Menstrual Health :ನೆನಪಿಡಿ: ಮುಟ್ಟಿನ ದಿನಗಳಲ್ಲಿ ಮಹಿಳೆಯರು ಮಾಡಲೇಬಾರದು ಈ ತಪ್ಪು..!

ಮುಟ್ಟಿನ ದಿನಗಳು(Menstrual Health) ಅಂದರೆ ಮಹಿಳೆಯರ ಪಾಲಿಗೆ ಕಷ್ಟದ ದಿನಗಳು ಎಂದು ಹೇಳಿದರೆ ತಪ್ಪಾಗಲಾರದು. ಹೊಟ್ಟೆ ನೋವು, ರಕ್ತಸ್ರಾವ, ಮೋಡ್​ ಸ್ವಿಂಗ್ಸ್​ ಹೀಗೆ ನಾನಾ ಸಮಸ್ಯೆಗಳಿಂದ ಮಹಿಳೆಯು ಬಲಳುವ ಕಾಲವಿದೆ. ಈ ಸಂದರ್ಭದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳವುದರ ಜೊತೆಗೆ ಸ್ವಚ್ಛತೆಯನ್ನು ಕೂಡ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ.ಋತುಚಕ್ರದ ಸಂದರ್ಭದಲ್ಲಿ ಕೆಲ ಮಹಿಳೆಯರು ಮಾಡುವ ಸಾಮಾನ್ಯ ತಪ್ಪುಗಳ ಪಟ್ಟಿ ಇಲ್ಲಿದೆ ನೋಡಿ :


ಯೋನಿಯ ಅತಿಯಾದ ಶುಚಿಗೊಳಿಸುವಿಕೆ :


ಯೋನಿಯನ್ನು ಸ್ವಚ್ಛಗೊಳಿಸಲು ಕೇವಲ ನೀರು ಮಾತ್ರ ಸಾಲುವುದಿಲ್ಲ. ಹೀಗಾಗಿ ಅನೇಕ ಮಹಿಳೆಯರು ಸಾಬೂನು ಹಾಗೂ ಶವರ್​ ಜೆಲ್​ಗಳನ್ನು ಬಳಕೆ ಮಾಡಿಬಿಡುತ್ತಾರೆ. ಆದರೆ ಇವುಗಳಲ್ಲಿ ಇರುವ ರಾಸಾಯನಿಕಗಳು ಯೋನಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು. ಹೀಗಾಗಿ ನೀವು ಯಾವುದರಿಂದ ಯೋನಿಯನ್ನು ಸ್ವಚ್ಛಗೊಳಿಸುತ್ತೀರಾ ಎಂಬುದು ಅತ್ಯಂತ ಮುಖ್ಯವಾಗಿದೆ.


ನೋವುನಿವಾರಕ ಮಾತ್ರೆಗಳ ಸೇವನೆ:


ಮುಟ್ಟಿನ ಸಂದರ್ಭದಲ್ಲಿ ಅನೇಕರು ನೋವು ನಿವಾರಕ ಮಾತ್ರೆಗಳ ಮೊರೆ ಹೋಗುತ್ತಾರೆ. ನೀವು ಈ ರೀತಿ ಮಾಡುತ್ತಿದ್ದರೆ ಮೊದಲು ಈ ಅಭ್ಯಾಸವನ್ನು ಬಿಟ್ಟುಬಿಡಿ. ಮುಟ್ಟಿನ ಸಂದರ್ಭದಲ್ಲಿ ಸೇವಿಸುವ ನೋವು ನಿವಾರಕ ಮಾತ್ರೆಗಳು ದೇಹದಲ್ಲಿನ ಒಳ್ಳೆಯ ಬಾಕ್ಟೀರಿಯಾಗಳನ್ನು ನಾಶಮಾಡಿಬಿಡುತ್ತದೆ. ಇದರಿಂದ ಮೂತ್ರಪಿಂಡ, ಯಕೃತ್ತು ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ಉಂಟು ಮಾಡಿಬಿಡಬಹುದು. ನಿಮಗೆ ಅತಿಯಾದ ನೋವಿದ್ದರೆ 2 ಲವಂಗ ಹಾಗೂ 2 ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. ಇದರಿಂದ ನಿಮಗೆ ಹಿತ ಎನಿಸಲಿದೆ. ಬಿಸಿ ನೀರಿನ ಬಳಕೆ ಕೂಡ ಒಳ್ಳೆಯದು.


ಸ್ಯಾನಿಟರಿ ಪ್ಯಾಡ್​​​ಗಳನ್ನು ಕಾಲ ಕಾಲಕ್ಕೆ ಬದಲಾವಣೆ ಮಾಡದಿರುವುದು :


ಇದು ಮಹಿಳೆಯರು ಮಾಡುವ ಅತ್ಯಂತ ಸಾಮಾನ್ಯ ತಪ್ಪುಗಳಲ್ಲಿ ಮೊದಲನೆಯದಾಗಿದೆ. ಅತೀ ಹೆಚ್ಚು ಸಮಯಗಳ ಕಾಲ ಒಂದೇ ನ್ಯಾಪ್ಕಿನ್​ ಬಳಕೆ ಮಾಡುವುದರಿಂದ ಯೋನಿಗೆ ಗಾಳಿಯ ಸಂಚಾರ ನಿಲ್ಲುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ. ಇದು ಯೋನಿಯಲ್ಲಿ ಸೋಂಕು ಅಥವಾ ಅಲರ್ಜಿಗೆ ಕಾರಣವಾಗುತ್ತದೆ. ಹೀಗಾಗಿ ಪ್ರತಿ ಮೂರು ಗಂಟೆಗೆ ಪ್ಯಾಡ್​ನ್ನು ಬದಲಾಯಿಸಿ.

Menstrual Health: THESE mistakes made by women during periods can be harmful

ಇದನ್ನು ಓದಿ : almond with honey benefits : ಬಾದಾಮಿ ಹಾಗೂ ಜೇನುತುಪ್ಪ ಸೇವನೆ ಹಿಂದಿದೆ ಆರೋಗ್ಯದ ಗುಟ್ಟು

ಇದನ್ನೂ ಓದಿ: turmeric on skin : ಅರಿಶಿಣವನ್ನು ಮುಖಕ್ಕೆ ಲೇಪಿಸುವ ಮುನ್ನ ನೆನಪಿನಲ್ಲಿಡಿ ಈ ಮುಖ್ಯ ವಿಚಾರ..!

Comments are closed.