Health Tips : ನಿಮಗಿದು ಗೊತ್ತಾ; ಆಹಾರ ಸೇವಿಸಿ ಎಷ್ಟು ಸಮಯದ ನಂತರ ಔಷಧಿ ತೆಗೆದುಕೊಳ್ಳುವುದು ಸರಿ ಎಂದು

ಈಗಿನ ಧಾವಂತದ ಬದುಕಿನಲ್ಲಿ ಹೆಚ್ಚಿನವರು ಒಂದಲ್ಲ ಒಂದು ಕಾಯಿಲಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯ (Health Tips) ಸರಿಪಡಿಸಿಕೊಳ್ಳಲು ಔಷಧಿ (Medicine) ಗಳನ್ನು ಸೇವಿಸುತ್ತಲೇ ಇರುತ್ತಾರೆ. ಆದರೆ ಆಹಾರ (Food) ಸೇವಿಸಿ ಎಷ್ಟು ಸಮಯದ ನಂತರ ಔಷಧಿ ತೆಗೆದುಕೊಳ್ಳುವುದು ಎಂಬ ಪ್ರಶ್ನೆ ಹಲವರಲ್ಲಿ ಇದೆ. ಔಷಧಿ ಮತ್ತು ಆಹಾರಗಳನ್ನು ಯಾವುದೇ ಸಮಯದ ಅಂತರವನ್ನು ಇಟ್ಟುಕೊಳ್ಳದೇ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಅದಕ್ಕಾಗಿಯೇ ಆಹಾರ ಮತ್ತು ಔಷಧಿಗಳ ನಡುವೆ ಇರಬೇಕಾದ ಸಮಯದ ಅಂತರವನ್ನು ಇಲ್ಲಿ ಹೇಳಿದ್ದೇವೆ.

Health Tips : ಆಹಾರ ಸೇವಿಸಿ ಎಷ್ಟು ಸಮಯದ ನಂತರ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ?

ವೈದ್ಯರು ಹೆಚ್ಚಿನ ಔಷಧಿಗಳ ಏನಾದರೂ ತಿಂದ ನಂತರವೇ ತೆಗೆದುಕೊಳ್ಳಿ ಎಂದು ಸಲಹೆ ನೀಡುತ್ತಾರೆ. ಅನೇಕ ಕಾಯಿಲೆಗಳಲ್ಲಿ ಸೇವಿಸುವ ಹೆಚ್ಚಿನ ಔಷಧಿಗಳು ಹೊಟ್ಟೆಯೊಳಗೆ ಹೋಗುತ್ತವೆ ಮತ್ತು ಅಸಿಡಿಟಿ ಅಥವಾ ಅಲ್ಸರ್‌ ನಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಆದ್ದರಿಂದ ವೈದ್ಯರು ಕೂಡ ಏನನ್ನಾದರೂ ತಿಂದ ನಂತರವೇ ಹೆಚ್ಚಿನ ಔಷಧಿಗಳನ್ನು ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಇದಲ್ಲದೆ, ಕೆಲವು ಔಷಧಿಗಳು ನೀರಿನಲ್ಲಿ ಬೇಗನೆ ಕರಗುತ್ತವೆ. ಅಂತಹ ಔಷಧಿಗಳನ್ನು ವೈದ್ಯರು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುಲು ಹೇಳಿತ್ತಾರೆ ಏಕೆಂದರೆ ಅವುಗಳು ಆಹಾರದೊಂದಿಗೆ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.

ಇದನ್ನೂ ಓದಿ : inflammation: ದೇಹದಲ್ಲಿನ ಉರಿಯೂತ ಸಮಸ್ಯೆಗೆ ಹೇಳಿ ಗುಡ್‌ ಬೈ

ಔಷಧಿಗಳನ್ನು ತೆಗೆದುಕೊಳ್ಳುವ ಸರಿಯಾದ ಕ್ರಮವೇನು?
ಔಷಧಿಗಳನ್ನು ತೆಗೆದುಕೊಳ್ಳುವಾಗ ವೈದ್ಯರು ಹೇಳಿರುವುದನ್ನು ಪಾಲಿಸುವುದು ಅಗತ್ಯವಾಗಿದೆ. ವಾಸ್ತವವಾಗಿ ಕೆಲವು ಔಷಧಿಗಳ ಪರಿಣಾಮವು ಅವುಗಳನ್ನು ತೆಗೆದುಕೊಂಡು ಅರ್ಧ ಗಂಟೆಯಿಂದ ಒಂದು ಗಂಟೆಯ ನಂತರ ಪರಿಣಾಮವನ್ನು ಬೀರುತ್ತವೆ. ಅದಕ್ಕಾಗಿಯೇ ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಮೊದಲು, ಯಾವ ಸಮಯ ಮತ್ತು ಆಹಾರದ–ಔಷಧಿಗಳ ಮಧ್ಯೆ ಎಷ್ಟು ಸಮಯದ ಅಂತರವಿರಬೇಕು ಎಂದು ಕೇಳಿ ತಿಳಿಯುವುದು ಅಗತ್ಯವಾಗಿದೆ. ಔಷಧಿಗಳು ನಮಗೆ ಯಾವುದೇ ಹಾನಿ ಮಾಡಬಾರದು. ಔಷಧಿಯನ್ನು ವೈದ್ಯರು ಹೇಳಿದ ಸಮಯಕ್ಕೆ ತೆಗೆದುಕೊಳುವುದು ಬಹಳ ಮುಖ್ಯವಾಗಿದೆ.

ಇದನ್ನೂ ಓದಿ : Christmas Gifts For Children: ಮಕ್ಕಳಿಗೆ ಕ್ರಿಸ್‌ಮಸ್‌ ಗಿಫ್ಟ್‌ ಕೊಡಬೇಕಾ; ಇಲ್ಲಿದೆ ಬೆಸ್ಟ್‌ ಐಡಿಯಾಗಳು

ಇದನ್ನೂ ಓದಿ : Dates And Almond Recipe:ಖರ್ಜೂರ, ಬಾದಾಮಿ ಉಂಡೆ ಟ್ರೈ ಮಾಡಿ : ಆರೋಗ್ಯ ವೃದ್ದಿಸಿಕೊಳ್ಳಿ

(Health Tips on how long right to take medicine after eating food)

Comments are closed.