಷ್ಟೆಲ್ಲ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ನೋಡೋಣ:


ನೆಲ್ಲಿಕಾಯಿ ಸೇವನೆಯ ಪ್ರಯೋಜನಗಳು :

  • ನೆಲ್ಲಿಕಾಯಿಯಲ್ಲಿ ಆ್ಯಂಟಿಆಕ್ಸಿಡಂಟ್​ ಪ್ರಮಾಣ ಅತ್ಯಧಿಕವಾಗಿದೆ
  • ನೆಲ್ಲಿಕಾಯಿ ಸೇವನೆಯಿಂದ ದೇಹಕ್ಕೆ ವಿಟಾಮಿನ್​ ಸಿ, ಎ ಹಾಗೂ ಇ ಅಗಾಧಪ್ರಮಾಣದಲ್ಲಿ ಸಿಗಲಿದೆ.
  • ನೆಲ್ಲಿಕಾಯಿಯಲ್ಲಿ ಫೈಬರ್ ಅಗಾಧ ಪ್ರಮಾಣದಲ್ಲಿದೆ. ಇದರಿಂದ ಜೀರ್ಣಶಕ್ತಿ ಸುಧಾರಿಸುತ್ತದೆ
  • ನೆಲ್ಲಿಕಾಯಿಯಲ್ಲಿ ಪ್ರೋಟಿನ್​, ಕೊಬ್ಬು, ಫೈಬರ್​, ಸಕ್ಕರೆ ಅಂಶ ಹಾಗೂ ಕಾರ್ಬೋಹೈಡ್ರೇಟ್​ ಇದೆ.
  • ನೆಲ್ಲಿಕಾಯಿಯಲ್ಲಿ ಕಬ್ಬಿಣಾಂಶ ಹಾಗೂ ಕ್ಯಾಲ್ಶಿಯಂ ಅಂಶ ಕೂಡ ಇದೆ.

  • ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ :

  • ಯಕೃತ್ತಿನ ಆರೋಗ್ಯಕ್ಕೆ ನೆಲ್ಲಿಕಾಯಿ ಅತ್ಯಂತ ಸಹಕಾರಿ. ದೇಹದಲ್ಲಿರುವ ಟಾಕ್ಸಿನ್​ ಹೊರಹಾಕುವ ಶಕ್ತಿ ನೆಲ್ಲಿಕಾಯಿಯಲ್ಲಿ ಇರುವುದರಿಂದ ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ. ಹೈಪರ್ಲಿಪಿಡೆಮಿಯಾ ಹಾಗೂ ಜೀರ್ಣಕ್ರಿಯೆ ಸಂಬಂಧಿ ಕಾಯಿಲೆಗಳ ನಿವಾರಣೆಗೆ ನೆಲ್ಲಿಕಾಯಿ ಸಹಕಾರಿ. ಲಿವರ್ ಫೆಲ್ಯೂರ್​ನ್ನೂ ನೆಲ್ಲಿಕಾಯಿ ತಡೆಗಟ್ಟುತ್ತದೆ. ಆದರೆ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕು ಅಂದರೆ ನೆಲ್ಲಿಕಾಯಿ ಹೇಗೆ ಸೇವಿಸಬೇಕು ಎಂಬುದೂ ನಿಮಗೆ ತಿಳಿದಿರಬೇಕು :

ಫ್ಯಾಟಿ ಲಿವರ್​​ ಸಮಸ್ಯೆಯನ್ನು ನೀವು ಹೊಂದಿದ್ದರೆ ನೀವು ಈ ರೀತಿಯಾಗಿ ನೆಲ್ಲಿಕಾಯಿ ಸೇವಿಸಬಹುದು:
ನೀವು ಯಾವುದೇ ರೂಪದಲ್ಲಿ ನೆಲ್ಲಿಕಾಯಿಯನ್ನು ಸೇವನೆ ಮಾಡಬಹುದು. ಆದರೆ ಯಕೃತ್ತಿನ ಸಮಸ್ಯೆಯನ್ನು ನೀವು ಹೊಂದಿದ್ದರೆ ಹಸಿ ನೆಲ್ಲಿಕಾಯಿಯನ್ನು ನೀವು ಉಪ್ಪಿನ ಜೊತೆ ಸೇವಿಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್​ ಸೇವಿಸಿ. ನೆಲ್ಲಿಕಾಯಿ ಚಹವನ್ನೂ ಸೇವಿಸಬಹುದು. ನೆಲ್ಲಿಕಾಯಿ ಚಹ ಮಾಡಲು ನೆಲ್ಲಿಕಾಯಿಯನ್ನು ಕತ್ತರಿಸಿ ರಾತ್ರಿಯಿಡೀ ನೆನೆಸಿಡಿ. ಬೆಳಗ್ಗೆ ನೀರಿಗೆ ಈ ನೆಲ್ಲಿಕಾಯಿ, ಶುಂಠಿ, ಏಲಕ್ಕಿ ಹಾಗೂ ಚೆನ್ನಾಗಿ ಕುದಿಸಿ ಕುಡಿಯಿರಿ.

Health Tips: Consume ‘Amla’ Daily If You Are Suffering From Fatty Liver

ಇದನ್ನು ಓದಿ : turmeric on skin : ಅರಿಶಿಣವನ್ನು ಮುಖಕ್ಕೆ ಲೇಪಿಸುವ ಮುನ್ನ ನೆನಪಿನಲ್ಲಿಡಿ ಈ ಮುಖ್ಯ ವಿಚಾರ..!

ಇದನ್ನೂ ಓದಿ : remedies to deal with dandruff : ಚಳಿಗಾಲದಲ್ಲಿ ಡ್ಯಾಂಡ್ರಫ್​​ನಿಂದ ಪಾರಾಗಲು ಬಳಸಿ ಈ ಮನೆಮದ್ದು..!

Comments are closed.