Puneeth Raj kumar : ಪುನೀತ್‌ ರಾಜ್‌ ಕುಮಾರ್‌ ಮನೆಗೆ ನಿರ್ಮಲಾನಂದ ಶ್ರೀ ಭೇಟಿ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Raj kumar) ನಾಡನ್ನು,ಅಭಿಮಾನಿಗಳನ್ನು ಅಗಲಿ ಒಂದು ತಿಂಗಳಾದಗರೂ ಇನ್ನು ಶೋಕ ಸಾಗರದಂತೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಪುನೀತ್ ಅಗಲಿ ಕೆ ಯಿಂದ ನೊಂದಿರುವ ಕುಟುಂಬಕ್ಕೆ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಶ್ರೀಗಳು ಸಾಂತ್ವನ ಹೇಳಿದ್ದಾರೆ.

ಸದಾಶಿವ ನಗರದಲ್ಲಿರುವ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ನಿರ್ಮಲಾನಂದ ಶ್ರೀಗಳು ಸಚಿವ ಡಾ.ಸುಧಾಕರ್ ಜೊತೆ ಇಂದು ಭೇಟಿ ನೀಡಿದರು. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಪುತ್ರಿ ಹಾಗೂ ಕುಟುಂಬಕ್ಕೆ ಶ್ರೀಗಳು ಸಾಂತ್ವನ ಹೇಳಿದರು. ಪುನೀತ್ ಸಾಮಾಜಿಕ ಕಾರ್ಯ, ಸಾಧನೆ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಉಲ್ಲೇಖಿಸಿದ ಶ್ರೀಗಳು ಕುಟುಂಬದ ಸದಸ್ಯರಿಗೆ ದುಃಖ ಸಹಿಸುವ ಶಕ್ತಿತಂದುಕೊಳ್ಳುವಂತೆ ಧೈರ್ಯ ಹೇಳಿದ್ದಾರೆ.

ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಲಾನಂದನಾಥಶ್ರೀಗಳು, ಡಾ.ರಾಜ್ ಕುಟುಂಬಕ್ಕೂ ಆದಿ ಚುಂಚನಗಿರಿ‌ಮಠಕ್ಕೂ ಅವಿನಾಭಾವ ಸಂಬಂಧವಿದೆ. ಪುನೀತ್ ರಾಜ್ ಕುಮಾರ್ ನಿಧನ ತುಂಬಲಾಗದ ನಷ್ಟ. ಈ ನಷ್ಟವನ್ನು ಭರಿಸುವುದು ಕಷ್ಟ. ಆದರೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದೇನೆ. ಈ ನಾಡಿಗೆ ಪುನೀತ್ ರಾಜ್ ಕುಮಾರ್ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಿದೆ‌. ಅವರ ಕುಟುಂಬಕ್ಕೆ ಹಾಗೂ ನಾಡಿನ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ,ಸಹಿಸುವ ಶಕ್ತಿ ಬರಲಿ ಎಂದು ಆಶಿಸುತ್ತೇನೆ ಎಂದರು.

ಸಚಿವ ಡಾ.ಸುಧಾಕರ್ ಮಾತನಾಡಿ,ನಿರ್ಮಾಲನಂದ ಶ್ರೀಗಳ ಜೊತೆಯಲ್ಲಿ ಪುನೀತ್ ರಾಜ್ ಕುಮಾರ್ ಕುಟುಂಬ ಸದಸ್ಯರ ಭೇಟಿಯಾಗಿದ್ವಿ. ಅವರಿಗೆ ಸಾಂತ್ವನ ಹೇಳಿದ್ದೇವೆ.ಅವರ ಅಗಲಿಕೆ ದಿನ ಕೂಡ ಶ್ರೀಗಳು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ರು.ಅವರ ಕುಟುಂಬದ ಜೊತೆ ಶ್ರೀಗಳ ಬಳಗ ಇದೆ.ಕಾಲ ಭೈರವೇಶ್ವರನ ಕೃಪಾ ಕಟಾಕ್ಷ ಅವರಿಗೆ ಇರಬೇಕು.ಶೀಘ್ರವೇ ಮಠಕ್ಕೆ ಬರುವಂತೆಯೂ ಅವರಿಗೆ ಆಹ್ವಾನ ನೀಡಿದ್ದಾರೆ.ಸ್ವಾಮೀಜಿ ಗಳ ಆಶೀರ್ವಾದ ಅವರ ಮೇಲೆ ಸದಾ ಇರುತ್ತದೆ ಎಂದಿದ್ದಾರೆ.

ಪುನೀತ್ ಒಂದು ತಿಂಗಳ ಪೂಜಾ ಕಾರ್ಯವನ್ನು ಮೊನ್ನೆ ಕುಟುಂಬ ವರ್ಗ ಸಮಾಧಿ ಬಳಿ‌ನೆರವೇರಿಸಿದ್ದು, ಪ್ರತಿನಿತ್ಯ ಪುನೀತ್ ನೂರಾರು ಅಭಿಮಾನಿಗಳು ಸಮಾಧಿ ಬಳಿ ಭೇಟಿ ನೀಡುತ್ತಲೇ ಇದ್ದಾರೆ. ನಿನ್ನೆಯಷ್ಟೇ ಅಲ್ಲೂ ಸಿರಿಶ್ ಕೂಡ ಪುನೀತ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.

ಇದನ್ನೂ ಓದಿ : ಸ್ವಚ್ಛತೆಯ ಭರದಲ್ಲಿ ಲ್ಯಾಪ್​ಟಾಪ್​​ನ್ನೂ ತೊಳೆದ ಪತ್ನಿ..! ಮಹಿಳೆಯ ಶುಚಿತ್ವದ ಕಾಯಿಲೆ ಕಂಡು ದಂಗಾದ ಪತಿರಾಯ

ಇದನ್ನೂ ಓದಿ : Omicron emergency meeting : ಓಮಿಕ್ರಾನ್‌ ಪತ್ತೆ ಹಿನ್ನೆಲೆ : ತುರ್ತು ಸಭೆ ಕರೆದ ಸಿಎಂ ಬಸವರಾಜ್‌ ಬೊಮ್ಮಾಯಿ

(Nirmalananda Swamiji Visit Puneeth Raj kumar House)

Comments are closed.