ಗಣೇಶ ಪ್ರಿಯ ಗರಿಕೆ ಹಿತ್ತಲಿನ ಶ್ರೇಷ್ಠ ಔಷಧಿ !

0
  • ರಕ್ಷಾ ಬಡಾಮನೆ

ಮನೆ ಅಂಗಳವೇ ಮದ್ದಿನ ವನ ಎಂದರೆ ತಪ್ಪಾಗದು. ಕಳೆ ಎಂದು ಎಷ್ಟು ಕಿತ್ತೆಸೆದರೂ ಮತ್ತೆ ಮತ್ತೆ ರಾಶಿ ರಾಶಿ ಬೆಳೆಯುವ ಗರಿಕೆಯನ್ನು ನಾವು ಹುಡುಕುವುದು ಗಣೇಶ ಹಬ್ಬದಂದು ಅಥವಾ ಗ್ರಹಣದ ದಿನ. ಎಷ್ಟೋ ಜನರಿಗೆ ಇದೊಂದು ಔಷದಿ ಅನ್ನೋದೇ ತಿಳಿದಿಲ್ಲ. ಗರಿಕೆಯು ಔಷಧಿಯಾಗಿಯು ಕೂಡ ಅದರದ್ದೇ ಅದ ಮಹತ್ವ ಪಡೆದಿದೆ.

ಮೂತ್ರನಾಳದ ಸೋಂಕು, ಪ್ರಾಸ್ಟೇಟ್ ಗ್ರಂಥಿಯ ಊತ ,ರಕ್ತ ಬೇಧಿ ಗಳಿಗೆ ಗರಿಕೆಯಿಂದ ಪರಿಣಾಮಕಾರಿ ಚಿಕಿತ್ಸೆ ಮಾಡಲಾಗುತ್ತದೆ. ಗರಿಕೆ ಎಲೆ, ದಂಟು, ಬೇರು ಎಲ್ಲವೂ ಔಷದಿಯುಕ್ತ. ಅದನ್ನು ಆಮೂಲಾಗ್ರ ತಂದು ಶುಚಿ ಗೊಳಸಿ ಅರೆದು ರಸಹಿಂಡಿ, ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಪನಕದಂತೆ ಕುಡಿಯುದರಿಂದ ದಾಹವಷ್ಟೆ ಅಲ್ಲದೆ ನಿಶ್ಯಕ್ತಿ, ರಕ್ತಹೀನತೆ, ಪಿತ್ತ , ದೋಷಗಳು ಶಮನವಾಗುತ್ತದೆ.

ದಿನವೂ ನಿಯಮಿತವಾಗಿ ಗರಿಕೆ ರಸದ ಸೇವನೆಯಿಂದ ಮಧುಮೇಹ ರೋಗಿಗಳ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣ ಮಾಡಬಹುದು. ಗರಿಕೆ ರಸದ ಸಮಪಾಲು ಅಮೃತಬಳ್ಳಿ ರಸಕ್ಕೆ ಅಷ್ಟೆ ಹಾಲನ್ನು ಸೇರಿಸಿ ಕುದಿಸಿ ತೈಲ ತಯಾರಿಸಿ ಇದನ್ನು ಎಳೆಯ ಮಕ್ಕಳ ಮೈಗೆ ಲೇಪಿಸಿ ಸ್ನಾನ ಮಾಡಿಸಿದರೆ ರಕ್ತದೋಷದಿಂದ ಬರುವ ತುರಿಕಜ್ಜಿ, ಕೆಂಪಿನ ಬಾಧೆಗಳು ಗುಣವಾಗುತ್ತದೆ.

ಗರಿಕೆ ತೈಲದೊಂದಿಗೆ ನೆಲ್ಲಿಕಾಯಿ ರಸವು ಸೇರಿಸಿ ಕೆನ್ನೆಗೆ ಒರೆಸುವುದರಿಂದ ಕೆನ್ನೆ ಸಿಡಿಯುವ ಸಮಸ್ಯೆ ಶಮನವಾಗುತ್ತದೆ. ಗರಿಕೆ ರಸದೊಂದಿಗೆ ನೆಲ್ಲಿಕಾಯಿ ರಸ ಮತ್ತು ತೇದಿದ ಶ್ರೀಗಂಧವನ್ನು ಸೇರಿಸಿಕೊಂಡು ತೈಲ ತಯಾರಿಸಿ ತಲೆಗೆ ಹಚ್ಚುವುದರಿಂದ ತಲೆ ಹುಣ್ಣುಗಳು ಮಾಯವಾಗುತ್ತದೆ.

ಮಕ್ಕಳ ಜ್ವರಕ್ಕೆ ಗರಿಕೆ ರಸ ಮತ್ತು ಜೇಷ್ಠ ಮಧುವಿನ ಚೂರ್ಣ ಸೇರಿಸಿ ಕಷಾಯವನ್ನು ಕುಡಿಸಿದರೆ ಉತ್ತಮ ಫಲತಾಂಶ ಸಿಗುತ್ತದೆ. ಮಲ ಮೂತ್ರವು ಬಂಧಿಯಾದರೆ ಅದರ ನಿವಾರಣೆಗೆ ಗರಿಕೆ ರಸ, ನಿಂಬೆರಸ ಮಾಜ್ಜಿಗೆಗಳ್ಳನ್ನು ಸಮಪ್ರಮಾಣದಲ್ಲಿ ಬೆರೆಸಿ ಕುಡಿಸಿದರೆ ಗುಣವಾಗುತ್ತದೆ.

ಬೆಂಕಿಯ ಆಘಾತದಿಂದ ಗುಳ್ಳೆ ಬಂದು ಕೀವಾಗಿದ್ದರೆ ಗರಿಕೆ ರಸದಿಂದ ಗುಣ ವಾಗುತ್ತದೆ ಹೇಗೆಂದರೆ ಗರಿಕೆ ರಸ ಮತ್ತು ಅದರ ನಾಲ್ಕನೇ ಒಂದಂಶ ತೆಂಗಿನ ಎಣ್ಣೆ, ಬಿಳಿ ದಾಸವಾಳದ ಮೋಗ್ಗಿಂದ ಮಾಡಿದ ತೈಲ ಸಿದ್ದೌಶಧಿ. ಗರಿಕೆ ಹುಲ್ಲಿನ್ನು ಬೆಂಕಿಯಲ್ಲಿ ಸುಟ್ಟು ಅದರ ಕರಕನ್ನು ತೆಂಗಿನೆಣ್ಣೆಯಲ್ಲಿ ಕಲಸಿ ಮುಲಾಮಿನಂತೆ ಹಚ್ಚುವುದರಿಂದ ಗಾಯದ ಕಲೆಗಳು ಮಾಯವಾಗುತ್ತದೆ.

ಗ್ರಹಣದ ದಿನ ಗರಿಕೆಗಳನ್ನು ಬಳಸುವುದರಿಂದ ಗ್ರಹಣ ಕಾಲದಲ್ಲಿ ಬರುವ ವಿಕಿರಿಣ ಬರುವ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಆದ್ದರಿಂದ ಗ್ರಹಣದ ದಿನ ಗರಿಕೆಯನ್ನೂ ಉಪಯೋಗಿಸುತ್ತಾರೆ. ಗರಿಕೆ ಚರ್ಮ ರೋಗಗಳನ್ನು ಗುಣಪಡಿಸುತ್ತದೆ. ಅದರೊಂದಿಗೆ ಕೃಷ್ಣ ತುಳಸಿ ಉಪ್ಪು ಮಾಜ್ಜಿಗೆಯೊಡನೆ ಅರೆದು ಲೇಪಿಸಿದರೆ ತುರಿಕೆ ,ಕಜ್ಜಿ, ವೃಣ,ದದ್ದು, ಗಜಕರ್ಣ ಗಳಿಗೆ ಲೇಪಿಸಿದರೆ ಚರ್ಮ ರೋಗ ವಾಸಿಯಾಗುತ್ತದೆ. ಹೆಚ್ಚು ಶ್ರಮವಿಲ್ಲದೆ ಹೆಚ್ಚು ಖರ್ಚು ಇಲ್ಲದೆ ತಂಪಿರುವ ಜಾಗದಲ್ಲಿ ಸೊಂಪಾಗಿ ಬೆಳೆಯುವ ಗರಿಕೆ ಹಿತ್ತಲಿನ ಶ್ರೇಷ್ಠ ಔಷಧಿಯೇ ಸರಿ.

Leave A Reply

Your email address will not be published.