Acidity Tips : ಹೀಗೆ ಮಾಡಿದ್ರೆ ಅಸಿಡಿಟಿ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ

0
  • – ರಕ್ಷಾ ಬಡಾಮನೆ

ಅಸಿಡಿಟಿ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಅಸಿಡಿಟಿಯಿಂದ ತಪ್ಪಿಸಿಕೊಳ್ಳೋದಕ್ಕೆ ಇನ್ನಿಲ್ಲದ ಪ್ರಯತ್ನಗಳನ್ನೂ ಮಾಡುತ್ತೇವೆ. ಯಾವುದೇ ಔಷಧ ಮಾಡಿದ್ರೂ ಅಸಿಡಿಟಿ (Acidity Tips) ಸಮಸ್ಯೆಯಿಂದ ಶಾಶ್ವತವಾದ ಮುಕ್ತಿ ಪಡೆಯೋದು ಕಷ್ಟಸಾಧ್ಯ.

ಸಾಮಾನ್ಯವಾಗಿ ಸೇವಿಸುವ ಆಹಾರವನ್ನು ಪಚನ ಮಾಡಲು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದರಿಂದ ಸಣ್ಣ ಕರಳು, ಯಕೃತ್ತು ಸ್ರವಿಸುವ ರಸಗಳು ಪಚನವನ್ನು ಮುಂದುವರಿಸುತ್ತವೆ. ಊಟದಲ್ಲಿರುವ ಸಾರಾಂಶವನ್ನು ದೇಹಕ್ಕೆ ಹೀರಿಕೊಂಡು, ತ್ಯಾಜ್ಯವನ್ನು ಮುಂದೆ ತಳ್ಳುತ್ತದೆ. ಮತ್ತೆ ದೊಡ್ಡ ಕರಳಿನ ಗ್ರಂಥಿಗಳು ತ್ಯಾಜ್ಯ ವಸ್ತುವಿನಲ್ಲಿನ ನೀರಿನಾಂಶವನ್ನು ಹೀರಿಕೊಂಡು ಮಲವನ್ನು ಗಟ್ಟಿಗೊಳಿಸುತ್ತವೆ.

ಇದು ಸಕಾಲಿಕವಾಗಿ ದೇಹದಿಂದ ಹೊರಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ರವಿಸುವ ರಸಗಳ ಪ್ರಮಾಣ, ಅಂಗಗಳ ಒಳಗೋಡೆಯ ಸಾಮರ್ಥ್ಯ, ಆಹಾರವನ್ನು ಮುಂದೆ ತಳ್ಳುವ ಕ್ಷಮತೆ ಮತ್ತು ಇವುಗಳಿಗೆ ಪೂರಕವಾಗಿರುವ ನರತಂತುಗಳ ಹೊಂದಾಣಿಕೆ ಅತಿಮುಖ್ಯ.ಈ ಪ್ರಕ್ರಿಯೆಯಲ್ಲಾಗುವ ವ್ಯತ್ಯಾಸವೇ ಸಮಸ್ಯೆಯನ್ನು ತಂದೊಡ್ಡುತ್ತದೆ. ಅತಿಯಾಗಿ ನೋವಿನ ಮಾತ್ರೆ ಸೇವಿಸುವುದರಿಂದ ಜಠರದ ಗೋಡೆಯಲ್ಲಿ ಊತವಾಗಿ ಹುಣ್ಣಾಗುತ್ತದೆ. ಅದರಿಂದ ನೋವು ಮತ್ತು ಆಮ್ಲದ ಸ್ರವಿಸುವಿಕೆಯಲ್ಲಿ ಲೋಪ ಉಂಟಾಗುತ್ತದೆ. ಇದರಿಂದಾಗಿ ಅಜೀರ್ಣ, ಹೊಟ್ಟೆಯುರಿ, ವೇದನೆ ಉಂಟಾಗುತ್ತದೆ. ಇಂತಹ ಅಸಿಡಿಟಿ ಸಮಸ್ಯೆಗೆ ಮನೆ ಮದ್ದು ಮಾಡಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಶುಂಠಿ : ನಾವು ತಿನ್ನುವ ಆಹಾರ ಕ್ರಮದಿಂದ ಉಂಟಾಗುವ ಅಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸಲು ಶುಂಠಿ ಉತ್ತಮ. ಶುಂಠಿಯಲ್ಲಿ ಆನೇಕ ಆರೋಗ್ಯ ಪ್ರಯೋಜನಗಳಿವೆ. ಶುಂಠಿ ಅತ್ಯುತ್ತಮ ಜೀರ್ಣಕಾರಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಹೊಟ್ಟೆಯಲ್ಲಿರುವ ಹುಳಿ ಆಮ್ಲಗಳನ್ನು ತಟಸ್ಥಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ತಾಜಾ ಶುಂಠಿಯ ತುಂಡನ್ನು ಅಥವಾ ಒಂದು ಚಮಚ ಶುಂಠಿ ರಸವನ್ನು ದಿನಕ್ಕೆ ಎರಡು ಮೂರು ಬಾರಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ( Acidity ) ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ತುಳಸಿ ಎಲೆ : ಮನೆಯಲ್ಲಿ ಸುಲಭವಾಗಿ ಸಿಗುವ ತುಳಸಿ ಎಲೆ ಅಸಿಡಿಟಿಗೆ ಉತ್ತಮ ಮನೆ ಮದ್ದು. 3 ರಿಂದ 4 ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಕುಡಿಯಬೇಕು. ತುಳಸಿ ಎಲೆಯಲ್ಲಿರು ಕಾರ್ಬಿನೇಟ್ ಅಂಶ ಅಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಲವಂಗ: ಲವಂಗವನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಕೆ ಮಾಡುತ್ತೇವೆ. ಲವಂಗ ಪ್ರಕೃತಿಯಲ್ಲಿ ಕಾರ್ಮಿನೇಟಿವ್ ಅಂಶವನ್ನು ಹೊಂದಿದ್ದು, ಜೀರ್ಣಾಂಗವ್ಯೂಹದ ಆಮ್ಲಿಯತೆಯನ್ನು ತಡೆಯುತ್ತದೆ. ಪುಡಿಮಾಡಿದ ಲವಂಗ ಮತ್ತು ಏಲಕ್ಕಿಯನ್ನು ಸಮಾನ ಪ್ರಮಾಣದಲ್ಲಿ ಪುಡಿ ಮಾಡಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸಬಹುದು.ಹೋಗಲಾಡಿಸಲು ಸಹಕರಿಸುತ್ತದೆ.

ದಾಲ್ಚಿನ್ನಿ : ದಾಲ್ಚಿನ್ನಿಯನ್ನು ಚಹಾಕ್ಕೆ ಹಾಕಿ ಕುಡಿಯುವುದರಿಂದ ಆಸಿಡಿಟಿ ಕಡಿಮೆಯಾಗುತ್ತದೆ. ದಾಲ್ಚಿನ್ನಿ ಜೀರ್ಣಕ್ರಿಯೆಯನ್ನು ವೃದ್ಧಿಸುವ ಗುಣವನ್ನು ಹೊಂದಿರುವುದರ ಜೊತೆಗೆ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ. ಹೀಗಾಗಿ ದಾಲ್ಚಿನ್ನಿ ಬಳಕೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು. .

ಬಾಳೆಹಣ್ಣು : ಜೀರ್ಣಕ್ರಿಯೆ ಸುಲಭವಾಗಲಿ ಅಂತಾ ಸಾಮಾನ್ಯವಾಗಿ ಬಾಳೆಹಣ್ಣು ತಿನ್ನುತ್ತಾರೆ. ಆರೋಗ್ಯಕ್ಕೆ ಉತ್ತಮವೆನಿಸಿರೋ ಬಾಳೆಹಣ್ಣಿಗೆ ಅಸಿಡಿಟಿಯನ್ನು ನಿವಾರಿಸೋ ಶಕ್ತಿಯೂ ಇದೆ. ಬಾಳೆಹಣ್ಣು ನೈಸರ್ಗಿಕ ಅಂಟಾಸಿಡ್ಗಳನ್ನು ಹೊಂದಿದೆ. ಇದು ಆಸಿಡ್ ರಿಫ್ಲಕ್ಸ್ ವಿರುದ್ದ ಕಾರ್ಯನಿರ್ವಹಿಸುತ್ತದೆ. ಆಮ್ಲಿಯತೆಯನ್ನು ತೊಡೆದು ಹಾಕಲು ಬಾಳೆಹಣ್ಣು ಸರಳ ಮನೆಮದ್ದು.

ಮಜ್ಜಿಗೆ : ಆಯುರ್ವೇದದಲ್ಲಿ ಮಜ್ಜಿಗೆ ವಿಶೇಷ ಸ್ಥಾನಮಾನವಿದೆ. ಮಸಾಲೆಯುಕ್ತ ಆಹಾರನ್ನು ನೀವು ಸೇವಿಸಿದಾಗ ಒಂದು ಲೋಟ ಮಜ್ಜಿಗೆ ಕುಡಿಯಿರಿ ಇದರಿಂದ ಅಸಿಡಿಟಿ ನಿವಾರಣೆಯಾಗುತ್ತದೆ.

ಬೆಲ್ಲ : ನಿತ್ಯೋಪಯೋಗಿಯಾಗಿರೋ ಬೆಲ್ಲದಲ್ಲಿ ಹೆಚ್ಚಿನ ಮೆಗ್ನೇಶೀಯಂ ಅಂಶದಿಂದಾಗಿ ಬೆಲ್ಲವು ಕರುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ ಅಲ್ಲದೆ ಬೆಲ್ಲ ತಿನ್ನುವುದರಿಂದ ಅಸಿಡಿಟಿ ನಿವಾರಣೆಯಾಗುತ್ತದೆ.

ಇದನ್ನೂ ಓದಿ : ನೆಲ್ಲಿಕಾಯಿ ತಿನ್ನಿ ಕೊರೊನಾದಿಂದ ದೂರವಿರಿ ! ಹಸಿರು ಹೊನ್ನಿನ ಮಹತ್ವ ನಿಮಗೆ ಗೊತ್ತಾ?

ಇದನ್ನೂ ಓದಿ : ಸ್ವಚ್ಛತೆಯ ಭರದಲ್ಲಿ ಲ್ಯಾಪ್​ಟಾಪ್​​ನ್ನೂ ತೊಳೆದ ಪತ್ನಿ..! ಮಹಿಳೆಯ ಶುಚಿತ್ವದ ಕಾಯಿಲೆ ಕಂಡು ದಂಗಾದ ಪತಿರಾಯ

(Use this tips acidity does not get too close to you)

Leave A Reply

Your email address will not be published.