Health Tips : ಎಣ್ಣೆ ಅಥವಾ ಮಸಾಲೆಯುಕ್ತ ಖಾದ್ಯಗಳನ್ನು ಸೇವಿಸಿದ ಮೇಲೆ ಅಸಹಜ ಎನಿಸುತ್ತಿದ್ದೆಯೇ? ಹಾಗಾದರೆ ಈ ರೀತಿ ಮಾಡಿ

ತಿನ್ನುವ ಬಯಕೆ ಮತ್ತು ಆರೋಗ್ಯವಂತರಾಗಿರಲು ನಡೆಸುವ ಪ್ರಯತ್ನ ಇವೆರಡರ ನಡುವೆ ಶಾಶ್ವತ ಘರ್ಷಣೆ ನಡೆಯುತ್ತಲೇ ಇರುತ್ತದೆ (Health Tips). ಮತ್ತು ಯಾವಾಗಲೂ ಜಯಿಸುವುದು ನಮ್ಮ ತಿನ್ನುವ ಬಯಕೆಗಳೇ. ಖಾರ ಮತ್ತು ಎಣ್ಣೆಯ ಪದಾರ್ಥಗಳು ಯಾವಾಗಲೂ ರುಚಿಯೇ ಆದರೆ ಅವೆರಡೂ ಒಂದೇ ರೀತಿಯಲ್ಲಿ ಹೊಟ್ಟೆ ನೋವು, ಲೂಸ್‌ ಮೂಶನ್‌ ಮತ್ತು ಇತರೆ ಆರೋಗ್ಯ ಸಂಬಂಧಿ ಪರಿಣಾಮಗಳನ್ನು ಬೀರುತ್ತವೆ. ಅತಿಯಾದ ಊಟದಿಂದ ಹೊಟ್ಟೆಯಲ್ಲಿ ರಾತ್ರಿಯಿಡೀ ಅಸ್ವಸ್ಥತೆಯ ಅನುಭವ ನೀಡುತ್ತದೆ. ಆದ್ದರಿಂದ ನಿದ್ರಿಸುವ ಮೊದಲು ಸೇವಿಸಿದ ಆಹಾರವು ಜೀರ್ಣವಾಗುವುದು ಬಹು ಮುಖ್ಯ.

ನೀವು ಸೇವಿಸಿದ ಎಣ್ಣೆ ಮತ್ತು ಮಸಾಲೆಯುಕ್ತ ಆಹಾರಗಳು ಸುಲಭವಾಗಿ ಜೀರ್ಣವಾಗಲು ಮತ್ತು ಅಸಹಜತೆಯನ್ನು ನೀಗಿಸಲು ಇಲ್ಲಿದೆ ಕೆಲವು ಟಿಪ್ಸ್‌.

  • ಎಣ್ಣೆ ಅಥವಾ ಜಿಡ್ಡಿನ ಆಹಾರಗಳನ್ನು ಸೇವಿಸಿದ ಮೇಲೆ ಬಿಸಿ ನೀರು ಕುಡಿಯಿರಿ. ಬಿಸಿ ನೀರು ಹೊಟ್ಟೆಯಲ್ಲಿಯ ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ.
  • ಅತಿಯಾದ ಊಟದ ನಂತರ ಒಂದು ಸಣ್ಣ ವೇಗದ ವಾಕ್‌ ಮಾಡಿ. ಇದು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ವಾಕಿಂಗ್‌ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದರಲ್ಲಿ ಇದೂ ಒಂದಾಗಿದೆ. ಕನಿಷ್ಟ 100 ಹೆಜ್ಜೆಗಳ ಒಂದು ವಾಕ್‌ ಅತಿ ಮುಖ್ಯವಾಗಿದೆ.

ಇದನ್ನೂ ಓದಿ : Black Pepper: ಕಾಳು ಮೆಣಸಿನ ಈ ಭಾರಿ ಪ್ರಯೋಜನ ತಿಳಿದರೆ ನೀವೂ ಡಯಟ್‌ನಲ್ಲಿ ಇದನ್ನು ಖಂಡಿತ ಸೇರಿಸಿಕೊಳ್ತೀರಾ!

  • ಊಟದ ನಂತರ ಹೊಟ್ಟ ಭಾರವೆನಿಸುತ್ತಿದ್ದರೆ ಕಾಳು ಮೆಣಸು ಮತ್ತು ಓಂ ಕಾಳು ಪುಡಿಯನ್ನು ಬಿಸಿ ನೀರಿಗೆ ಸೇರಿಸಿ ಕುಡಿಯಿರಿ. ಇದರಿಂದ ಆರಾಮವೆನಿಸುತ್ತದೆ. ಎದೆಯುರಿ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆಗಳನ್ನು ನಿವಾರಿಸುತ್ತದೆ. ಸಿಲರಿಯ ಜೊತೆ ಕಾಳು ಮೆಣಸನ್ನು ದಿನನಿತ್ಯ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುವುದು.
  • ಓಂ ಕಾಳು ಮತ್ತು ಬ್ಲಾಕ್‌ ಸಾಲ್ಟ್‌ ಹೊಟ್ಟೆಯ ತೊಂದರೆಗಳಿಗೆ ಪರಿಣಾಮಕಾರಿಯಾಗಿದೆ. ಒಂದು ಗ್ಲಾಸ್‌ನಲ್ಲಿ ಓಂ ಕಾಳುಗಳನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಬ್ಲಾಕ್‌ ಸಾಲ್ಟ್‌, ನೀರು ಸೇರಿಸಿ ಕುದಿಸಿ. ನಂತರ ಅದೆಲ್ಲವನ್ನೂ ಕುಡಿಯಿರಿ.

ಇದನ್ನೂ ಓದಿ : healthy lifestyle :ಅತ್ಯುತ್ತಮ ಜೀವನಶೈಲಿಗಾಗಿ ಅನುಸರಿಸಿ ಈ ಪಂಚ ಸೂತ್ರ..!

(Health Tips for after eating oily and spicy food)

Comments are closed.